ಯದುವೀರ್‌ರಿಗೆ ಬಹುಪರಾಕ್..ಬಹುಪರಾಕ್…
Team Udayavani, Sep 22, 2017, 12:38 PM IST
ಮೈಸೂರು: ಶರನ್ನವರಾತ್ರಿ ಅಂಗವಾಗಿ ಅರಮನೆಯಲ್ಲಿ ಮೈಸೂರು ರಾಜವಂಶಸ್ಥರ ಖಾಸಗಿ ದರ್ಬಾರ್ ಆರಂಭಗೊಂಡಿದೆ. ನವರಾತ್ರಿ ಸಂದರ್ಭದಲ್ಲಿ ಮೈಸೂರು ಅರಸರ ಸಂಪ್ರದಾಯದಂತೆ ಪ್ರತಿದಿನವೂ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸುವುದು ಸಂಪ್ರದಾಯ. ಅದರಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗುರುವಾರ ಐತಿಹಾಸಿಕ ಅಂಬಾವಿಲಾಸ ಅರಮನೆ ದರ್ಬಾರ್ ಹಾಲ್‌ನಲ್ಲಿ ಖಾಸಗಿ ದರ್ಬಾರ್ ನಡೆಸಿದರು.
ನವರಾತ್ರಿ ಮೊದಲ ದಿನ ಪಾಡ್ಯವಾಗಿದ್ದು, ಖಾಸಗಿ ದರ್ಬಾರ್ ಆಚರಣೆ ಹಿನ್ನೆಲೆಯಲ್ಲಿ ಯದುವೀರ್‌ರಿಗೆ ಮುಂಜಾನೆಯೇ ಎಣ್ಣೆ ಶಾಸ್ತ್ರ ಮಾಡಿ ûೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳ ಸ್ನಾನ ಮಾಡಿಸಲಾಯಿತು. ಬಳಿಕ ಮುತ್ತೆçದೆಯರು ಹಾಗೂ ಪುರೋಹಿತ ಮನೆತನದ ಮಹಿಳೆಯರು ಯದುವೀರ್ ಒಡೆಯರ್‌ರಿಗೆ ಆರತಿ ಬೆಳಗುತ್ತಿದ್ದಂತೆ ಪೂಜೆಗೆ ಅಣಿಯಾದರು.
ಅದರಂತೆ ಅರಮನೆಯಲ್ಲಿರುವ ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ನೆರವೇರಿಸಿದ ಯದುವೀರ್, ಬಳಿಕ ಕಲಶಪೂಜೆ, ಕಂಕಣಪೂಜೆ ನಡೆಸಿ, ಕುಲದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪತ್ನಿ ತ್ರಿಷಿಕಾಕುಮಾರಿ ಒಡೆಯರ್‌ರಿಂದ ರಾಜಮನೆತನದ ಪದ್ಧತಿಯಂತೆ ಬೆಳಗ್ಗೆ 8.20ರಿಂದ 9.20ರೊಳಗೆ ಕಂಕಣ ಧರಿಸಲಾಯಿತು. ಇದಕ್ಕೂ ಮುನ್ನ ಸಿಂಹಾಸನಕ್ಕೆ ಬೆಳಗ್ಗೆ 7.55ರಿಂದ 8.15ರೊಳಗೆ ಸಿಂಹಗಳನ್ನು ಜೋಡಣೆ ಮಾಡಲಾಯಿತು.
ಬಳಿಕ ಪಟ್ಟದ ಆನೆಗಳಾದ ಗೋಪಿ, ವಿಕ್ರಮ, ಪಟ್ಟದ ಕುದುರೆ, ಪಟ್ಟದ ಹಸು, ಒಂಟೆ, ಅರಮನೆ ಆನೆಗಳಾದ ಪ್ರೀತಿ, ಸೀತಾ, ರೂಪ ಹಾಗೂ ಚಂಚಲ ಆನೆಯನ್ನು ಸವಾರಿ ತೊಟ್ಟಿಗೆ ಕರೆತರಲಾಯಿತು. ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಕಲಶದೊಂದಿಗೆ ದೇವರನ್ನು ತರಲಾಯಿತು. ಪಟ್ಟದ ಆನೆ, ಕುದುರೆ, ಹಸು ಸೇರಿದಂತೆ ಅರಮನೆ ಪುರೋಹಿತರು ಕಂಕಣ ಧರಿಸಿದ್ದ ಯದುವೀರ ಒಡೆಯರ್‌ರಿಗೆ ಹರಸಿದರು.
ಖಾಸಗಿ ದರ್ಬಾರ್ ಆರಂಭಕ್ಕೂ ಮುನ್ನ ಸವಾರಿ ತೊಟ್ಟಿಯಿಂದ ಯದುವೀರ ಒಡೆಯರ್‌ರನ್ನು ದರ್ಬಾರ್ ಹಾಲ್‌ಗೆ ಕಟ್ಟಿಗೆಯವರು, ಜೋಪಾದವರು, ದೀವಟಿಗೆಯವರು ಸಕಲ ಬಿರುದು ಬಾವಲಿಯೊಂದಿಗೆ ಬಹುಪರಾಕ್ ಹಾಕಿ ದರ್ಬಾರ್ ಹಾಲ್‌ಗೆ ಕರೆತಂದರು. ನಂತರ ಮಧ್ಯಾಹ್ನ 12 ಗಂಟೆಯಿಂದ ಸಿಂಹಾಸನಾರೋಹಣಕ್ಕೂ ಮುನ್ನ ಕಲಶ ಪೂಜೆ ನಡೆಯಿತು. ನಂತರ ಸಿಂಹಾಸನಕ್ಕೆ 3 ಸುತ್ತು ಪ್ರದಕ್ಷಿಣೆ ಹಾಕಿದ ಯದುವೀರ್, ಮಧ್ಯಾಹ್ನ 12.45ರಿಂದ 12.55ರ ಶುಭ ಘಳಿಗೆಯಲ್ಲಿ ರತ್ನಖಚಿತ ಸಿಂಹಾಸನವೇರಿ ವೀರಾಜಮಾನರಾಗಿ ಕಂಗೊಳಿಸಿದರು.
ಈ ವೇಳೆ ಶ್ರೀಚಾಮುಂಡೇಶ್ವರಿ ದೇವಾಲಯ, ಮೇಲುಕೋಟೆ ಚೆಲುವನಾರಾಯಣಸ್ವಾಮಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಅರಮನೆ ಆವರಣದಲ್ಲಿರುವ ಎಲ್ಲಾ ದೇವಾಲಯಗಳು ಸೇರಿದಂತೆ ಸುಮಾರು 23 ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಗೆ ನೀಡಿ ತೀರ್ಥ ಪ್ರೋಕ್ಷಣೆ ಮಾಡಿ ಶುಭ ಕೋರಿದರು. ಬಳಿಕ ದೃಷ್ಟಿ ತೆಗೆಯಲಾಯಿತು. ನಂತರ ಯದುವೀರ್ ಅವರು ಸಿಂಹಾಸನದ ಮೇಲೆ ಎದ್ದುನಿಂತು ಸೆಲ್ಯೂಟ್ ಹೊಡೆದು ಹೊಗಳು ಭಟ್ಟರು ಹಾಗೂ ದೀವಿಟಿಗೆಕಾರರಿಂದ ಗೌರವ ಹಾಗೂ ಬಹುಪರಾಕ್ ಪಡೆದು ಸವಾರಿ ತೊಟ್ಟಿಯತ್ತ ತೆರಳಿದರು.
ಖಾಸಗಿ ದರ್ಬಾರ್ ಮುಗಿಸಿ ಸವಾರಿ ತೊಟ್ಟಿಗೆ ಆಗಮಿಸಿದ ಯದುವೀರ್‌ರಿಗೆ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಪಾದ ಪೂಜೆ ಮಾಡಿದರು. ಈ ವೇಳೆ ಪ್ರಮೋದಾದೇವಿ ಒಡೆಯರ್ ಖಾಸಗಿ ದರ್ಬಾರ್ ವೀಕ್ಷಿಸಿದರು. ಅಲ್ಲದೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಅರಮನೆಗೆ ಆಗಮಿಸಿ ಖಾಸಗಿ ದರ್ಬಾರ್ ವೀಕ್ಷಿಸಿದರು. ನಂತರ ಸಿಂಹಾಸನವನ್ನು ವಸ್ತ್ರಗಳಿಂದ ಮರೆಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.