ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ
Team Udayavani, Aug 19, 2019, 3:00 AM IST
ಹುಣಸೂರು: ನಗರದ ಬ್ರಾಹ್ಮಣರ ಬಡಾವಣೆಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.16ರಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಶುಭಾಶೀರ್ವಾದದೊಂದಿಗೆ ಆ.16ರ ಮೊದಲ ದಿನ(ಪೂರ್ವಾರಾಧನೆ) ಬೆಳಗ್ಗೆ 6 ಗಂಟೆಯಿಂದ ಅಭಿಷೇಕ, ಅಷ್ಟೋತ್ತರ, ಪಾದಪೂಜೆ, ಮಹಾಮಂಗಳಾರತಿ ನಡೆಸಲಾಯಿತು. ಅಂದು ಸಂಜೆ ರಥೋತ್ಸವ, ಅಷ್ಟಾವಧಾನ, ಉಯ್ನಾಲೆ ಸೇವೆ, ಮಹಾಮಂಗಳಾರತಿ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಎರಡನೇ ದಿನ(ಮಧ್ಯಾರಾಧನೆ) ಬೆಳಗಿನ ವಿಶೇಷ ಧಾರ್ಮಿಕಪೂಜೆಗಳ ನಂತರ ಮಧ್ಯಾಹ್ನ ಮಹಾಮಂಗಳಾರತಿ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು. ಆ.18ರ ಮೂರನೇ ದಿನ(ಉತ್ತರಾರಾಧನೆ)ದಂದು ಸುಪ್ರಭಾತದೊಂದಿಗೆ ಆರಂಭಗೊಂಡು ಅಷ್ಟೋತ್ತರ, ಹಸ್ತೋದಕ, ರಥೋತ್ಸವ, ಮಹಾಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು.
ಮಹೋತ್ಸವದಲ್ಲಿ ಮಠದ ಆಡಳಿತ ಮಂಡಳಿ ವಿದ್ಯಾ ಪ್ರಕಾಶ್, ಸತೀಶ್,ವಾದಿರಾಜಭಟ್, ಸಂಪತ್, ವೇಣುಗೋಪಾಲ್,ಸದಸ್ಯರು ಆರಾಧನಾ ಮಹೋತ್ಸವಕ್ಕೆ ದುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.