ಬಿಎಸ್ಪಿ ಸಂಸದರ ಆಯ್ಕೆಗೆ ಕಾರ್ಯಕರ್ತರು ತಳಮಟ್ಟದಿಂದ ಶ್ರಮಿಸಿ

Team Udayavani, Jul 7, 2018, 2:16 PM IST

m4-bsp.jpg

ಮೈಸೂರು: ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ವಿಭಾಗದಿಂದ ಬಿಎಸ್‌ಪಿ ಸಂಸದರು ಆಯ್ಕೆಯಾಗಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕದ ಉಸ್ತುವಾರಿ ಡಾ.ಅಶೋಕ್‌ಕುಮಾರ್‌ ಸಿದ್ದಾರ್ಥ ಕರೆ ನೀಡಿದರು. 

ನಗರದ ಕಲಾಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿ ಆಯೋಜಿಸಿದ್ದ ಮೈಸೂರು ವಲಯಮಟ್ಟದ ಬಿಎಸ್ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಕಾರ್ಯಕರ್ತರು ಹಾಗೂ ಮುಖಂಡರ ಹಲವು ವರ್ಷಗಳ ಪ್ರಯತ್ನದಿಂದ ರಾಜ್ಯದಲ್ಲಿ ಬಿಎಸ್ಪಿ ಶಾಸಕರು ಆಯ್ಕೆಯಾಗಿ ಇದೀಗ ಸಚಿವರಾಗಿದ್ದಾರೆ.

ಇದೇ ಪ್ರಯತ್ನವನ್ನು 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಸುವ ಮೂಲಕ ರಾಜ್ಯದಿಂದ ಬಿಎಸ್ಪಿ ಸಂಸದರನ್ನು ಆಯ್ಕೆಗೊಳಿಸಬೇಕಿದೆ. ಅದಕ್ಕೆ ಪಕ್ಷದ ಕಾರ್ಯಕರ್ತರು ಸೆಕ್ಟರ್‌ ಹಾಗೂ ಬೂತ್‌ ಮಟ್ಟದಿಂದ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು. 

ಸಾಮಾಜಿಕ ಕ್ರಾಂತಿ: ಬಿಎಸ್ಪಿ ಕೇವಲ ಒಂದು ರಾಜಕೀಯ ಪಕ್ಷವಾಗಿ ಮಾತ್ರವಲ್ಲದೆ, ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿ ಮಾಡುತ್ತಿದೆ. ದೇಶದಲ್ಲಿ ಅನೇಕ ಮಹನೀಯರು ದೇಶದ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುತ್ತಿದ್ದರು. ಅವರ ಕನಸು ನನಸಾಗಿಸುವಲ್ಲಿ ಅಂಬೇಡ್ಕರ್‌ ಸೇರಿದಂತೆ ಹಲವರು ಬಹುಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದರು. 

ಬಿಎಸ್ಪಿ ಬಲಪಡಿಸಿ: ದೇಶದ ಎಲ್ಲಾ ರಾಜಕೀಯ ಪಕ್ಷಗಳು ಬಹುಜನರ ಏಳಿಗೆಗಾಗಿ ಶ್ರಮಿಸಬೇಕಿತ್ತಾದರೂ, ಈ ಕೆಲಸವನ್ನು ಬಿಎಸ್ಪಿ ಮಾಡುತ್ತಿದೆ. ಹೀಗಾಗಿ ಬಿಎಸ್ಪಿ ನಾಯಕಿ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.

ಪ್ರಸ್ತುತ ಬಿಎಸ್ಪಿ ಪಕ್ಷದಿಂದ ಸಚಿವರಾಗಿರುವ ಎನ್‌.ಮಹೇಶ್‌ ಬಹುಜನರ ಏಳಿಗೆಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ. ಮುಂದಿನ ಸಂಸತ್‌ ಚುನಾವಣೆಯಲ್ಲಿ ಮಾಯಾವತಿ ಕೈ ಬಲಪಡಿಸಬೇಕಿದೆ ಎಂದು ಹೇಳಿದರು. ಸಮಾವೇಶವನ್ನು ಇದಕ್ಕೂ ಮುನ್ನ ಬಿಎಸ್ಪಿ ರಾಷ್ಟ್ರೀಯ ಉಸ್ತುವಾರಿ ವೀರ್‌ಸಿಂಗ್‌ ಉದ್ಘಾಟಿಸಿದರು.

ಬಿಎಸ್ಪಿ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಯಪ್ರಕಾಶ್‌ ಸಿಂಗ್‌, ರಾಜ್ಯಾಧ್ಯಕ್ಷ ಪ್ರೊ. ಹರಿರಾಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ತಮಿಳುನಾಡು ಹಾಗೂ ಕೇರಳ ಉಸ್ತುವಾರಿ ಡಾ.ಶ್ರೀನಿವಾಸ್‌, ಮೈಸೂರು ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು ಇನ್ನಿತರರು ಹಾಜರಿದ್ದರು. 

ಟಾಪ್ ನ್ಯೂಸ್

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…

10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…

Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…

Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…

Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ

Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ

BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್‌ ಮೇಲೆ  ಭವ್ಯಾ, ಮೋಕ್ಷಿತಾ ಟಾರ್ಗೆಟ್

BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್‌ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್

Stones Thrown: ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ…

Stones Thrown: ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Snaehamayi-krishna-GTD

MUDA: ಮಗಳ-ಅಳಿಯಗೆ ಮುಡಾ ಸೈಟ್‌: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು

Actor Darshan: ನಟ ದರ್ಶನ್‌ ಮೈಸೂರಿಗೆ ಇಂದು ಆಗಮನ

Actor Darshan: ಇಂದು ನಟ ದರ್ಶನ್‌ ಮೈಸೂರಿಗೆ ಆಗಮನ

GTD

JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್‌

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

216

Bengaluru: ಟ್ರಕ್‌ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…

10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.