ಸಯೋಗ ಬಜಾರ್‌ಗೆ ಯದುವೀರ ಚಾಲನೆ
Team Udayavani, Dec 8, 2019, 3:00 AM IST
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರೀಮಿಯರ್‌ಯೋಗಾ ಲೈಫ್ಸ್ಟೆçಲ್ ಬಾಟಿಕ್ ಆಗಿರುವ ಸಯೋಗ ಅತ್ಯುತ್ತಮ ಗುಣಮಟ್ಟದ ಯೋಗ ಮತ್ತು ಕ್ರೀಡಾ ಉತ್ಪನ್ನಗಳ ಸಂಗ್ರಹವನ್ನು ಹೊಂದಿರುವ ಸಯೋಗ ಬಜಾರ್, ವಿನೂತನವಾದ ಮತ್ತು ನೈಸರ್ಗಿಕವಾದ ಉತ್ಪನ್ನಗಳೊಂದಿಗೆ ಸ್ಥಳೀಯಮಟ್ಟದ ಪ್ರತಿಭೆಗಳ ಅನಾವರಣ ಮತ್ತು ಪ್ರದರ್ಶನ ಮಾಡುವ ಸಲುವಾಗಿ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ವಾರ್ಷಿಕ ಕಾರ್ಯಕ್ರಮವನ್ನು ಶನಿವಾರ ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಸಯೋಗದ ಮಾಲೀಕರಾದ ಶೃತಿರಂಗ ಉದ್ಘಾಟಿಸಿದರು.
ಅತ್ಯಾಕರ್ಷಕವಾಗಿವೆ: ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸಯೋಗ ಬಜಾರ್ ಒಂದು ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ. ನಾನು ಇದರಲ್ಲಿ ಭಾಗಿಯಾಗಿರುವುದಕ್ಕೆ ಸಂತಸವೆನಿಸುತ್ತಿದೆ. ಇಲ್ಲಿ ಪ್ರದರ್ಶಿಸಲಾಗುತ್ತಿರುವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳು ಅತ್ಯಾಕರ್ಷಕವಾಗಿವೆ ಎಂದರು.
ಸಾರ್ವಜನಿಕರಿಗೆ ಮುದ: ಸಯೋಗದಲ್ಲಿ ಅತ್ಯದ್ಭುತವಾದ ಮತ್ತು ಸುಂದರವಾದ ಕುಸುರಿ ಕಲೆಯನ್ನು ಹೊಂದಿರುವ ಮತ್ತು ಅತ್ಯುತ್ಕೃಷ್ಠವಾದ ಕೌಶಲ್ಯ ಹೊಂದಿರುವ ಪ್ರತಿಭೆಗಳ ಅನಾವರಣವಾಗಿರುವುದು ನನಗೆ ತುಂಬಾ ಕೌತುಕವನ್ನುಂಟು ಮಾಡಿದೆ. ಎಲ್ಲಾ ಬಗೆಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗುತ್ತಿರುವುದು ಸಾರ್ವಜನಿಕರಿಗೆ ಮುದ ನೀಡುತ್ತದೆ. ಈ ಮೂಲಕ ಪ್ರದರ್ಶನವು ವೀಕ್ಷಕರಿಗೆ ಒಂದು ಅತ್ಯದ್ಭುತವಾದ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ ಎಂದರು.
ಸ್ಥಳೀಯರ ಪ್ರತಿಭೆ ಅನಾವರಣ: ಸಯೋಗ ಮಾಲೀಕರಾದ ಶೃತಿರಂಗ ಮಾತನಾಡಿ, ನಗರದಲ್ಲಿ ನಾವು ಸಯೋಗ ಬಜಾರ್‌ಅನ್ನು ಆಯೋಜಿಸುತ್ತಿರುವುದಕ್ಕೆ ಅತ್ಯಂತ ಸಂತಸವೆನಿಸುತ್ತಿದೆ. ನಮ್ಮ ಸ್ಥಳೀಯ ಮಟ್ಟದ ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಪ್ರತಿಭೆಗಳನ್ನು ಅನಾವರಣ ಮಾಡಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಗ್ರಾಹಕರ ಕಣ್ಣಿಗೆ ಮುದ ನೀಡುವುದಷ್ಟೇ ಅಲ್ಲದೇ, ಸ್ಥಳೀಯ ಕುಶಲಕರ್ಮಿಗಳಿಗೆ ತಮ್ಮ ಪ್ರತಿಭೆಗಳನ್ನು ಹೊರಜಗತ್ತಿಗೆ ಅನಾವರಣ ಮಾಡುವ ಒಂದು ವೇದಿಕೆಯನ್ನು ಈ ಪ್ರದರ್ಶನ ನೀಡುತ್ತಿದೆ ಎಂದು ತಿಳಿಸಿದರು.
ವಿವಿಧ ಉತ್ಪನ್ನಗಳ ಪ್ರದರ್ಶನ: ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಆಭರಣಗಳು, ಪಾದರಕ್ಷೆಗಳು, ಸಿದ್ಧ ಉಡುಪುಗಳು, ಹೋಂಕೇರ್ ಮತ್ತು ಪರಿಸರ ಸ್ನೇಹಿ ಸ್ಟೆಷನರಿಗಳು, ಸೆರಾಮಿಕ್ ವೇರ್ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಟರೋಟ್‌ಕಾರ್ಡ್ ರೀಡಿಂಗ್, ನ್ಯೂಮರೋಲಾಜಿ, ಕ್ರಿಸ್ಟಲ್ ಹೀಲಿಂಗ್ ಮತ್ತು ಇನ್ನಿತರೆ ವಿನೋದದ ಚಟುವಟಿಕೆಗಳ ಅನುಭವವನ್ನು ಪಡೆಯಬಹುದಾಗಿದೆ.
ಕಾನೂನಿನ ಮೂಲಕವೇ ಶಿಕ್ಷೆಯಾಗಬೇಕು: ಹೈದ್ರಾಬಾದ್ ಅತ್ಯಾಚಾರಿಗಳ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದ್ರಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ.
ಎನ್‌ಕೌಂಟರ್ ಘಟನೆಗಳು ಯಾರಿಗೂ ಸಂತೋಷ ತರಲ್ಲ. ಆದರೆ, ಸಮಾಧಾನ ತಂದಿದೆ. ರಾಜರ ಆಳ್ವಿಕೆ ಕಾಲಕ್ಕೂ ಈಗಿನ ಕಾಲಕ್ಕೂ ವ್ಯತ್ಯಾಸವಿದೆ. ಹೀಗಾಗಿ ಕಾನೂನಿನ ಬದಲಾವಣೆ ಬಗ್ಗೆ ಮಾತನಾಡುವುದಕ್ಕಿಂತ ಕಾನೂನಿನ ಮೂಲಕವೇ ತಪ್ಪತಸ್ಥರಿಗೆ ತ್ವರಿತವಾಗಿ ಶಿಕ್ಷೆ ಯಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.