![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 14, 2021, 4:25 PM IST
ಮೈಸೂರು: ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲರೂ ಬಿಜೆಪಿ ಟೀಂ. ನಾವು 17 ಮಂದಿ ಶಾಸಕರು ಅಗತ್ಯಬಿದ್ದರೆ ಮತ್ತೊಮ್ಮೆ ಸಭೆ ಸೇರಲಿದ್ದೇವೆ. ಹಾಗಂತ ಅದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ನೂತನ ಸಚಿವ ಆರ್.ಶಂಕರ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಗುರು ಹೆಚ್.ವಿಶ್ವನಾಥ್, ಮುನಿರತ್ನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಪಕ್ಷದ ಚೌಕಟ್ಟಿನಲ್ಲಿದ್ದಾಗ ಇತಿಮಿತಿಯೊಳಗೆ ಇರಬೇಕಾಗುತ್ತದೆ. ಸಚಿವ ನಾಗೇಶ್‌ಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ. ನನಗೆ ಯಾವುದೇ ಖಾತೆ ನೀಡಿದರೂ ಶಕ್ತಿಮೀರಿ ಕೆಲಸ ಮಾಡುತ್ತೇನೆ ಎಂದರು.
ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ಅಳದೆ ಇದ್ದರೆ ತಾಯಿ ಕೂಡ ಮಗುವಿಗೆ ಹಾಲು ನೀಡುವುದಿಲ್ಲ. ನಮ್ಮ ಹೋರಾಟ ಯಾರ ವಿರುದ್ದವೂ ಅಲ್ಲ, ಗಮನ ಸೆಳೆಯಲು ಮಾತ್ರ ಹೋರಾಟ. ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿದ್ದಾರೆ. ನಾನು ಕುರುಬ ಸಮಾಜದ ಸಾಮಾನ್ಯ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತೇನೆ ಎಂದರು.
ಇದನ್ನೂ ಓದಿ:ಮುನಿರತ್ನ, ವಿಶ್ವನಾಥ್ ಇಬ್ಬರಿಗೂ ಉನ್ನತ ಸ್ಥಾನಮಾನ ಸಿಗಲಿದೆ: ನಾರಾಯಣಗೌಡ
ಮೊದಲು ರಾಜ್ಯ ಸರ್ಕಾರ ನಿಲುವು ಸ್ಪಷ್ಟ ಪಡಿಸಲಿ ಎಂಬ ಸಿದ್ದರಾಮಯ್ಯ ಸವಾಲಿಗೆ ಉತ್ತರಿಸಿದ ಅವರು, ಈಗ ನಾವು ಕುರುಬ ಸಮುದಾಯದ ನಾಲ್ಕು ಜನ ಸಚಿವರಿದ್ದೇವೆ. ಕ್ಯಾಬಿನೆಟ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ ಎಂದರು.
You seem to have an Ad Blocker on.
To continue reading, please turn it off or whitelist Udayavani.