ಬುಡಕಟ್ಟು ಜನರ ಜೀವನ ಶೈಲಿ, ಸಂಸ್ಕೃತಿ, ಭಾಷೆ ಉಳಿಸಿ
Team Udayavani, Sep 14, 2020, 1:58 PM IST
ಮೈಸೂರು: ಬುಡಕಟ್ಟು ಜನಾಂಗ ಈ ದೇಶದ ಮೂಲ ನಿವಾಸಿಗಳಾಗಿದ್ದು, ಅವರ ಆಚಾರ ಪದ್ಧತಿ, ಸಂಸ್ಕೃತಿಯನು ° ಉಳಿಸುವ ಕೆಲಸ ಆಗಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಪರ ಆಯುಕ್ತ ಡಾ.ಹೆಳವರಹುಂಡಿ ಸಿದ್ದಪ್ಪ ಹೇಳಿದರು.
ಕನ್ನಡ ಜಾನಪದ ಪರಿಷತ್ ವತಿಯಿಂದ ನಗರದ ಎಂಜಿನಿಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಬುಡಕಟ್ಟು ಹಾಗೂ ವಿಶ್ವಜಾನಪದ ದಿನಾಚರಣೆಯಲ್ಲಿ ಮಾತನಾಡಿ, ಬುಡಕಟ್ಟು ಜನಾಂಗ ತಮ್ಮದೇ ಜೀವನ ಶೈಲಿ, ಸಂಸ್ಕೃತಿ, ಭಾಷೆ ಹೊಂದಿದ್ದು, ಇವೆಲ್ಲವೂ ಇಂದು ನಶಿಸಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಅವರ ಸಂಸ್ಕೃತಿ, ಆಚಾರ ಪದ್ಧತಿಗಳನ್ನು ಉಳಿಸಬೇಕಿದೆ ಎಂದರು.
ರಜೆ: ಪ್ರಸ್ತುತ ಭಾರತದಲ್ಲಿ ಶೇ.10ರಷ್ಟು ಬುಡಕಟ್ಟು ಜನಾಂಗ ಉಳಿದೆ. ಅವರ ಭಾಷೆ ಮತ್ತು ಜನಾಂಗ ನಶಿಸುತ್ತಿದ್ದು, ರಕ್ಷಣೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಶ್ವ ಬುಡಕಟ್ಟು ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿಲ್ಲ. ಮೂಲ ನಿವಾಸಿಗಳು ಸ್ಮರಿಸಿ ಗೌರವಿಸುವ ಕೆಲಸ ಆಗಬೇಕಿದೆ. ವಿಶ್ವ ಬುಡಕಟ್ಟು ದಿನದಂದು ಬಿಹಾರ ಮತ್ತು ಒಡಿಶಾದಲ್ಲಿ ರಜೆ ನೀಡಲಾಗುತ್ತದೆ. ಅದೇ ರೀತಿಯಲ್ಲಿ ರಾಜ್ಯ ಮತ್ತು ದೇಶದಲ್ಲಿ ರಜೆ ಘೋಷಿಸಲಿ ಎಂದು ಹೇಳಿದರು.
ಜಾನಪದ ಸಂಸ್ಕೃತಿಯನ್ನು ಉಳಿಸಲು ಸರ್ಕಾರ ಮಾಡಬೇಕಿರುವ ಕಾರ್ಯಗ ಳನ್ನು ಕನ್ನಡ ಜಾನಪದ ಪರಿಷತ್ ನಡೆಸುತ್ತಿದೆ. ಈ ಮೂಲಕ ಜಾನಪದ ಸಂಸ್ಕೃತಿಯನ್ನು ಜನಮಾನಸದಲ್ಲಿ ಉಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕಾರ್ಯಕ್ರಮ ಉದ್ಘಾಟಿಸಿದರು. ಜಾನಪದ ಕ್ಷೇತ್ರದ ಸೋಬಾನೆ ಪದ ಕಲಾವಿದೆ ಸಣ್ಣಮ್ಮ, ತತ್ವಪದ ಗಾಯಕ ಜೆ.ಜಟ್ಟಪ್ಪ, ಹಾಗೂ ಕಲಾವಿದ ನಟರಾಜು ಸಿ.ಲಿಂಗೀಶ್ ಹಾಗೂ ಬುಡಕಟ್ಟುಕ್ಷೇತ್ರದಲ್ಲಿ ಪಿ.ಕೆ.ರಾಮು, ಚಿಕ್ಕಮೊಮ್ಮ, ಬೊಮ್ಮಿ ಮತ್ತು ಬುಡಕಟು r ಜನಾಂಗದ ಕುರಿತು ಸಂಶೋಧನೆ ನಡೆಸಿದ ಡಾ.ನಾಗ ರತ್ನ ಅವರನ್ನು ಸನ್ಮಾನಿಸಲಾಯಿತು.
ಪನ್ನಗ ವಿಜಯಕುಮಾರ್, ಅಮ್ಮ ರಾಮಚಂದ್ರ, ಮರಿಸ್ವಾಮಿ ಸರ್ವಾಥ,ಮನುಶ್ರೀ, ಪಿ.ಸೋಮಶೇಖರ್ ಹಾಗೂ ಸುಮಂತ್ ವಶಿಷ್ಟ್ಯ ಅವರು ಜಾನಪದ ಗೀತೆ ಗಾಯನ ನಡೆಸಿದರು. ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಕ್ಯಾತನಹಳ್ಳಿ ಪ್ರಕಾಶ್, ತೋಟಗಾರಿಕೆ ಇಲಾಖೆ ನಿವೃತ್ತ ಸಹಾಯಕನಿರ್ದೇಶಕ ಎಚ್.ಹನುಮಯ್ಯ, ವೇದವ್ಯಾಸ ಸೇವಾ ಟ್ರಸ್ಟ್ ಅಧ್ಯಕ್ಷ ಪನ್ನಗ ವಿಜಯಕುಮಾರ್, ಕಂಸಾಳೆ ಕಲಾವಿದ ಕಂಸಾಳೆ ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.