ಮತದಾನ: ಜಿಲ್ಲೆಗೆ ಪಿರಿಯಾಪಟ್ಟಣ ನಂ.1
Team Udayavani, May 14, 2018, 2:21 PM IST
ಮೈಸೂರು: ತೀವ್ರ ಕುತೂಹಲ ಮೂಡಿಸಿರುವ ವಿಧಾನಸಭಾ ಚುನಾವಣೆಯಲ್ಲಿ ನಗರ ಪ್ರದೇಶದ ಜನರು ಮತದಾರರು ತಮ್ಮ ಹಕ್ಕು ಚಲಾಯಿಸಲು ನಿರಾಸಕ್ತಿ ತೋರಿದ್ದು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಗರದ ಮೂರು ಕ್ಷೇತ್ರಗಳಲ್ಲಿ ಅತಿ ಕಡಿಮೆ ಮತದಾನ ನಡೆದಿದೆ.
ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಪುರುಷರು 12,51,642, ಮಹಿಳೆಯರು 12,41,576 ಹಾಗೂ ಇತರರು 189 ಮಂದಿ ಸೇರಿದಂತೆ ಒಟ್ಟು 24,93,407 ಮಂದಿ ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇವರಲ್ಲಿ 9,39,706 ಪುರುಷರು, 9,06,679 ಮಹಿಳೆಯರು ಹಾಗೂ 12 ಮಂದಿ ಇತರರು ಸೇರಿದಂತೆ ಒಟ್ಟು 18,46,397 ಮಂದಿ ಮತದಾನ ಮಾಡಿದ್ದಾರೆ.
ಒಟ್ಟಾರೆ ಜಿಲ್ಲಾದ್ಯಂತ ಶೇ.74.05 ಮತದಾನ ನಡೆದಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಪಿರಿಯಾಪಟ್ಟಣದಲ್ಲಿ ಶೇ.85.80 ಹೆಚ್ಚಿನ ಮತದಾನ ನಡೆದಿದೆ. ಇದರೊಂದಿಗೆ ಹೆಚ್ಚಿನ ಮತದಾನದ ತಾಲೂಕು ಎಂಬ ಹೆಗ್ಗಳಿಕೆ ಪಡೆದಿರುವುದು ಗಮನಾರ್ಹ ಸಂಗತಿ.
ನಗರ ಜನರ ನಿರಾಸಕ್ತಿ: ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಹೋಲಿಸಿದರೆ ನಗರ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಿಂದ ದೂರ ಸರಿದಿದ್ದಾರೆ. ಅದರಲ್ಲೂ ಅಕ್ಷರಸ್ಥರು, ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗುತ್ತಿದ್ದ ನಗರದ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಕಡಿಮೆ ಮತದಾನ ನಡೆದಿದೆ.
ಈ ಪೈಕಿ 2,47,082 ಮತದಾರರಿರುವ ಕೃಷ್ಣರಾಜ ಕ್ಷೇತ್ರದಲ್ಲಿ 1,45,196 ಮಂದಿ ಮಾತ್ರವೇ ಮತದಾನ ಮಾಡಿದ್ದು, ಶೇ.58.76 ಮತದಾನ ನಡೆದಿದೆ. ಇನ್ನು ಚಾಮರಾಜ ಕ್ಷೇತ್ರದ 2,35,647 ಮತದಾರರಲ್ಲಿ 1,39,455 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಶೇ.59.18 ಮತದಾನವಾಗಿದೆ. ಇನ್ನು ನಗರ ವ್ಯಾಪ್ತಿಗೊಳಪಡುವ ನರಸಿಂಹರಾಜ ಕ್ಷೇತ್ರದಲ್ಲೂ ಹೆಚ್ಚಿನ ಪ್ರಮಾಣದ ಮತದಾನ ನಡೆದಿಲ್ಲ.
ಕ್ಷೇತ್ರದ ಒಟ್ಟು 2,62,300 ಮತದಾರರಲ್ಲಿ 1,60,957 ಮಂದಿ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದು, ಪರಿಣಾಮ ಶೇ.61.36 ಮತಗಳು ಚಲಾವಣೆಗೊಂಡಿವೆ. ಈ ಮೂರು ಕ್ಷೇತ್ರಗಳ ಶೇಖವಾರು ಅಂಕಿಅಂಶಗಳ ಪ್ರಕಾರ ಪುರುಷ ಹಾಗೂ ಮಹಿಳಾ ಮತದಾರರು ಸಮಾನವಾಗಿ ಮತದಾನದಿಂದ ಹೊರಗುಳಿದಿರುವುದು ಕಂಡುಬರುತ್ತಿದೆ.
ಕ್ಷೇತ್ರವಾರು ವಿವರ: ಜಿಲ್ಲೆಯ ಹನ್ನೊಂದು ಕ್ಷೇತ್ರಗಳಲ್ಲಿ ಪಿರಿಯಾಪಟ್ಟಣದಲ್ಲಿ ಅತಿ ಹೆಚ್ಚು ಶೇ.85.80 ಮತದಾನವಾಗಿರುವುದು ಗಮನಾರ್ಹ. ಕೆ.ಆರ್.ನಗರ ಶೇ.84.79, ಹುಣಸೂರು ಕ್ಷೇತ್ರದಲ್ಲಿ ಶೇ.82.73, ಹೆಗ್ಗಡದೇವನಕೋಟೆ ಶೇ.79.11, ನಂಜನಗೂಡು ಶೇ.78.16, ಚಾಮುಂಡೇಶ್ವರಿ ಶೇ.76.05, ಕೃಷ್ಣರಾಜ ಶೇ.58.76, ಚಾಮರಾಜ ಶೇ.59.18, ನರಸಿಂಹರಾಜ ಶೇ.61.43, ವರುಣ ಕ್ಷೇತ್ರದಲ್ಲಿ ಶೇ.78.59, ತಿ.ನರಸೀಪುರ ಶೇ.78.08 ಮತದಾನ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.