ಅಖಾಡಕ್ಕಿಳಿದ ಯತೀಂದ್ರ, ವಿಜಯೇಂದ್ರ
Team Udayavani, Apr 11, 2018, 12:39 PM IST
ಮೈಸೂರು: ಕೇಂದ್ರದ ಬಿಜೆಪಿ ಸರ್ಕಾರ ಶ್ರೀಮಂತರ ಜೇಬು ತುಂಬಿಸುವ ಸರ್ಕಾರವಾಗಿದ್ದು, ಬಡವರ ವಿರೋಧಿ ಸರ್ಕಾರವಾಗಿದೆ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಲೇವಡಿ ಮಾಡಿದರು.
ವರುಣಾ ಕ್ಷೇತ್ರದ ಭುಗತಗಳ್ಳಿ, ವಾಜಮಂಗಲ, ಹಲಗಯ್ಯನಹುಂಡಿಗಳಲ್ಲಿ ಮಂಗಳವಾರ ಪಾದಯಾತ್ರೆ ನಡೆಸಿ ಮತ ಯಾಚಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಬಡವರ ಪರವಾದ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಿಲ್ಲ.
ನೋಟು ರದ್ದು ಮಾಡಿದ್ದರಿಂದ ಯಾರಿಗೆ ಅನುಕೂಲವಾಯಿತು. ಯಾರಾದರೂ ಶ್ರೀಮಂತರು ಬ್ಯಾಂಕ್ ಮುಂದೆ ಕ್ಯೂ ನಿಂತು ಹಣ ಬದಲಾಯಿಸಿಕೊಂಡರೆ ಎಂದು ಪ್ರಶ್ನಿಸಿದ ಅವರು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 15 ಸಾವಿರ ಕೋಟಿ ರೂ. ನಷ್ಟವಾಯಿತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಗಳು ಗಗನ ಮುಟ್ಟಿವೆ.
ಜಿಎಸ್‌ಟಿಯಿಂದ ಯಾರಿಗೆ ಅನುಕೂಲವಾಗಿದೆ? ಬ್ಯಾಂಕ್ ಖಾತೆ ಮಾಡಿಸಿ ಪ್ರತಿ ಖಾತೆಗೆ 15 ಲಕ್ಷ ರೂ. ಹಣ ಹಾಕುತ್ತೇನೆಂದರಲ್ಲ ಹಾಕಿದರೆ? ಶ್ರೀಮಂತರ ಸಾವಿರಾರು ಕೋಟಿ ರೂ. ಸಾಲಮನ್ನಾ ಮಾಡಿದ ಮೋದಿ ಸರ್ಕಾರ ರೈತರ ಸಾಲಮನ್ನಾ ಮಾಡಲಿಲ್ಲ.
ಇದು ಯಾರ ಪರವಿರುವ ಸರ್ಕಾರ? ಇಂತಹ ಸರ್ಕಾರಕ್ಕೆ ಬುದ್ದಿ ಕಲಿಸಬೇಕಾದರೆ ರಾಜ್ಯದಲ್ಲಿ ಜನಪರ ಆಡಳಿತ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಭುಗತಗಳ್ಳಿ ಮಣಿ, ಎಂ.ಟಿ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮುದ್ದೇಗೌಡ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!
Nanjangud: ಬಸ್-ಟಿಪ್ಪರ್ ಓವರ್ ಟೇಕ್; ಬಸ್ಸಿನಲ್ಲಿದ್ದ ಮಹಿಳೆಯ ಕುತ್ತಿಗೆ, ಕೈ ತುಂಡು
Hunasuru: ಬೆಳ್ಳಂಬೆಳಗ್ಗೆ ಬೀದಿ ನಾಯಿಗಳ ದಾಳಿಗೆ ಜೀವ ಕಳೆದುಕೊಂಡ ಜಿಂಕೆ…
Palace Land Dispute: ನಾವೇ ಬೆಂಗಳೂರು ಅರಮನೆ ಜಾಗದ ಮಾಲೀಕರು: ಪ್ರಮೋದಾದೇವಿ
ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿರಲಿ, ಜನರ ಸಾಲದ ಹೊರೆ ತಗ್ಗಿಸಲಿ: ಎಚ್‌ಡಿಕೆ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಿ: ಸಂಸದ
Mudubidire: ಕಡಲಕೆರೆ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ
Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!
Sports Padma Awards ; ಶ್ರೀಜೇಶ್‌ಗೆ ಪದ್ಮಭೂಷಣ ಅಶ್ವಿನ್, ವಿಜಯನ್‌ಗೆ ಪದ್ಮಶ್ರೀ
IND vs ENG: ತಿಲಕ್ ವರ್ಮಾ ಹೋರಾಟದಿಂದ 2ನೇ ಟಿ-20 ಪಂದ್ಯ ಗೆದ್ದ ಭಾರತ ತಂಡ