ಕಾಡು ಪ್ರಾಣಿಗಳಿಗೂ ತಟ್ಟಿದ ಬೇಸಿಗೆಯ ಬಿಸಿ
Team Udayavani, Apr 4, 2017, 11:49 AM IST
ಎಚ್.ಡಿ.ಕೋಟೆ: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಮನುಕುಲವಷ್ಟೇ ಅಲ್ಲದೆ ಪ್ರಾಣಿ ಸಂಕುಲ ಕೂಡ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಹಾಗಾಗಿ ವನ್ಯ ಜೀವಿಗಳು ನೀರಿಗಾಗಿ ಅರಣ್ಯ ತೊರೆದು ನಾಡಿನತ್ತ ಧಾವಿಸುತ್ತಿರುವ ದೃಶ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಎಚ್.ಡಿ.ಕೋಟೆ ತಾಲೂಕಿನ ಪೊ ನಂಜುಂಡಪ್ಪ ನವರ ವರದಿಯಂತೆ ತೀರಾ ಹಿಂದುಳಿದ ತಾಲೂಕು ಅನ್ನುವ ಹಣೆ ಪಟ್ಟಿ ಕಟ್ಟಿಕೊಂಡಿದೆಯಾದರೂ ಭೌಗೋಳಿಕವಾಗಿ ವಿಶಾಲವಾದ ಅರಣ್ಯ ಸಂಪತ್ತು ಹೊಂದಿರುವ ತಾಲೂಕು. ತಾಲೂಕಿನಲ್ಲಿ ಕಬಿನಿ, ತಾರಕ, ನುಗು ಹಾಗೂ ಹೆಬ್ಬಳ್ಳ 4 ಜಲಾಶಯಗಳಿವೆಯಾದರೂ ಜಲಾಶಯಗಳ ನಿರ್ಮಾಣದ ಸಂದರ್ಭದಲ್ಲಿ ಹಿನ್ನೀರಿನ ಭಾಗದ ತಾಲೂಕಿನ ಜನತೆ ನೆಲೆ ಕಳೆದುಕೊಂಡಿರುವುದು ಹೊರತು ಪಡಿಸಿದರೆ ಜಲಾಶಯಗಳಿಂದ ತಾಲೂಕಿನ ಜನತೆಗೇನು ಅಷ್ಟಾಗಿ ಉಪಯೋಗವಿಲ್ಲ.
ಆದರೂ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾದರೂ ಯಾರೂ ಕೇಳಿಲ್ಲ ಅಂದರೆ ತಪ್ಪಾ ಗಲಾರದು. ಕಳೆದ ಸಾಲಿನಲ್ಲಿ ತಾಲೂಕಷ್ಟೇ ಅಲ್ಲದೆ ರಾಜ್ಯದೆಲ್ಲೆಡೆ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ಅಂತರ್ಜಲದ ನೀರಿನ ಮಟ್ಟ ಕುಗ್ಗಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ತತ್ತರಿಸುವಂತಾಗಿದೆ.
ಬತ್ತಿದ ಕೆರೆಕಟ್ಟೆ ಮತ್ತು ಜಲಾಶಯಗಳು: ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ರಾಜ್ಯ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲಾ ಕೆರೆಕಟ್ಟೆಗಳು ಬತ್ತಿ ನೆಲ ಬಿರಿದು ಬಾಯೆ¤ರೆದಿವೆ. ಕುಡಿಯುವ ನೀರಿಗಾಗಿ ಜನ ಪರಿತಪಿಸುವುದು ಒಂದು ಕಡೆಯಾದರೂ ಅದೇಗೋ ಪ್ರಯಾಸ ಪಟ್ಟಾದರೂ ನೀರಿನ ಸಮಸ್ಯೆ ಸರಿದೂಗಿಸಿಕೊಳ್ಳುವ ಚಾಕಚಕ್ಯತೆ ಮನುಷ್ಯರಿಗಿದೆ. ಆದರೆ ಅರಣ್ಯದಲ್ಲಿ ವಾಸಿಸುವ ವನ್ಯ ಜೀವಿಗಳು ಪಕ್ಷ ಸಂಕುಲಗಳಿಗೆ ನೀರಿಲ್ಲದೇ ನೀರಿಗಾಗಿ ಕಾಡು ಬಿಟ್ಟು ನಾಡಿನತ್ತ ಮುಖ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಅರಣ್ಯದಲ್ಲಿ ನೀರು ಲಭ್ಯವಾಗುತ್ತಿಲ್ಲ: ವನ್ಯ ಜೀವಿಗಳ ಕುಡಿಯುವ ನೀರಿಗಾಗಿ ಸರ್ಕಾರ ಅರಣ್ಯದೊಳಗಿನ ಕೆರೆಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ ನೀರು ಶೇಖರಣೆ ಮಾಡಿದೆಯಾದರೂ ಬೇಸಿಗೆಯ ತಾಪಮಾನಕ್ಕೆ ಅರಣ್ಯದೊಳಗಿದ್ದ ಎಲ್ಲಾ ಕೆರೆಕಟ್ಟೆಗಳ ನೀರು ಮಾಯವಾಗಿ ವನ್ಯಜೀವಿಗಳ ದಾಹ ತಣಿಸಲು ಹನಿ ನೀರು ಲಭ್ಯವಾಗುತ್ತಿಲ್ಲ.
ಹಾಗಾಗಿ ನೀರಿಗಾಗಿ ಕಾಡಿನಿಂದ ನಾಡಿಗೆ ಧಾವಿಸುವ ವನ್ಯ ಜೀವಿಗಳ ನೀರಿನ ಪಾಡು ಹೇಳ ತೀರದಾಗಿದೆ. ನೀರಿಗಾಗಿ ನಾಡಿಗೆ ಬರುವ ವನ್ಯ ಜೀವಿಗಳ ಮೇಲೆ ಅಲ್ಲಲ್ಲಿ ಮನಷ್ಯರು ದಾಳಿ ನಡೆಸುವ ಸಾಧ್ಯತೆಗಳಿದ್ದು ನೀರಿಗಾಗಿ ವನ್ಯ ಜೀವಿಗಳು ಜೀವ ಕೈಯಲ್ಲಿಡಿದು ಬಂದು ನಾಡಿನ ಅಲ್ಲಲ್ಲಿ ಲಭ್ಯವಾಗುವ ಬೊಗಸೆ ನೀರು ಕುಡಿದು ನಿರ್ಗಮಿಸಬೇಕಾದಸ್ಥಿತಿ ಇದೆ.
ಕಬಿನಿ ನೀರಿನಲ್ಲೂ ಇಳಿಮುಖ: ಇನ್ನು ತಾಲೂಕಿನಲ್ಲಿರು ನಾಗರಹೊಳೆ, ಗುಂಡ್ರೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳು ಕಬಿನಿ ಹಿನ್ನೀರಿನಲ್ಲಿದ್ದು ಅರಣ್ಯದಲ್ಲಿ ನೀರು ಸಿಗದ ಹಿನ್ನೆಲೆ ಆನೆ, ಹುಲಿ ಸೇರಿದಂತೆ ಬಹುತೇಕ ಎಲ್ಲಾ ಕಾಡುಪ್ರಾಣಿಗಳೂ ನೀರಿಗಾಗಿ ಕಬಿನಿ ಹಿನ್ನೀರಿಗೆ ಆಗಮಿಸುವುದು ಸಾಮಾನ್ಯವಾಗಿತ್ತು.
ಆದರೆ ಹಿಂದೆಂದೂ ಕಬಿನಿ ಜಲಾಶಯದ ಹಿನ್ನೀರು ಬತ್ತಿದ ನಿದರ್ಶನ ಇಲ್ಲದಿದ್ದರೂ ಕಳೆದ ಸಾಲಿನಲ್ಲಿ ಮಳೆಯ ಆಭಾವದಿಂದ ಪ್ರಸಕ್ತ ಬೇಸಿಗೆಯಲ್ಲಿ ಕಬಿನಿ ಜಲಾಶಯದ ಒಡಲು ಸಂಪೂರ್ಣವಾಗಿ ಬತ್ತಿಹೋಗಿದೆ. ಇದರಿಂದ ಮತ್ತಷ್ಟು ಆಗಾತಕ್ಕೊಳಗಾದ ವನ್ಯ ಜೀವಿಗಳು ಸಂಜೆಯಾಗುತ್ತಿದ್ದಂತೆಯೇ ಕಬಿನಿ ಹಿನ್ನೀರಿನತ್ತ ಧಾವಿಸಿ ನೀರಿಗಾಗಿ ಪರಿತಪಿಸುವ ದೃಶ್ಯಾವಳಿಗಳಂತೂ ನೋಡುಗರ ಮನ ಕಲಕುವಂತಿದೆ.
ಹೆಚ್ಚಿದ ತಾಪಮಾನ: ಎಲ್ಲೆಲ್ಲೂ ಅಂತರ್ಜಲದ ನೀರಿನ ಮಟ್ಟ ಕುಸಿದ ಹಿನ್ನೆಲೆ ತಾಲೂಕಿನಾದ್ಯಂತ ಹಿಂದೆಂದೂ ಕಂಡೂ ಕೇಳರಿಯದಷ್ಟು ಉಷ್ಣಾಂಶ ಹೆಚ್ಚಾಗಿದೆ. ಬೆಳಗಿನ ಬೇಸಿಗೆಯ ಬಿಸಿಲಿನ ತಾಪಮಾನಕ್ಕೆ ದಿನ ಕಳೆಯುವುದು ಒಂದು ಕಡೆ ಕಷ್ಟಕರ ಎನಿಸಿದರೂ ರಾತ್ರಿಯಂತೂ ಸಹಿಸ ಲಾಗದ ತಾಪಮಾನಕ್ಕೆ ನೆಮ್ಮದಿಯಿಂದ ನಿದ್ರಿಸುವುದೂ ಕಷ್ಟಕವಾಗುತ್ತಿದೆ.
ಎಷ್ಟು ಬೇಗ ರಾತ್ರಿ ಕಳೆಯುವುದೋ ಅನ್ನುವುದು ಕಡೆಯಾದರೆ ಬೆಳಗಾಗುತ್ತಿದ್ದಂತೆಯೇ ಬೆಳಗಿನ ತಾಪಕ್ಕಿಂತ ಎಷ್ಟು ಬೇಗ ರಾತ್ರಿಯಾಗಿ ತಣ್ಣನೆಯ ವಾತಾವರಣ ನಿರ್ಮಾಣವಾಗುವುದೋ ಅನ್ನುವ ತವಕ ಮತ್ತೂಂದು ಕಡೆ ಉದ್ಬವಿಸಿ ಒಟ್ಟಾರೆ ಇಡೀ ದಿನದ ತಾಪಮಾನಕ್ಕೆ ತೆರೆ ಎಳೆಯಲು ಯಾವಾಗ ಧರೆಗೆ ವರುಣನ ಆಗಮನವಾಗುವುದೋ ಅನ್ನುವ ನಿರೀಕ್ಷೆಯಲ್ಲಿ ಜನರಷ್ಟೇ ಅಲ್ಲದೆ ಪ್ರಾಣಿ ಸಂಕುಲ ಕೂಡ ತವಕದಲ್ಲಿವೆ.
* ಎಚ್.ಬಿ.ಬಸವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.