ದರ್ಶನಕ್ಕೆ ಹೋದವರು ಆಸ್ಪತ್ರೆಗೆ…
Team Udayavani, Oct 21, 2017, 12:53 PM IST
ಹುಣಸೂರು: ಬೆಟ್ಟದಪುರದ ಸಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ಟಾಟಾ ಎಸಿ ಗೂಡ್ಸ್ ವಾಹನ ಪಲ್ಟಿಯಾಗಿ ಚಾಲಕ ಸೇರಿದಂತೆ 7 ಮಂದಿಗೆ ತೀವ್ರಗಾಯವಾಗಿರುವ ಘಟನೆ ತಾಲೂಕಿನ ಕಟ್ಟೆ ಮಳಲವಾಡಿ ಕೊಪ್ಪಲಿನಲ್ಲಿ ಶುಕ್ರವಾರ ನಡೆದಿದೆ.
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಕೊಪ್ಪಲು ಗ್ರಾಮದ ವಾಸಿಗಳಾದ ಗಜೇಂದ್ರ ನಾಲ್ಕು ಬೆರಳು ಕಳೆದುಕೊಂಡರೆ, ಕಿರಣ್, ಮಂಜು, ಲೋಕೇಶ್, ಚಂದ್ರಶೇಖರ್, ಗುರುಕಿರಣ್, ಪ್ರೇಮಕುಮಾರ್‌ರಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಉಳಿದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಿಡ್ಲುಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ದೀಪವಾಳಿ ಹಬ್ಬವಾದ ಶುಕ್ರವಾರ ಕೆ.ಎಂ.ವಾಡಿ.ಕೊಪ್ಪಲಿನ 30ಕ್ಕೂ ಹೆಚ್ಚು ಯುವಕರು ಟಾಟಾ ಎಸಿ.ಗೂಡ್ಸ್ ವಾಹನದಲ್ಲಿ ತೆರಳುತ್ತಿದ್ದರು. ಗ್ರಾಮದಿಂದ 5 ಕಿ.ಮೀ ದೂರ ಸಾಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಹೊಡೆಯಿತು.
ಪರಿಣಾಮ ಚಾಲಕ ಮಹದೇವ್ ಸೇರಿದಂತೆ ಗೂಡ್ಸ್ ವಾಹನದಲ್ಲಿದ್ದ ಕಟ್ಟೆಮಳಲವಾಡಿಕೊಪ್ಪಲು ಗ್ರಾಮದ ವಾಸಿಗಳಾದ ಗಜೇಂದ್ರ ನಾಲ್ಕು ಬೆರಳು ಕಳೆದುಕೊಂಡರೆ, ಕಿರಣ್, ಮಂಜು, ಲೋಕೇಶ್, ಚಂದ್ರಶೇಖರ್, ಗುರುಕಿರಣ್, ಪ್ರೇಮಕುಮಾರ್‌ರಿಗೆ ತೀವ್ರ ಗಾಯಗಳಾಗಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್