ಉತ್ಸಾಹದಿಂದ ಚಾಮುಂಡಿ ಬೆಟ್ಟ ಏರಿದ ನಾರಿಮಣಿಯರು
Team Udayavani, Jun 3, 2019, 3:00 AM IST
ಮೈಸೂರು: ನಗರದ ಚಾಮುಂಡಿ ಬೆಟ್ಟವ ಏರುವ ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಭಾಗವಹಸಿ, ಲಗುಬಗೆಯಿಂದ ಬೆಟ್ಟ ಹತ್ತಿದರು.
ತಿಪ್ಪವ್ವ ಸಣ್ಣಕ್ಕಿ ಪ್ರಥಮ: ಅಭ್ಯುದಯ ಮಹಿಳಾ ಸಮಾಜದ ಬೆಳ್ಳಿ ಹಬ್ಬದ ಪ್ರಯುಕ್ತ ಭಾನುವಾರ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಚಾಮುಂಡಿ ಬೆಟ್ಟದ ಪಾದದಿಂದ ಮೆಟ್ಟಲು ಹತ್ತುವ ಸ್ಪರ್ಧೆಯಲ್ಲಿ 13 ನಿಮಿಷದಲ್ಲಿ ಚಾಮುಂಡಿ ಬೆಟ್ಟ ಹತ್ತಿದ ತಿಪ್ಪವ್ವ ಸಣ್ಣಕ್ಕಿ 20-30 ವರ್ಷದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಅರ್ಚನಾ -ದ್ವಿತೀಯ, ವಿದ್ಯಾ -ತೃತೀಯ ಸ್ಥಾನ ಪಡೆದುಕೊಂಡರು. ರನಿತಾ ಮತ್ತು ತೇಜಸ್ವಿನಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದುಕೊಂಡರು.
ಸೌಮ್ಯಾ ಪ್ರಥಮ: 30-40 ವರ್ಷದ ವಿಭಾಗದಲ್ಲಿ 17 ನಿಮಿಷಕ್ಕೆ ಬೆಟ್ಟದ ಹತ್ತಿದ ಸೌಮ್ಯಾ ಪ್ರಥಮ ಸ್ಥಾನ ಪಡೆದರೆ, ಆಶಾ ನಾಗಾರಾಜು- ದ್ವಿತೀಯ, ಪ್ರತಿಮಾ ತೃತೀಯಾ, ದೀಪಿಕಾ 4ನೇ ಸ್ಥಾನ ಪಡೆದುಕೊಂಡರು.
ಪ್ರಥಮ ಬಹುಮಾನಕ್ಕೆ 3 ಸಾವಿರ ನಗದು, 2ನೇ ಸ್ಥಾನಕ್ಕೆ 2 ಸಾವಿರ, 3ನೇ ಸ್ಥಾನಕ್ಕೆ 1 ಸಾವಿರ, 4-5ನೇ ಸ್ಥಾನಕ್ಕೆ ತಲಾ 500 ರೂ. ಬಹುಮಾನವಾಗಿ ನೀಡಲಾಯಿತು.
ಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯುದಯ ಮಹಿಳಾ ಸಮಾಜ ಮಹಿಳೆಯರಾದ ಮಂಜುಳಾ -ಪ್ರಥಮ, ಲತಾ ಜಗದೀಶ್-ದ್ವಿತೀಯ, ಪುಷ್ಪಲತಾ-ತೃತೀಯ ಸ್ಥಾನ ಪಡೆದುಕೊಂಡರು.
ಬಹುಮಾನ ವಿತರಣೆ: ಎರಡು ಸಾವಿರ, ಒಂದು ಸಾವಿರ, ಐನೂರು ರೂ.ಗಳನ್ನು ಕ್ರಮವಾಗಿ ವಿಜೇತರಿಗೆ ಶಾಸಕ ಎಸ್.ಎ.ರಾಮದಾಸ್ ಅವರ ಆಸರೆ ಫೌಂಡೇಶನ್‌ನಿಂದ ವಿತರಿಸಲಾಯಿತು. ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಬೆಟ್ಟ ಹತ್ತಿಳಿದರು.
ಸಾಮಾಜಿಕ ಕಾರ್ಯ: ಇದಕ್ಕೂ ಮುನ್ನ ಬೆಟ್ಟ ಹತ್ತುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಜೆ.ಪಿ.ನಗರದ ಮಹಿಳಾ ಸಂಘ ಹಲವು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ. ಬೆಳ್ಳಿ ಹಬ್ಬ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ. ಈ ನಿಟ್ಟಿನಲ್ಲಿ ಇನ್ನುಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಶುಭ ಹಾರೈಸಿದರು.
ಅಭ್ಯುದಯ ಮಹಿಳಾ ಸಮಾಜದ ಅಧ್ಯಕ್ಷೆ ಸುಶೀಲ್ ನಾಗರಾಜು, ಕಾರ್ಯದರ್ಶಿ ಶೈಲಜಾ, ಗೌರವಾಧ್ಯಕ್ಷೆ ಲೋಕೇಶ್ವರಿ ಬಳ್ಳಯ್ಯ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.