Karnataka Polls; ವರುಣದಲ್ಲಿ ಒಳಏಟಿನ ಆತಂಕ: ಬಿಎಸ್ ವೈ ಆಪ್ತನ ಮನೆಗೆ ಸೋಮಣ್ಣ ಭೇಟಿ
Team Udayavani, Apr 14, 2023, 1:10 PM IST
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಸಚಿವ ವಿ.ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಒಳ ಏಟಿನ ಭಯ ಕಾಡುತ್ತಿರುವಂತಿದೆ. ಹೀಗಾಗಿ ಕ್ಷೇತ್ರದ ಪ್ರಭಾವಿ ಬಿಜೆಪಿ ನಾಯಕ ಕಾಪು ಸಿದ್ದಲಿಂಗಸ್ವಾಮಿ ಮನೆಗೆ ಭೇಟಿ, ‘ನಿನ್ನನ್ನು ನಂಬಿದ್ದೇನೆ, ದಯಮಾಡಿ ಕೈಬಿಡಬೇಡ’ ಎಂದು ಕೇಳಿಕೊಂಡಿದ್ದಾರೆ.
ಕಾಪು ಸಿದ್ಧಲಿಂಗ ಸ್ವಾಮಿ ಯಡಿಯೂರಪ್ಪ ಆಪ್ತರಾಗಿದ್ದು, ವರುಣ ಕ್ಷೇತ್ರಕ್ಕೆ ಅವರು ಕೂಡ ಆಕಾಂಕ್ಷಿಯಾಗಿದ್ದರು. ಇಂದು ಕಾಪು ಮನೆಗೆ ಭೇಟಿ ನೀಡಿದ ಸೋಮಣ್ಣ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
“ನಿನ್ನ ಬಗ್ಗೆ ನಾನು ಏನೂ ಅಂದುಕೊಂಡಿಲ್ಲ. ನೀನೆ ನನ್ನ ಸೈನ್ಯದ ಕಮಾಂಡರ್ ರಿತಿ ಕೆಲಸ ಮಾಡು ಎಂದು ಸೋಮಣ್ಣ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಪು, ನಮ್ಮ ಮನೆಯಿಂದಲೇ ಪ್ರಚಾರ ಕಾರ್ಯ ಪ್ರಾರಂಭಿಸಬೇಕು ಎಂದು ಪೂಜೆ ಇಟ್ಟುಕೊಂಡಿದ್ದೇನೆ. ಬೆಳಗ್ಗೆಯೇ ನಿಮ್ಮ ಹೆಸರಲ್ಲಿ ಪೂಜೆ ನಡೆದಿದೆ. ನಿಮ್ಮ ನಕ್ಷತ್ರಕ್ಕೆ ಪೂಜೆ ಮಾಡಿಸಿದ್ದೇವೆ, ಈ ಬಾರಿ ನೀವು ಗೆಲ್ಲುತ್ತೀರಿ ಎಂದು ಭರವಸೆ ನೀಡಿದರು. ಬಳಿಕ ಕಾಪು ಮನೆಯಲ್ಲಿ ಸೋಮಣ್ಣ ಉಪಹಾರ ಸೇವಿಸಿದರು.
ಇದನ್ನೂ ಓದಿ:Jagadish shettar ಟಿಕೆಟ್ ಬಗ್ಗೆ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ: ಪ್ರಹ್ಲಾದ ಜೋಶಿ
ಕಾಪು ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದ ಹಾಗೆ. ಯಾವುದೊ ಜನ್ಮದಲ್ಲಿ ಅಣ್ಣನ್ನಾಗಿಯೋ, ತಮ್ಮನಾಗಿಯೂ ಹುಟ್ಟಿದ್ದೆವು ಅನಿಸುತ್ತದೆ. ಸಿದ್ದಲಿಂಗಸ್ವಾಮಿಗೆ ಕೆಲವು ಜವಾಬ್ದಾರಿ ನೀಡಿದ್ದೇನೆ. ವರುಣಗೆ ಯಡಿಯೂರಪ್ಪ, ಸಿಎಂ ಛಲವಾದಿ ನಾರಾಯಣಸ್ವಾಮಿ ಬರಲಿದ್ದು. ಆ ಎಲ್ಲಾ ಜವಾಬ್ದಾರಿ ಸಿದ್ದಲಿಂಗಸ್ವಾಮಿಗೆ ನೀಡಿದ್ದೇನೆ. ಇಂದಿನಿಂದ ವರುಣದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಒಂದು ವಾರದ ಬಳಿಕ ಕ್ಷೇತ್ರದ ವಾತಾವರಣ ತಿಳಿಯುತ್ತದೆ. ವರುಣವನ್ನು ಮತ್ತೊಂದು ಗೋವಿಂದರಾಜ ನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಸೋಮಣ್ಣ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.