ನಾಲೆಗಳಿಗೆ ಹಾರಂಗಿ ನೀರು ಹರಿಸುವ ನಿರೀಕ್ಷೆ


Team Udayavani, Aug 3, 2017, 12:29 PM IST

mys5.jpg

ಪಿರಿಯಾಪಟ್ಟಣ: ಹಾರಂಗಿ ಜಲಾಶಯಗಳಿಗೆ 2 ವರ್ಷದಿಂದ ನೀರು ಬಿಟ್ಟಿಲ್ಲ ಎಂಬ ಆರೋಪವಿದೆ. ಆದರೆ ಜನ ಜಾನುವಾರು ಕುಡಿಯುವ ನೀರಿಗಾಗಿ ಸರಕಾರ ನೀಡು ಬಿಡುವ ನಿರೀಕ್ಷೆ ಇದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜಲಾಶಯಗಳಲ್ಲಿ ಕುಡಿಯುವ ನೀರಿಲ್ಲ ದೇವರ ದಯೆಯಿಂದ ಉತ್ತಮ ಮಳೆಯಾಗಲಿ ಎಂಬುದನ್ನು ಪ್ರತಿನಿತ್ಯ ಪ್ರಾರ್ಥಿಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ರೈತರು ನೆಮ್ಮದಿ ಇಲ್ಲದಂತಾಗಿದೆ ಎಂದರು. 

ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ, ಕೆ.ಆರ್‌.ನಗರ ಮುಂತಾದ ಕಡೆ ಹೆಚ್ಚು ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ರೈತರು ಯಾವುದೇ  ಕಾರಣಕ್ಕೆ ಆತ್ಮಹತ್ಯೆ ದಾರಿ ತುಳಿದು ನಿಮ್ಮ ಕುಟುಂಬಗಳನ್ನು ಅನಾಥರನ್ನಾಗಿ ಮಾಡದೆ ಆಶಾಭಾವನೆಯಿಂದ ಜೀವನ ಸಾಧಿಸಬೇಕು ಎಂದು ತಿಳಿಸಿದರು. ಹಾರಂಗಿ ಜಲಾಶಯ ಭಾಗದಿಂದ ನೀರು ಬಿಡಬೇಕು ಎಂದು ಈಗಾಗಲೇ ಹೋರಾಟ ನಡೆಸುತ್ತಿದ್ದೇವೆ ಸದ್ಯದಲ್ಲೇ ಸಭೆ ಕರೆಯುವ ಭರವಸೆ ಇದೆ ಎಂದರು.

ಉಸ್ತುವಾರಿ ಸಚಿವ ಎಸ್‌.ಮಹದೇವಪ್ಪ ಮಾತನಾಡಿ, ಗ್ರಾಮಗಳಲ್ಲಿ ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಇಲ್ಲ ಎಂಬುದನ್ನು ಗ್ರಾಮದ ಜನರು ತೋರಿಸಿದ್ದಾರೆ. ಒಂದೇ ಸಮಾಜಕ್ಕೆ ಸೇರಿದ ಜನಸಮುದಾಯವಿದ್ದರು ರಾಜಕೀಯವನ್ನು ಹೊರತುಪಡಿಸದರೆ ಸಂಘರ್ಷಕ್ಕೆ ಕಾರಣವಿಲ್ಲ. ರಾಜಕೀಯ ಬದಲಾವಣೆ ಸಾಮಾನ್ಯ ಕಾಂಗ್ರೆಸ್‌ನವರು ಜೆಡಿಎಸ್‌ನವರಾಗುತ್ತಾರೆ, ಜೆಡಿಎಸ್‌ನವರು ಕಾಂಗ್ರೆಸಿನವರಾಗುತ್ತಾರೆ.

ಆದರೆ ನಮ್ಮ ಸಿದ್ಧಾಂತಗಳಲ್ಲಿ ಬದಲಾವಣೆಯಾಗಬಾರದು. ನಾನು ಸೇರಿದಂತೆ ನಮ್ಮ ಮುಖ್ಯಮಂತ್ರಿಗಳು ಎಚ್‌.ಡಿ.ದೇವೇಗೌಡರ ಗಡಿಯಲ್ಲಿ ಪಳಗಿದ್ದವರು. ಕಾವೇರಿ ವಿಚಾರದಲ್ಲಿ ದೇವೇಗೌಡರು ವಿಧಾನಸೌಧನಕ್ಕೆ ಬಂದು ಮಾರ್ಗದರ್ಶನ ನೀಡಿದ್ದಾರೆ. ರಾಜಕೀಯ ಒಂದು ವಿಜಾnನವಿದ್ದಂತೆ ಅದು ಜನರಿಗೆ ಅನುಕೂಲವಾಗಿರಬೇಕು ಎಂದು ತಿಳಿಸಿದರು.

ಸರಕಾರ 50 ಸಾವಿರ ಸಾಲಾ ಮನ್ನ ಮಾಡಿದೆ. ಕಾವೇರಿ ಕಣಿವೆಯಲ್ಲಿ ಕಳೆದ ವರ್ಷಕ್ಕಿಂತ  ಈ ವರ್ಷ ಕಡಿಮೆ ಮಳೆಯಾಗಿದೆ. ಸರಕಾರ ಎಲ್ಲರೂ ಸೇರಿ ರೈತರ ಹಿತವನ್ನು ರಕ್ಷಣೆ ಮಾಡಬೇಕು 53 ಟಿಎಂಸಿಯಲ್ಲಿ ಸಂಗ್ರಹವಾಗಿದೆ. 43 ಟಿಎಂಸಿಂ ತಮಿಳುನಾಡಿಗೆ ನೀಡಬೇಕು ಆದರೆ ನಾವು ನೀಡಿರುವುದು 7 ಟಿಎಂಸಿ ಮಾತ್ರ ನ್ಯಾಯಾಲಯದಲ್ಲಿ ವಾದವಿದೆ. ಆದ್ದರಿಂದ ರೈತರ ಹಿತಕಾಯುತ್ತಾ ಜನರಿಗೆ ಕುಡಿಯುವ ನೀರು ಕೊಡುತ್ತಾ ಬಂದಿದೆ.

ಶೀಘ್ರದಲ್ಲೇ  ಸರ್ವಪಕ್ಷಗಳ ಸಭೆ ಕರೆದು ಜನರಿಗೆ ಕುಡಿಯುವ ನೀರು ಕೊಡುವುದು ಹೇಗೆ? ಅಂತ್ಯಂತದ ಸಂಕಷ್ಟದ ವರ್ಷ ಆಗಿದ್ದು ಸರಕಾರ ಎಲ್ಲರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದರು. ಶಾಸಕ ಕೆ.ವೆಂಕಟೇಶ್‌ ಮಾತನಾಡಿ, ವೈಜಾnನಿಕ ಏನೇ ಪ್ರಯತ್ನ ಮಾಡಿದರು ಪ್ರಕೃತಿದತ್ತವಾಗಿ ಬರುವ ಮಳೆಯನ್ನು ನಾವು ನಿಜವಾಗಲು ತರಲು ಸಾಧ್ಯವಿಲ್ಲ. ಭಗವಂತರ ಪ್ರಾರ್ಥನೆ ಹೊರತು ಪಡಿಸಿದರೆ ನಮಗೆ ಯಾವುದೇ ಮಾರ್ಗವಿಲ್ಲ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬರ ಬರಬಹುದೇನೋ? ಎಂಬ ಹೆದರಿಕೆ ಉಂಟಾಗಿದೆ. ತಾಲೂಕಿನಲ್ಲಿ ಅರ್ಧಭಾಗದಷ್ಟು ಜನರಿಗೆ ಬೆಳೆಯೇ ಆಗಿಲ್ಲ. ಮುಖ್ಯಮಂತ್ರಿಗಳಿಗೆ ಕುಡಿಯುವ ನೀರು ಮತ್ತು ಕೆರೆ ನೀರು ತುಂಬಿಸಲು ಒತ್ತಾಯಿಸಲಾಗಿದೆ ಆ.5ರ ನಂತರ ನಾಲೆಗಳಿಗೆ ನೀಡು ಬಿಡುವ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಿಶೇಷ ಅಧಿಕಾರಿ ಡಾ.ಎಸ್‌.ಮಧುಕೇಶ್ವರ್‌ ಮತ್ತು ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಲೋಕನಾಥ್‌ರನ್ನು ಸನ್ಮಾನಿಸಲಾಯಿತು.

ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಮಾಜಿ ಸಂಸದ ಎಚ್‌.ವಿಶ್ವನಾಥ್‌, ರಾಜ್ಯ ಜೆಡಿಎಸ್‌ ಪ್ರಧಾನಕಾರ್ಯದರ್ಶಿ ಪಿ.ಎಂ.ಫಾರೂಕ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಮಹದೇವ್‌, ವಿಶ್ರಾಂತ ಕುಲಪತಿ ಎಸ್‌.ರಂಗಪ್ಪ, ಗುರುಲಿಂಗ ಜಂಗಮದೇವರ ಮಠದ ಗಾವಡಗೆರೆ ಮಠ ನಟರಾಜ್‌ ಸ್ವಾಮಿಗಳು, ಜಿಪಂ ಸದಸ್ಯರಾದ ಕೆ.ಎಸ್‌.ಮಂಜುನಾಥ್‌, ರುದ್ರಮ್ಮನಾಗಯ್ಯ, ಮಾಜಿ ಜಿಪಂ ಸದಸ್ಯೆ ಮಂಜುಳರಾಜ್‌,

-ಮೈಸೂರು ನಗರಪಾಲಿಕೆ ಸದಸ್ಯ ಪ್ರಶಾಂತ್‌ಗೌಡ, ತಾಪಂ ಸದಸ್ಯ ಕೀರ್ತಿಕುಮಾರ್‌, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ನರಸಿಂಹಸ್ವಾಮಿ, ಮುಖಂಡ ಸೋಮಶೇಖರ್‌, ಬೀರಿಹುಂಡಿ ಬಸವಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಕೆ.ಹೊಲದಪ್ಪ, ಪುರಾತತ್ವ ಇಲಾಖೆ ನಿವೃತ್ತ ಅಧಿಕಾರಿ ರಾಮಚಂದ್ರಯ್ಯ,  ಕೃಷ್ಣಪ್ಪ, ಬಸವರಾಜು, ಪಾಷಾ, ಮಂಚೇಗೌಡ ಇತರರು ಇದ್ದರು.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.