ಯದುವೀರ್ ಖಾಸಗಿ ದರ್ಬಾರ್ ಆರಂಭ
Team Udayavani, Sep 22, 2017, 8:44 AM IST
ಮೈಸೂರು: ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರು ಗುರುವಾರ ಬೆಳಗ್ಗೆ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹತ್ತು ದಿನಗಳ ಮೈಸೂರು ದಸರಾಗೆ ಚಾಲನೆ ನೀಡಿದರೆ, ಇತ್ತ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಖಾಸಗಿ ದರ್ಬಾರ್ ಆರಂಭ ಗೊಂಡಿತು.
ನವರಾತ್ರಿ ಸಂದರ್ಭದಲ್ಲಿ ಪ್ರತಿ ದಿನವೂ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸುವುದು ಹಿಂದಿ ನಿಂದಲೂ ಆಚರಣೆ ಯಲ್ಲಿರುವ ಸಂಪ್ರದಾಯ. ಅದರಂತೆ ಯದು ವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗುರುವಾರ ಐತಿಹಾಸಿಕ ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಖಾಸಗಿ ದರ್ಬಾರ್ ಆರಂಭಿಸಿದರು. ಮುಂಜಾನೆಯಿಂದಲೇ ದರ್ಬಾರ್‌ನ ಧಾರ್ಮಿಕ ವಿಧಿ-ವಿಧಾನಗಳು ಆರಂಭಗೊಂಡಿದ್ದು, ಒಡೆಯರ್ ಅವರು ಮುಂಜಾನೆಯೇ ಎಣ್ಣೆ ಶಾಸ್ತ್ರ ಮಾಡಿ, ಚೌಲ ಮಾಡಿಸಿಕೊಂಡು, ಮಂಗಳ ಸ್ನಾನ ಮಾಡಿದರು. ಬಳಿಕ ಮುತ್ತೆçದೆ ಯರು ಹಾಗೂ ಪುರೋಹಿತ ಮನೆತನದ ಮಹಿಳೆಯರು ಯದುವೀರ್‌ಗೆ ಆರತಿ ಬೆಳಗಿದರು. ಬಳಿಕ, ಅರಮನೆಯಲ್ಲಿರುವ ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ನೆರವೇರಿಸಿದ ಯದುವೀರ್, ಕಲಶಪೂಜೆ, ಕಂಕಣಪೂಜೆ ನಡೆಸಿ, ಕುಲದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪತ್ನಿ ತ್ರಿಷಿಕಾಕುಮಾರಿ ಒಡೆಯರ್ ಅವರಿಂದ ರಾಜಮನೆತನದ ಪದ್ಧತಿಯಂತೆ ಕಂಕಣ ಧರಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ 7.55ರಿಂದ 8.15ರೊಳಗೆ ಸಿಂಹಾಸನಕ್ಕೆ ಸಿಂಹಗಳನ್ನು ಜೋಡಣೆ ಮಾಡಲಾಯಿತು. ಅಲ್ಲದೆ, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಒಂಟೆ, ಅರಮನೆಯ ಆನೆಗಳನ್ನು ಸವಾರಿ ತೊಟ್ಟಿಗೆ ಕರೆತರಲಾಯಿತು. ಅರಮನೆಯ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಕಲಶದೊಂದಿಗೆ ದೇವರನ್ನು ತರಲಾಯಿತು. ಮಧ್ಯಾಹ್ನ 12ರ ವೇಳೆಗೆ ಖಾಸಗಿ ದರ್ಬಾರ್ ಆರಂಭವಾಯಿತು. ಕಟ್ಟಿಗೆಯವರು, ಜೋಪಾದವರು, ದೀವಟಿಗೆಯವರು ಸಕಲ ಬಿರುದು ಬಾವಲಿಯೊಂದಿಗೆ ಬಹುಪರಾಕ್ ಹಾಕಿ ಒಡೆಯರ್ ಅವರನ್ನು ದರ್ಬಾರ್ ಹಾಲ್‌ಗೆ ಕರೆ ತಂದರು. ಕಲಶ ಪೂಜೆ ನೆರವೇರಿಸಿ, ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಯದುವೀರ್, ಮಧ್ಯಾಹ್ನ 12.45ರಿಂದ 12.55ರ ಶುಭ ಗಳಿಗೆಯಲ್ಲಿ ರತ್ನಖಚಿತ ಸಿಂಹಾಸನವೇರಿ ವೀರಾಜಮಾನರಾದರು. ಈ ವೇಳೆ ಸುಮಾರು 23 ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ಯದುವೀರ್‌ಗೆ ನೀಡಲಾಯಿತು. ಬಳಿಕ ಪುರೋಹಿತರು ತೀರ್ಥ ಪ್ರೋಕ್ಷಣೆ ಮಾಡಿದರು. ನಂತರ, ಯದುವೀರ್ ಅವರು ಗೌರವವಂದನೆ ಸ್ವೀಕರಿಸಿದರು. ಖಾಸಗಿ ದರ್ಬಾರ್ ಮುಗಿಸಿ, ಸವಾರಿ ತೊಟ್ಟಿಗೆ ಆಗಮಿಸಿದ ಯದುವೀರ್‌ಗೆ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಪಾದ ಪೂಜೆ ಮಾಡಿದರು. ಈ ವೇಳೆ ಪ್ರಮೋದಾದೇವಿ ಒಡೆಯರ್, ಸಚಿವ ಪ್ರಮೋದ್ ಮಧ್ವರಾಜ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.