ಲಸಿಕೆ ವಿತರಣೆ: ರಾಜ್ಯದಲ್ಲೇ ಮೈಸೂರು ನಂ.2


Team Udayavani, Apr 11, 2021, 3:25 PM IST

ಲಸಿಕೆ ವಿತರಣೆ: ರಾಜ್ಯದಲ್ಲೇ ಮೈಸೂರು ನಂ.2

ಮೈಸೂರು: ಲಸಿಕೆ ನೀಡುವುದರಲ್ಲಿ ಮೈಸೂರು ಮುಂದೆಇದೆ. ಬೃಹತ್‌ ಬೆಂಗಳೂರಿನಲ್ಲಿ ಶುಕ್ರವಾರ ಸುಮಾರು 40 ಸಾವಿರ ಲಸಿಕೆ ಹಾಕಿದ್ದರೆ, ಮೈಸೂರಿನಲ್ಲಿ 30 ಸಾವಿರಮಂದಿಗೆ ಹಾಕಲಾಗಿದೆ. ಹೀಗಾಗಿ ರಾಜ್ಯದಲ್ಲೇ ಈ ನಿಟ್ಟಿನಲ್ಲಿ ಮೈಸೂರು 2ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಂತಸ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ ಸೋಂಕಿನಿಂದಾಗಿ ಸಾವಿಗೀಡಾಗುವವರಲ್ಲಿ 45 ವರ್ಷ ಮೀರಿದವರೇ ಹೆಚ್ಚಾಗಿದ್ದಾರೆ. ಹೀಗಾಗಿಇದನ್ನು ತಪ್ಪಿಸಲು ಅರ್ಹರಿರುವ ಎಲ್ಲರೂ ಲಸಿಕೆಹಾಕಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಅಂತಹ 8.5 ಲಕ್ಷಮಂದಿಯಿದ್ದು, ಈಗಾಗಲೇ ಸುಮಾರು 3 ಲಕ್ಷ ಮಂದಿಗೆಲಸಿಕೆ ಹಾಕಲಾಗಿದೆ. ಆದರೂ ಬಹಳಷ್ಟು ಮಂದಿ ತಪ್ಪುತಿಳಿವಳಿಕೆಯಿಂದ ಮುಂದೆ ಬರುತ್ತಿಲ್ಲ. ಅಂತಹವರಮನವೊಲಿಕೆ ಪ್ರಯತ್ನ ನಡೆಯುತ್ತಿದೆ ಎಂದರು. ಲಸಿಕೆ ಹಾಕಿಸಿಕೊಂಡವರಿಗೆ ಸೋಂಕು ತಗುಲುವುದಿಲ್ಲ. ಲಸಿಕೆ ಪಡೆದರೂ ಸೋಂಕು ಹರಡುತ್ತಿದೆ ಎಂದೆಲ್ಲಾ ತಪ್ಪು ಮಾಹಿತಿಗಳು ಹರಿದಾಡುತ್ತಿದೆ. 2 ಬಾರಿಲಸಿಕೆ ಪಡೆದ 25 ದಿನಗಳ ನಂತರ ವ್ಯಕ್ತಿಯ ದೇಹದಲ್ಲಿರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಸಾವುಹಾಗೂ ಗಂಭೀರ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಇಡೀ ದೇಶದಲ್ಲಿಯೇ ವಿರಳ ಎಂಬಂತೆ ಜಿಲ್ಲೆಯಲ್ಲಿ 45 ವರ್ಷ ಮೀರಿದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಲಸಿಕಾ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಿದರೂ ಬಹಳಷ್ಟು ಮಂದಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಆದ್ದರಿಂದಾಗಿ ಜಿಲ್ಲಾಡಳಿತ ಅಂತಹವುಗಳಿಗೆ ತಾನೇಉಚಿತವಾಗಿ ಲಸಿಕೆ ನೀಡಿ, ಅಲ್ಲಿಯೂ ಉಚಿತವಾಗಿ ಲಸಿಕೆ ನೀಡುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಕಳೆದ ವರ್ಷದ ರೀತಿಯಲ್ಲಿಲ್ಲ. ಮೊದಲು ಮೂಲಸೌಕರ್ಯ ಕೊರತೆಯಿತ್ತು. ಲಸಿಕೆ ಇರಲಿಲ್ಲ, ಸಾಕಷ್ಟು ಪ್ರಮಾಣದಲ್ಲಿಪರೀಕ್ಷೆ ನಡೆಯುತ್ತಿರಲಿಲ್ಲ. ಪ್ರತಿ ಪರೀಕ್ಷಾ ವರದಿಗೂಬೆಂಗಳೂರನ್ನೇ ನಂಬಿಕೊಳ್ಳಬೇಕಾಗಿತ್ತು. ಆದರೆ ಈಗಪರಿಸ್ಥಿತಿ ಬದಲಾಗಿದೆ. ಹೀಗಾಗಿ ಪ್ರವಾಸಿ ಸ್ಥಳಮೊದಲಾದವನ್ನು ಬಂದ್‌ ಮಾಡಬೇಕಿಲ್ಲ. ಜತೆಗೆ, ಇಡೀ ಪ್ರದೇಶ ಕಂಟೈನ್ಮೆಂಟ್‌ ಎಂದು ಘೋಷಿಸುವ ಬದಲು ಸೀಮಿತಗೊಳಿಸಲಾಗಿದೆ ಎಂದು ವಿವರಿಸಿದರು.

ದಸರಾದಲ್ಲಿ ಆದಿವಾಸಿ ಮಹೋತ್ಸವ: ಮೈಸೂರೆಂದರೆಕೇವಲ ಅರಮನೆ, ಮೃಗಾಲಯ, ವಸ್ತು ಪ್ರದರ್ಶನವಲ್ಲ.ಪ್ರವಾಸಿಗರನ್ನು ಆಕರ್ಷಿಸಲು ಹತ್ತಾರು ಸ್ಥಳಗಳಿವೆ. ದಸರಾ ಮಹೋತ್ಸವ ವಿಶ್ವದ ಗಮನ ಸೆಳೆದಿದ್ದು, ಈ ಬಾರಿ ಕೋವಿಡ್ ಇಲ್ಲದಿದ್ದರೆ ಮತ್ತಷ್ಟು ಆಕರ್ಷಕವಾಗಿಸುವ ಯೋಜನೆ ಇದೆ. ದೆಹಲಿಯಲ್ಲಿ ನಡೆಯುವ ಆದಿವಾಸಿಗಳ ಉತ್ಸವದಂತೆ ದಸರಾದಲ್ಲೂಆದಿವಾಸಿ ಮಹೋತ್ಸವ ಮಾಡುವ ಚಿಂತನೆಯಿದೆ. ಕೋವಿಡ್ ಇಲ್ಲದೆ ಎಂದಿನಂತೆ ದಸರಾ ನಡೆದರೆ ಆ ಮಹೋತ್ಸವ ಹೊಸ ಕಾರ್ಯಕ್ರಮವಾಗಿಸೇರ್ಪಡೆಗೊಳ್ಳಲಿದೆ. ಇದರಿಂದಾಗಿ ಆದಿವಾಸಿಗಳ ಸಂಸ್ಕೃತಿ, ಸಂಪ್ರದಾಯ ತಿಳಿಯಲಿದೆ ಎಂದರು.

ಸಂವಾದದಲ್ಲಿ ಸಂಘದ ಅಧ್ಯಕ್ಷ ಎಸ್‌.ಟಿ.ರವಿಕುಮಾರ್‌, ಸುಬ್ರಹ್ಮಣ್ಯ, ಎಂ.ಎಸ್‌. ಬಸವಣ್ಣ, ರಂಗಸ್ವಾಮಿ ಹಾಜರಿದ್ದರು.

ನಿರಂಕುಶಾಧಿಕಾರದಿಂದ ಆದೇಶಿಸುತ್ತಿಲ್ಲ: ಸಿಂಧೂರಿ :

ಕೋವಿಡ್  ಮಾರ್ಗಸೂಚಿ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆ ಕೇಂದ್ರಗಳನ್ನು ಮೂರು ಭಾಗಗಳಾಗಿ ವಿಭಜಿಸುವ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ, ಜಾತ್ರೆನಿರ್ಬಂಧ ವೇಳೆ ತಾವು ದೈವ ವಿರೋಧಿ ಎಂದುಹಲವರು ಟೀಕಿಸಿದರು. ನಂಜನಗೂಡು ಜಾತ್ರೆವೇಳೆಯೂ ಇದೇ ಆಯಿತು. ದೊಡ್ಡ ರಥ ಎಳೆಯಲುಸಾವಿರಾರು ಜನ ಬೇಕಾಗುತ್ತಾರೆ. ಹೀಗಾಗಿ ಚಿಕ್ಕರಥಎಳೆಯುವಂತೆ ಸೂಚಿಸಲಾಯಿತು. ಹೀಗಾಗಿ ತಾವುನಿರಂಕುಶಾಧಿಕಾರದಿಂದ ಈ ರೀತಿಯ ಆದೇಶಮಾಡುತ್ತಿಲ್ಲ. ಕೇವಲ ಜನರ ಹಿತಾಸಕ್ತಿಯಷ್ಟೇ ಅದರ ಹಿಂದಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.

ಕೋವಿಡ್‌ ಲಸಿಕೆ ಜಾಗೃತಿಗೆ ಮೌಲ್ವಿಗಳ ಬಳಕೆ: ಡೀಸಿ :

ನಗರದ ಎನ್‌.ಆರ್‌. ಮೊಹಲ್ಲಾ ಮತ್ತು ಮಂಡಿ ಪ್ರದೇಶಗಳಲ್ಲಿ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಮೌಲ್ವಿಗಳನ್ನೇ ಬಳಸಿ ಕೊಂಡು ಅವರಲ್ಲಿನ ಹಿಂಜರಿಕೆ ಹೋಗಲಾಡಿಸುವ ಯತ್ನ ನಡೆಸಲಾಗಿದೆ. ಲಸಿಕೆ ಹಾಕಿಸಿಕೊಂಡಲ್ಲಿಮುಂದೇನಾಗುತ್ತದೋ ಎಂಬ ಆತಂಕ ಅವಲ್ಲಿದೆ. ಕೆಲವರು ಲಸಿಕೆ ಹಾಕಿಸಿಕೊಂಡ ಬಳಿಕ ಮದ್ಯ, ಮಾಂಸಸೇವಿಸಬಾರದೆಂದು ಹೆದರಿದ್ದಾರೆ. ಹೀಗಾಗಿ ಲಸಿಕೆ ಹಾಕಿಸಿಕೊಂಡ ಮದ್ಯ ವ್ಯಸನಿಗಳಿಂದಲೇ ತಿಳಿಹೇಳಿಸುವ ಯತ್ನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಕೇರಳ ಮಾದರಿ ಪಾರಂಪರಿಕ ಕಟ್ಟಡಗಳ ಬೈನಾಲೆ ಯೋಜನೆ :

ಮೈಸೂರು ಪ್ರಮುಖ ಪ್ರವಾಸಿ ತಾಣವಾಗಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ನೀಡಲಾಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಕೇರಳದ ಕೊಚ್ಚಿನ್‌ನಲ್ಲಿ ಶಿಪ್‌ಗ್ಳನ್ನೇ ಬಳಸಿಕೊಂಡು ಪ್ರವಾಸಿ ತಾಣವಾಗಿ ಮಾಡಿರುವಂತೆ ಮೈಸೂರಿನಲ್ಲೂ ಅದೇ ಮಾದರಿಯಲ್ಲಿ ಪಾರಂಪರಿಕ ಕಟ್ಟಡಗಳ ಬೈನಾಲೆ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ. ಪಾರಂಪರಿಕ ಕಟ್ಟಡಗಳ ಹಿನ್ನೆಲೆ ಸೇರಿದಂತೆ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಮೈಸೂರಿನಲ್ಲಿರುವ ಎಲ್ಲ ಪಾರಂಪರಿಕ ಕಟ್ಟಡಗಳ ಮಾಹಿತಿ ಒಂದೆಡೆ ಸಿಗುವಂತೆ ಮಾಡುವ ಉದ್ದೇಶದಿಂದ ಪಾರಂಪರಿಕ ಕಟ್ಟಡಗಳ ಬೈನಾಲೆ ಯೋಜನೆ ಸಿದ್ಧವಾಗುತ್ತಿದೆ. ಯೋಜನೆ ಪ್ರಗತಿಯಲ್ಲಿದ್ದು, ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಜತೆಗೆ ಚಾಮುಂಡಿಬೆಟ್ಟದ ತಪ್ಪಿಲಿನಲ್ಲಿ ಮೈಸೂರು ವಿವಿಗೆ ಸೇರಿದ 22 ಎಕರೆ ಜಾಗವಿದ್ದು, 3 ಎಕರೆಯಲ್ಲಿ ಪ್ಲಾನಿಟೇರಿಯಂ ನಿರ್ಮಾಣವಾಗಲಿದೆ. ಕೇಂದ್ರ ಚುನಾವಣಾ ಆಯೋಗ ಪ್ರಜಾಪ್ರಭುತ್ವ ಕಟ್ಟಡ ನಿರ್ಮಿಸಲು ಜಾಗ ಕೇಳಿದ್ದು, 2 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಟಾಪ್ ನ್ಯೂಸ್

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.