“ಎಕ್ಸ್ ಖಾತೆಯಲ್ಲಿ ಬಂದ ವಿಡಿಯೋ ಧ್ವನಿ ಯಾರದ್ದು’
Team Udayavani, Nov 13, 2024, 9:45 PM IST
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಬಿಡುಗಡೆಯಾದ ವಿಡಿಯೋ ಧ್ವನಿ ಯಾರದ್ದು ಎಂದು ಬಹಿರಂಗಪಡಿಸುವಂತೆ ಸ್ನೇಹ ಮಯಿ ಕೃಷ್ಣ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌ಗೆ ಸವಾಲು ಹಾಕಿದ್ದಾರೆ.
ರಾಜ್ಯ ದಲ್ಲಿ ನಿಮ್ಮದೇ ಸರ್ಕಾರ ಇದೆ. ಸಿಎಂ ಎಕ್ಸ್ ಖಾತೆಯಲ್ಲಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಕೇಳಿ ಬರುವ ಧ್ವನಿ ಯಾರದ್ದು ಅಂತ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆದುಕೊಂಡು, ಆ ವರದಿಯನ್ನು ಬಿಡುಗಡೆ ಮಾಡಿರಿ. ನನ್ನ ಧ್ವನಿ ಎಂದು ವರದಿ ಬಂದರೆ ನಾನು ಹೋರಾಟ ನಿಲ್ಲಿಸುತ್ತೇನೆ. ನಿಮ್ಮ ಧ್ವನಿ ಅಂತ ವರದಿ ಬಂದರೆ ನೀವು ರಾಜಕೀಯ ನಿವೃತ್ತಿ ಆಗುತ್ತೀರಾ. ನನ್ನ ಧ್ವನಿಯನ್ನು ನನ್ನ ಧÌನಿ ಎಂದು ಒಪ್ಪಿಕೊಳ್ಳದ ಹೇಡಿ ಎಂದು ಜನ ನಿಮ್ಮ ಬಗ್ಗೆ ಅಭಿಪ್ರಾಯಪಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮಣ್ ವಿರುದ್ಧ ಸ್ನೇಹಮಯಿ ಕೃಷ್ಣ ಮತ್ತೆ ಕಿಡಿಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆಕ್ಷೇಪಾರ್ಹ ಹೇಳಿಕೆ: ಸೋನಿಯಾ ಗಾಂಧಿ, ರಾಹುಲ್ ವಿರುದ್ಧ ಹಕ್ಕುಚ್ಯುತಿ?
Ayodhya: ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶ್ವವಾಯು
Toll Fee: ಪ್ರಯಾಣಿಕರ ಅನುಕೂಲಕ್ಕೆ ಏಕರೂಪ ಟೋಲ್ ಜಾರಿ ಚಿಂತನೆ: ಕೇಂದ್ರ ಸಚಿವ ಗಡ್ಕರಿ
Compliant: ಸುಳ್ಳು ಮಾಹಿತಿ ಪ್ರಸಾರ: ವೆಬ್ಸೈಟ್ಗಳ ವಿರುದ್ಧ ಆರಾಧ್ಯಾ ಬಚ್ಚನ್ ದೂರು
ನನ್ನಲ್ಲಿ ಹಣವೇ ಇಲ್ಲ: ಕಿನ್ನಾರ್ ಅಖಾಡದಿಂದ ಹೊರಬಿದ್ದ ನಟಿ ಮಮತಾ ಕುಲಕರ್ಣಿ!