ನಾಲೆಗಳಿಗೆ ಈಗ ನೀರು ಬಿಟ್ಟರೆ ಏನು ಪ್ರಯೋಜನ
Team Udayavani, Sep 28, 2017, 1:01 PM IST
ಭೇರ್ಯ: ತಾನು ನಾಲೆಗಳಿಗೆ ನೀರು ಬಿಡಿ ಎಂದು 6 ದಿನಗಳು ಧರಣಿ ಕುಳಿತಾಗಲೇ ನೀರು ಬಿಟ್ಟಿದ್ದರೇ ರಾಜ್ಯದ ಅನ್ನದಾತರು ಭತ್ತ ಬೆಳೆಯುತ್ತಿದ್ದರು. ಆದರೆ, ಸರ್ಕಾರದ ಅವೈಜಾnನಿಕ ನೀತಿಯಿಂದ ಈಗ ನಾಲೆಗಳಿಗೆ ನೀರು ಬಿಟ್ಟರೆ ಏನು ಪ್ರಯೋಜನ ಎಂದು ಶಾಸಕ ಸಾ.ರಾ.ಮಹೇಶ್ ಗುಡುಗಿದರು. ಭೇರ್ಯ ಗ್ರಾಮದಲ್ಲಿ ಬುಧವಾರ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 27ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲಿನ ಡೇರಿಗಳು ರೈತರಿಗೆ ವರದಾನವಾಗಿದ್ದು, ಈ ಎರಡೂ ಸಂಸ್ಥೆಗಳು ಸಂಕಷ್ಟದಲ್ಲಿರುವ ಅನ್ನದಾತ ಆರ್ಥಿಕವಾಗಿ ಚೇತರಿಸಿಕೊಳ್ಳಲು ನೆರವಾಗಿವೆ ಎಂದು ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಸಿಗುತ್ತಿರುವುದರಿಂದ ರೈತರು ನಿರಾತಂಕವಾಗಿ ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಅಲ್ಲದೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಕಾಲದಲ್ಲಿ ಹಣ ನೀಡುತ್ತಿರುವುದು ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಆತ್ಮಹತ್ಯೆಗೆ ಮುಂದಾಗದಿರಿ: ದೇಶದ ಬೆನ್ನೆಲುಬು ರೈತ ಎಂದೂ ಆತ್ಮಹತ್ಯೆಗೆ ಮುಂದಾಗ ಬಾರದು, ಸಾಲಕ್ಕೆ ಅಂಜದೆ ಧೈರ್ಯವಾಗಿ ಜೀವನ ಸಾಗಿಸಬೇಕು. ಸರ್ಕಾರ ಲಕ್ಷಾಂತರ ಕೋಟಿ ರೂ.ಸಾಲ ಮಾಡಿದ್ದು, ಸಿದ್ದರಾಮಯ್ಯನವರ ಸರ್ಕಾರ ವರ್ಷಕ್ಕೆ 40 ಸಾವಿರ ಕೋಟಿಯಂತೆ 5 ವರ್ಷಕ್ಕೆ ಸುಮಾರು 2 ಲಕ್ಷ ಕೋಟಿಯಷ್ಟು ಸಾಲ ಮಾಡಿದ್ದಾರೆ. ಇವರೇ ನಿರುಮ್ಮಳವಾಗಿರುವಾಗ ರೈತರು ಕೆಲವೇ ಲಕ್ಷ ಸಾಲ ಮಾಡಿ ಆತ್ಮಹತ್ಯೆಯತ್ತ ಮುಖ ಮಾಡುವುದು ಸರಿಯಲ್ಲ ಎಂದು ಮನವಿ ಮಾಡಿದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಡಿ ನಮ್ಮ ಬ್ಯಾಂಕ್ ವ್ಯಾಪ್ತಿಯಲ್ಲಿ 9500 ರೈತರ ಸುಮಾರು 36 ಕೋಟಿ ರೂ.ಬೆಳೆಸಾಲ ಮನ್ನಾವಾಗಿದೆ. ಮೊದಲು ಸಾಲಮನ್ನಾ ಆಗುತ್ತಿದ್ದಂತೆ ತನಗೆ ಮೊದಲು ಕರೆ ಮಾಡಿ ತಮ್ಮ ತಾಲೂಕಿನಲ್ಲಿ ಎಷ್ಟು ಕೋಟಿ ಸಾಲ ಮನ್ನಾ ಆಗಿದೆ ಎಂದು ಕೇಳಿದ ಜಿಲ್ಲೆಯ ಏಕೈಕ ಶಾಸಕ ಸಾ.ರಾ.ಮಹೇಶ್ ಎಂದು ತಿಳಿಸಿದರು.
20 ಮಂದಿ ಇರುವ ಮಹಿಳಾ ಸಂಘದ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದ ವರೆಗೂ ಸಾಲ ನೀಡಲಾಗುತ್ತದೆ. ಆದರೆ, ಒಂದು ವರ್ಷದೊಳಗೆ ಕಡ್ಡಾಯವಾಗಿ ಸಾಲ ಮರು ಪಾವತಿಯಾಗಬೇಕು. ಈ ಯೋಜನೆಗಾಗಿ ನಮ್ಮ ಶಾಖೆಯ ಮೇಲ್ವಿಚಾರಕರು ನಿಮ್ಮ ಗ್ರಾಮಕ್ಕೆ ಬಂದು ಸಂಘದ ಸದಸ್ಯರ ಜತೆಯಲ್ಲಿ ಚರ್ಚಿಸಿ ಸಾಲ ಮಂಜೂರು ಮಾಡುತ್ತಾರೆಂದರು.
ಶಾಸಕರನ್ನು ಹೊಗಳಿದ ಜಿಲ್ಲಾ ಬ್ಯಾಂಕ್ ಅಧ್ಯಕ್ಷ: ನಮ್ಮ ಬ್ಯಾಂಕ್‌ನಿಂದ ಹೋಬಳಿ ಮಟ್ಟದಲ್ಲಿ ಆರು ಲಕ್ಷದವರೆಗೂ ಹೈನುಗಾರಿಗೆ ಸಾಲವನ್ನು ಶೇ.25ರಷ್ಟು ಸಹಾಯಧನದಲ್ಲಿ ನೀಡುವುದರ ಜತೆಗೆ ಗೃಹಸಾಲ ನೀಡುತ್ತೇವೆ. ಇದಕ್ಕೆ ಕಾರಣಕರ್ತರು ಶಾಸಕರಾದ ಸಾ.ರಾ.ಮಹೇಶಣ್ಣ ಎಂದು ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಹೊಗಳಿದರು.
ಗ್ರಾಪಂ ಅಧ್ಯಕ್ಷ ಶಿವಶಂಕರ್, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಹದೇವಪ್ಪ, ನಿರ್ದೇಶಕರಾದ ಎ.ಟಿ.ಸೋಮಶೇಖರ್, ಅಮಿತ್ ದೇವರಹಟ್ಟಿ, ಕೆ.ಎಂ.ಶಿವಶಂಕರ್, ಎಸ್‌ಬಿಎಂ ಮಂಜು, ರಮೇಶ್, ಸಹಕಾರ ಮಹಾಮಂಡಲದ ಜಯರಾಂ, ಮೈಮುಲ್ ಅಧ್ಯಕ್ಷ ಕೆ.ಜೆ.ಮಹೇಶ್, ನಿರ್ದೇಶಕರಾದ ಈರೇಗೌಡ, ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ವಕ್ತಾರ ಕೆ.ಎಲ್.ರಮೇಶ್,
ಎಪಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಕುಪ್ಪಳ್ಳಿ ಸೋಮು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅರ್ಜುನಹಳ್ಳಿ ಗಣೇಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕರಾದ ಶಿವಕುಮಾರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.