Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ
Team Udayavani, May 4, 2024, 3:09 PM IST
ಮೈಸೂರು: ಕಳೆದೆರೆಡು ತಿಂಗಳಿನಿಂದ ಬಿಸಿಲಿನ ತೀವ್ರತೆ ಹಾಗೂ ಮಳೆ ಕೊರತೆ ಪರಿಣಾಮ ಹಣ್ಣು ಮತ್ತು ತರಕಾರಿ ಬೆಳೆ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ತರಕಾರಿ ದರ ಬಿಸಿಲ ತಾಪದಂತೆ ಏರಿಕೆಯಾಗುತ್ತಿದೆ.
ಮಳೆ ಕೊರತೆ ಪರಿಣಾಮ ಜಿಲ್ಲೆಯ ವಿವಿಧ ಭಾಗದಲ್ಲಿ ರೈತರು ಬೆಳೆದಿದ್ದ ತರಕಾರಿ, ಹಣ್ಣು ಮತ್ತು ಸೊಪ್ಪು ಹೊಲದಲ್ಲೇ ಬತ್ತುತ್ತಿದ್ದು, ಇಳುವರಿ ಕುಠಿತವಾಗಿದೆ. ಪರಿಣಾಮ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗದ ಹಿನ್ನೆಲೆ ತರಕಾರಿ ಬೆಲೆ ಗಗನಕ್ಕೇರಿದ್ದು, ಜಿಲ್ಲೆಯ ಜನತೆ ಹೈರಾಣಾಗಿದ್ದಾರೆ.
ಮಳೆ ಕೊರತೆಗೆ ಬತ್ತಿದ ಬೆಳೆ: ಕಳೆದ 22 ವರ್ಷಗಳ ಬಳಿಕ ಮತ್ತೆ ತೀವ್ರ ಮಳೆ ಕೊರತೆ ಎದುರಿರಾಗಿದ್ದು, ನೂರಾರು ಹೆಕ್ಟೇರ್‌ನಲ್ಲಿ ರೈತರು ಬೆಳೆದಿದ್ದ ಬೆಳೆ ನೀರಿಲ್ಲದೇ ಒಣಗುತ್ತಿವೆ. ತೀವ್ರ ಬರಗಾಲ ಹಿನ್ನೆಲೆ ನದಿ, ಕೆರೆ-ಕಟ್ಟೆಗಳ ಜತೆಗೆ ಅಂತರ್ಜಲ ಮಟ್ಟವೂ ಕುಸಿದಿರುವುದರಿಂದ ಬೇಸಿಗೆಯಲ್ಲಿ ಬೆಳೆದಿದ್ದ ಹಣ್ಣು, ತರಕಾರಿ ಬೆಳೆಗೆ ನೀರು ಒದಗಿಸಲಾಗದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ವಾತಾವರಣದಲ್ಲಿನ ಉಷ್ಣತೆಗೆ ಫಸಲಿನ ಇಳುವರಿಯೂ ಕುಂಠಿತವಾಗಿದೆ.
ತಗ್ಗಿದ ಪೂರೈಕೆ ಪ್ರಮಾಣ: ಮೈಸೂರು ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ ಪಕ್ಕದ ಗುಂಡ್ಲುಪೇಟೆ, ಶ್ರೀರಂಗಪಟ್ಟಣ ತಾಲೂಕುಗಳಿಂದ ನಿತ್ಯವೂ 2 ಸಾವಿರ ಟನ್‌ಗೂ ಹೆಚ್ಚು ಪ್ರಮಾಣದ ತರಕಾರಿಯನ್ನು ನೂರಾರು ವಾಹನಗಳಲ್ಲಿ ತರಲಾಗುತ್ತಿತ್ತು. ಆದರೆ. ಕಳೆದೊಂದು ತಿಂಗಳಿನಿಂದ ಮೈಸೂರಿಗೆ ಪೂರೈಕೆಯಾಗುತ್ತಿರುವ ಪ್ರಮಾಣ ಕಡಿಮೆಯಾಗಿದ್ದು, 1 ಸಾವಿರ ಟನ್‌ಗೆ ಇಳಿಕೆಯಾಗಿದೆ. ಪರಿಣಾಮ ತರಕಾರಿ ಮತ್ತು ಸೊಪ್ಪಿಗೆ ಬೇಡಿಕೆ ಹೆಚ್ಚಾಗಿರುವ ಜತೆಗೆ ಬೆಲೆಯೂ ಹೆಚ್ಚಿದೆ.
ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ತರಕಾರಿ ಬೆಲೆ ಸಾಧಾರಣವಾಗಿತ್ತದೆ. ಆದರೆ ಈ ಬಾರಿ ಎಲ್ಲಾ ಬಗೆಯ ತರಕಾರಿಗಳು 50ರ ಗಡಿ ದಾಟಿದ್ದು, ಗ್ರಾಹಕರು ತರಕಾರಿ ಖರೀದಿಸಲು ಯೋಚಿಸುವಂತಾಗಿದೆ.
ಸಗಟು ಮಾರುಕಟ್ಟೆಯಲ್ಲಿ ದಪ್ಪಮೆಣಸಿನಕಾಯಿ, ಕ್ಯಾರೆಟ್, ಬೀನ್ಸ್, ಟೊಮೆಟೊ, ಈರುಳ್ಳಿ ಸೇರಿದಂತೆ ಹಲವು ತರಕಾರಿ ದರ ಹೆಚ್ಚಾಗಿದ್ದು, ರಿಟೇಲ್ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಜನರು ಕಂಗಾಲಾಗಿ¨ªಾರೆ. ಬಹುತೇಕ ಕಡೆ ತರಕಾರಿ ಬೆಳೆ ಒಣಗಿದ್ದು, ಬೀನ್ಸ್ ಸೇರಿದಂತೆ ನಾನಾ ತರಕಾರಿ, ಸೊಪ್ಪುಗಳ ಪೂರೈಕೆ ಕಡಿಮೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಈ ಹಿಂದೆ ಕೆ.ಜಿ.ಗೆ 10-20 ರೂ. ದರವಿದ್ದ ಟೊಮೆಟೊ 40-50ಕ್ಕೆ ಏರಿಕೆಯಾಗಿದೆ. ಒಂದು ಕಂತೆ ದಂಟು, ಮೆಂತ್ಯ, ಪಾಲಕ್, ಸಪ್ಸಿಗೆ, ಕೊತ್ತಂಬರಿ ಸೊಪ್ಪು 10 ರೂ. ಮುಟ್ಟಿದೆ.
ಚಿಲ್ಲರೆ ಅಂಗಡಿಯಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟು
ನಗರದ ವಿವಿಧೆಡೆ ಹಾಗೂ ಸಂತೆಗಳಲ್ಲಿ ತರಕಾರಿ ಸಗಟು ಮಾರಾಟ ಕೇಂದ್ರಗಳಿಗಿಂತ ದುಪ್ಪಟ್ಟು ಬೆಲೆಗೆ ತರಕಾರಿ ಮತ್ತು ಸೊಪ್ಪು ಮಾರಾಟವಾಗುತ್ತಿದ್ದು, ಟೊಮೊಟೊ ಪ್ರತಿ ಕೆ.ಜಿ.ಗೆ 100, ಈರುಳ್ಳಿಗೆ 90, ಕ್ಯಾರೆಟ್‌ಗೆ 80 ರೂ.ನಂತೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿದೆ.
ಬೀನ್ಸ್, ಮೆಣಸಿನ ಕಾಯಿ ಬೆಲೆ ದಿಢೀರ್ ಏರಿಕೆ
30-40 ರೂ.ಗೆ ದೊರೆಯುತ್ತಿದ್ದ ಬೀನ್ಸ್ ಈಗ ಬಲು ದುಬಾರಿಯಾಗಿದ್ದು, ಪ್ರತಿ ಕಿಲೋಗೆ 160ರಿಂದ 180ಕ್ಕೆ ಮಾರಾಟ ಮಾಡಲಾಗುತ್ತಿದೆ. ಜತೆಗೆ 40 ರೂ. ಇದ್ದ ಹಸಿ ಮೆಣಸಿನ ಕಾಯಿ ಬೆಲೆ ಸಧ್ಯಕ್ಕೆ 70ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಬೆಂಡೆಕಾಯಿಗೆ 60, ಮೂಲಂಗಿ 60, ಕ್ಯಾರೆಟ್-ಬೀಟ್ರೋಟ್ 70, ಸೌತೆಕಾಯಿ 50, ಹಾಗಲಕಾಯಿ 70, ಕೋಸು 40 ರೂಪಾಯಿಗೆ ಮಾರಾಟವಾಗುತ್ತಿದೆ.
-ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Republic Day Parade: ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ
Hunsur:1463 ಪೈಕಿ 1055 ಮಂದಿ ಮತದಾರರ ಕೈ ಬಿಟ್ಟಿರುವ ಬಗ್ಗೆ ಷೇರುದಾರರ ಆಕ್ಷೇಪ; ಪ್ರತಿಭಟನೆ
Mysuru: ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ದೊರೆತ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Micro Finance: ಮೀಟರ್ ಬಡ್ಡಿ ಕಿರುಕುಳ: ಊರೇ ತೊರೆದ 100ಕ್ಕೂ ಹೆಚ್ಚು ಕುಟುಂಬ
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.