ಕಲೋತ್ಸವದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ
Team Udayavani, Dec 18, 2018, 11:27 AM IST
ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಉತ್ತಮ ಪ್ರತಿಭಾ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ತಂಡ ಬಹುಮಾನ ಗಳಿಸಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಬಹುಮಾನ 10 ಸಾವಿರ ರೂ. ನಗದು, ದ್ವಿತೀಯ 5 ಸಾವಿರ ರೂ., ತೃತೀಯ ಬಹುಮಾನಕ್ಕೆ 3 ಸಾವಿರ ರೂ. ಬಹುಮಾನ ನೀಡಲಾಯಿತು. ಕಲೋತ್ಸವದಲ್ಲಿ ಸಮೂಹ ವಿಭಾಗದಲ್ಲಿ ಪ್ರಥಮ ಬಹುಮಾನ 60 ಸಾವಿರ ರೂ. ನಗದು, ದ್ವಿತೀಯ 30 ಸಾವಿರ, ತೃತೀಯ 18 ಸಾವಿರ ರೂ. ಬಹುಮಾನ ನೀಡಲಾಯಿತು.
ಕನ್ನಡ ಭಾಷಣ ಸ್ಪರ್ಧೆ: ನಂದಿನಿ ಪ್ರಶಾಂತ ಸಾವಂತ್, ಸೇಂಟ್ ಮೈಕಲ್ಸ್ ಕಾನ್ವೆಂಟ್ ಹೈಸ್ಕೂಲ್, ಕಾರವಾರ (ಪ್ರಥಮ), ಪ್ರದ್ಯುಮ್ನಮೂರ್ತಿ, ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಡಬಿದರೆ, ದಕ್ಷಿಣ ಕನ್ನಡ ಜಿಲ್ಲೆ (ದ್ವಿತೀಯ), ಸುಪ್ರೀತಾ ಕೆ.ಎಂ., ಶ್ರೀರಾಜೇಶ್ವರಿ ಪ್ರೌಢಶಾಲೆ, ಚೇರಂಬಾಣೆ, ಮಡಿಕೇರಿ (ತೃತೀಯ).
ತೆಲುಗು ಭಾಷಣ: ದೀಪ್ತಿ ಡಿ., ನೇತಾಜಿ ಪ್ರೌಢಶಾಲೆ, ಕರೂರು, ಬಳ್ಳಾರಿ ಜಿಲ್ಲೆ (ಪ್ರಥಮ), ರಾಹುಲ್ ಯಾದವ ಐ.ಜಿ.,ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಪುತ್ತಿಗೆ,ಮೂಡಬಿದರೆ (ದ್ವಿತೀಯ), ಪ್ರಿಯಾಂಕ ಗೀಡಾ ಗುನಗಿ, ನ್ಯೂ ಹೈಸ್ಕೂಲ್, ಕಿನ್ನರ , ಕಾರವಾರ (ತೃತೀಯ).
ರಂಗೋಲಿ ಸ್ಪರ್ಧೆ: ಭೂಮಿಕ ಎಂ., ಸರ್ಕಾರಿ ಪ್ರೌಢಶಾಲೆ, ಎ.ಚೋಳೇನಹಳ್ಳಿ, ಹಾಸನ ಜಿಲ್ಲೆ (ಪ್ರಥಮ), ಜ್ಯೋತಿ ಎಸ್.ಮೋದಗಿ ,ಸರ್ಕಾರಿ ಪ್ರೌಢಶಾಲೆ,ಹುದಲಿ, ಬೆಳಗಾವಿ ಜಿಲ್ಲೆ (ದ್ವಿತೀಯ), ಧರಿತ್ರಿ, ಎಸ್‌ಡಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಧರ್ಮಸ್ಥಳ (ತೃತೀಯ).
ಭಾವಗೀತೆ ಸ್ಪರ್ಧೆ: ಭೂಮಿ ದಿನೇಶ್ ಹೆಗ್ಡೆ, ಶಿರಸಿ ಲಯನ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಶಿರಸಿ (ಪ್ರಥಮ), ಚೈತ್ರ ಉಮಾಕಾಂತ ಹೆಬ್ಟಾರ, ಶ್ರೀ ಶಿವಶಾಂತಿಕ ಪರಮೇಶ್ವರಿ ಪ್ರೌಢಶಾಲೆ, ಮಾರುಕೇರಿ, ಉತ್ತರ ಕನ್ನಡ ಜಿಲ್ಲೆ (ದ್ವಿತೀಯ), ರಕ್ಷಾ ರಮೇಶ ಡಿ.ಆರ್., ಚಿನ್ಮಯ ವಿದ್ಯಾಲಯ, ಕೋಲಾರ (ತೃತೀಯ).
ಛದ್ಮವೇಶ ಸ್ಪರ್ಧೆ: ಬೆಂಗಳೂರಿನ ಉತ್ತರ ಹಳ್ಳಿಯ ಸರಸ್ವತಿ ವಿದ್ಯಾಮಂದಿರದ ಕಾವ್ಯ ಕೆ.ಎಸ್. (ಪ್ರಥಮ),ಸಚಿನ್ ಆರ್.ಗಿರಿ, ನ್ಯೂ ಹೈಸ್ಕೂಲ್, ಕಿತ್ತೂರು, ಬೆಳಗಾವಿ (ದ್ವಿತೀಯ), ಐಶ್ವರ್ಯ ಎಂ.ಕಾಶೆಟ್ಟಿ, ಎಲ್‌ಇಎಂಎಸ್ ಪ್ರೌಢಶಾಲೆ, ಹಾವೇರಿ (ತೃತೀಯ).
ಕಲೋತ್ಸವದಲ್ಲಿ ಸಮೂಹ ನೃತ್ಯಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಸರ್ಕಾರಿ ಪ್ರೌಢಶಾಲೆ ತಂಡ ಪ್ರಥಮ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಶಿವಪುರ ಗ್ರಾಮದ ಪೂರ್ಣಪ್ರಜ್ಞ ಪ್ರೌಢಶಾಲೆ ತಂಡ ದ್ವಿತೀಯ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಎಸ್.ವಿ.ಎಸ್.ಕನ್ನಡ ಮಾಧ್ಯಮ ಶಾಲೆ ತಂಡ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ದೃಶ್ಯಕಲೆ ಸ್ಪರ್ಧೆಯಲ್ಲಿ ಹಾಸನದ ಗವೇನಹಳ್ಳಿ ಸರ್ಕಾರಿ ಪ್ರೌಢಶಾಲೆ ತಂಡ ಪ್ರಥಮ, ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕು ನೀರಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ತಂಡ ದ್ವಿತೀಯ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ತಂಡ ತೃತೀಯ ಬಹುಮಾನ ಗಳಿಸಿತು.
ಸಂಗೀತ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆ ಬಾದಮಿ ತಾಲೂಕು ಚಿಕ್ಕಮುಚ್ಚಳ ಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯದ ತಂಡ ಪ್ರಥಮ, ಧಾರವಾಡ ಜಿಲ್ಲೆ ಹಿರೇಹೊನ್ನಳ್ಳಿಯ ಕೆ.ಆರ್.ಸಿ.ಎಸ್. ಪ್ರೌಢಶಾಲೆ ತಂಡ ದ್ವಿತೀಯ,ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಇಂದ್ರಪ್ರಸ್ಥಾವಿದ್ಯಾಲಯದ ತಂಡ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ನಾಟಕ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆ ಕುಂದೂರು ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಂಡ ಪ್ರಥಮ, ಬೆಂಗಳೂರಿನ ಯಶವಂತಪುರದ ಬಾಪು ಪ್ರೌಢಶಾಲೆ ತಂದ ದ್ವಿತೀಯ,ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ತುಂಗಳ ಪ್ರೌಢಶಾಲೆ ತಂಡ ತೃತೀಯ ಬಹುಮಾನವನ್ನು ಗಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.