ಪಠ್ಯಪುಸ್ತಕ ವಿಚಾರದಲ್ಲಿ ಬಿಜೆಪಿ ಮಾಡಿದ ಎಡವಟ್ಟು ಸರಿ ಮಾಡುತ್ತೇವೆ: ಸಚಿವ ಮಹದೇವಪ್ಪ
Team Udayavani, May 30, 2023, 3:13 PM IST
ಮೈಸೂರು: ಬಿಜೆಪಿ ಪಠ್ಯ ಪುಸ್ತಕ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನು ನಾವು ತಿದ್ದುತ್ತೇವೆ. ಇತಿಹಾಸ ಪುರುಷರನ್ನೇ ಇವರು ಇತಿಹಾಸ ಪುರುಷರಲ್ಲ ಎಂದು ಹೇಳಿದ್ದಾರೆ. ಈ ತಪ್ಪು ತಿದ್ದಬೇಕು ತಾನೇ? ನಾವು ಚುನಾವಣೆಗೆ ಮುನ್ನವೂ ಈ ವಿಚಾರವನ್ನು ಹೇಳಿದ್ದೇವೆ. ಈಗ ಅದನ್ನು ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಬರೆದಿದ್ದೆ ಇತಿಹಾಸವಲ್ಲ. ವಾಸ್ತವ ಸತ್ಯವನ್ನು ಪಠ್ಯದಲ್ಲಿ ಇಡುತ್ತೇವೆ. ಸತ್ಯ ಅಲ್ಲದನ್ನು ತೆಗೆದು ಹಾಕುತ್ತೇವೆ ಎಂದರು.
ಬಿಜೆಪಿಗೆ ಆಡಳಿತ ವಿರೋಧಿ ಅಲೆಯಿತ್ತು. ಆ ವಿರೋಧಿ ಅಲೆ ಜೊತೆಗೆ ನಮ್ಮ ಗ್ಯಾರೆಂಟಿಯನ್ನು ನೋಡಿ ಜನ ಬಹುಮತ ಕೊಟ್ಟಿದ್ದಾರೆ. ಈಗ ಬಿಜೆಪಿ ತಮ್ಮ ಆಡಳಿತ ವಿರೋಧಿ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಉಗುಳು ಹಚ್ಚುವ ಕೆಲಸವನ್ನು ಮಾಡುತ್ತಿದೆ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಜನರು ಅತೀವ ಸಂಕಷ್ಟದಲ್ಲಿದ್ದರು. ಇದರಿಂದ ಬಿಜೆಪಿ ರಾಜ್ಯದಲ್ಲಿ ತಿರಸ್ಕೃತವಾಗಿದೆ. ಈ ಚರ್ಚೆಯನ್ನು ಮರೆ ಮಾಚಲು ಗ್ಯಾರಂಟಿ ಕಾರ್ಡ್ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ. ಇನ್ನೂ ಸರ್ಕಾರ ಕುಳಿತೇ ಇಲ್ಲ. ಅಷ್ಟು ತರಾತುರಿಯಲ್ಲಿ ಗ್ಯಾರಂಟಿ ಅನುಷ್ಟಾನಕ್ಕೆ ಬಿಜೆಪಿಯವರು ಒತ್ತಾಯ ಮಾಡುತ್ತಿದ್ದಾರೆ. ಬಿಜೆಪಿಯ ಈ ತಂತ್ರ ಜನರಿಗೆ ಅರ್ಥವಾಗುತ್ತಿದೆ ಎಂದರು.
ಮೋದಿಯವರು 2013ರಲ್ಲಿ ಕೊಟ್ಟ ಭರವಸೆ ಈಡೇರಿದೆಯೇ? 15 ಲಕ್ಷ ಹಣ ಜನರ ಖಾತೆಗೆ ಬಂದಿದ್ಯಾ? ಮೊದಲು ಬಿಜೆಪಿ ಇದಕ್ಕೆ ಉತ್ತರ ಕೊಡಲಿ. ನಾವು ಗ್ಯಾರಂಟಿಯ ಬಗ್ಗೆ ಜನರಿಗೆ ಏನೂ ಹೇಳಿದ್ದೇವೆಯೋ ಅದನ್ನು ಮಾಡುತ್ತೇವೆ. ಸಿಎಂ ಈ ವಿಚಾರದಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಮಹದೇವಪ್ಪ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.