ವೀರಶೈವರ ಸುಪರ್ದಿಗೆ ಬಸವ ಭವನ
Team Udayavani, Feb 28, 2017, 12:57 PM IST
ನಂಜನಗೂಡು: ಈಗ ಭೂಮಿ ಪೂಜೆ ಯಾಗಿರುವ ಬಸವ ಭವನವನ್ನು ಪೂರ್ಣಗೊಳಿಸಿ ವೀರಶೈವ ಸಮಾಜದ ಸುಪರ್ದಿಗೆ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಘೋಷಿಸಿದರು.
ನಗರದ ಹೊರವಲಯದ ಹಂಡುವಿನಹಳ್ಳಿ ಬಡಾವಣೆಯಲ್ಲಿ ಬಸವ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಸವ ಭವನವನ್ನು ವೀರಶೈವ ಸಮಾಜದ ಸುಪರ್ದಿಗೆ ನೀಡುವ ಉದ್ದೇಶದಿಂದಲೇ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಈ ಕುರಿತು ಸ್ನೇಹಿತ ಜಿಪಂ ಮಾಜಿ ಸದಸ್ಯ ಸಿಂಧುವಳ್ಳಿ ಕೆಂಪಣ್ಣ ಮತ್ತು ಸಂಗಡಿಗರ ಅನುಮಾನ ಅನವಶ್ಯಕ. ಬಸವ ಭವನಕ್ಕಾಗಿ ಮುಖ್ಯಮಂತ್ರಿಗಳು ಒಂದು ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಈಗ ಇನ್ನೊಂದು ಕೋಟಿ ರೂ. ನೀಡಿದ್ದಾರೆ. ಭವನಕ್ಕೆ ಮತ್ತೆ ಹಣ ಬೇಕಾದರೆ ನೀಡಲು ಸರ್ಕಾರ ಸಿದ್ದವಿದೆ ಎಂದು ಭರವಸೆ ನೀಡಿದರು.
ಆಶೀರ್ವಚನ ನೀಡಿದ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರರು, ಬಸವಣ್ಣ ನವರು ನಡೆ ನುಡಿ ಒಂದಾಗಿಸಲು ತಮ್ಮನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡ ವರು. ಬುದ್ಧ, ಬಸವ, ಗಾಂಧಿ ಅಂಬೇಡ್ಕರ್ ರಂತಹ ಮಹನೀಯರನ್ನು ಜಾತಿ ಬಲೆಯಿಂದ ಹೊರತರುವ ಕೆಲಸವಾಗ ಬೇಕಿದೆ. ತಾಲೂಕು ಮಟ್ಟದ ಪ್ರಥಮ ಬಸವ ಭವನ ಸಮಸ್ತ ಜನರ ಆಸ್ತಿ ಎಂದು ವ್ಯಾಖ್ಯಾನಿಸಿದರು.
ಮಹದೇವಪ್ಪನವರಿಗೆ ಸಹಕರಿಸಿದ ಕಳಲೆ: ಸಮಾರಂಭದಲ್ಲಿ ಜ್ಯೋತಿ ಬೆಳಗಲು ಮೇಣದ ಬತ್ತಿ ಹಚ್ಚಲು ಸಚಿವ ಮಹದೇವಪ್ಪ ನಡೆಸಿದ ಪ್ರಯತ್ನ ಗಾಳಿಯಿಂದಾಗಿ ಕೈಗೂಡದಿದ್ದಾಗ ಹಿಂದಿನ ಸಾಲಿನಲ್ಲಿ ಆಸೀನರಾಗಿದ್ದ ಕಳಲೆ ಕೇಶವ ಮೂರ್ತಿ ಬಂದು ಕಡ್ಡಿ ಗೀರಿ ಕ್ಯಾಂಡಲ್ ಬೆಳಗಿಸಿ ಸಚಿವರಿಗೆ ನೆರವು ನೀಡಿದರು.
ದೇವನೂರು ಮಠಾದ್ಯಕ್ಷ ಶ್ರೀ ಮಹಂತ ಸ್ವಾಮೀಜಿ, ಮಲ್ಲನ ಮೂಲೆಯ ಶ್ರೀಚೆನ್ನ ಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ತಾಲೂಕು ವೀರಶೈವ ಮಹಾಸಭೆ ಅಧ್ಯಕ್ಷ ಎಚ್.ಕೆ.ಚೆನ್ನಪ್ಪ, ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ, ಜಿಪಂ ಸದಸ್ಯರಾದ ಲತಾ ಸಿದ್ದಶೆಟ್ಟಿ, ಪುಷ್ಪಾ$ ನಾಗೇಶರಾಜು, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾದ್ಯಕ್ಷ ಗೊವಿಂದರಾಜು, ನಗರಸಭಾ ಅದ್ಯಕ್ಷೆ ಪುಷ್ಪಲತಾ ಕಮಲೇಶ, ಉಪಾಧ್ಯಕ್ಷ ಪ್ರದೀಪ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.