ರೋಡ್ ಶೋ ಮೂಲಕ ಯತೀಂದ್ರ ಮತಯಾಚನೆ
Team Udayavani, May 8, 2018, 2:59 PM IST
ತಿ.ನರಸೀಪುರ: ರಾಜ್ಯದಲ್ಲಿ ಸ್ಥಿರ ಆಡಳಿತ ನೀಡಿ ಅಭಿವೃದ್ಧಿಗೆ ಮುನ್ನುಡಿ ಬರೆದ ಕಾಂಗ್ರೆಸ್ ಗೆಲುವಿಗೆ ಮತ್ತೂಮ್ಮೆ ತಮ್ಮ ಬೆಂಬಲ ನೀಡುವಂತೆ ವರುಣ ಕ್ಷೇತ್ರದ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ಪಟ್ಟಣ ಸಮೀಪದ ಆಲಗೂಡು ಗ್ರಾಮ, ಹೌಸಿಂಗ್ ಬೋರ್ಡ್ ಹಾಗೂ ಹೆಳವರಹುಂಡಿ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿ, ಎರಡು ಬಾರಿ ಗೆಲ್ಲಿಸುವ ಮೂಲಕ ನಮ್ಮ ತಂದೆಯವರನ್ನು ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ.
ಅವರು ಕೊಟ್ಟ ಆಡಳಿತದ ಗೌರವ ಕೀರ್ತಿ ಈ ಕ್ಷೇತ್ರದ ಜನತೆ ಸಲ್ಲುತ್ತದೆ. ತಾವು ನೀಡಿದ ಮತಗಳಿಂದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ತಂದು ನಂ. 1 ಸ್ಥಾನದಲ್ಲಿಟ್ಟಿದ್ದಾರೆ. ಎಲ್ಲಾ ಸಮಾಜದ ಜನರಿಗೂ ಅನುಕೂಲವಾಗುವ ಯೋಜನಾ ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಜನ ಸಮುದಾಯ ಪ್ರಗತಿ ಕಂಡಿಲ್ಲ. ಬಡವರು ಬಡವರಾಗಿಯೇ ಉಳಿದಿದ್ದಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಇಂತಹ ಪಕ್ಷವನ್ನು ಬೆಂಬಲಿಸದೇ ಮತ್ತೆ ಕಾಂಗ್ರೆಸ್ ಆಡಳಿತ ಸ್ಥಾಪನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಕಳೆದ 5 ವರ್ಷಗಳಲ್ಲಿ ಆಡಳಿತದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ. ಆ ಗೌರವ ಈ ಕ್ಷೇತ್ರದ ಜನತೆಗೆ ಸಲ್ಲುತ್ತದೆ. ನಿಮ್ಮ ಆಶೀರ್ವಾದ ಈ ಚುನಾವಣೆಯಲ್ಲಿ ನನಗೆ ನೀಡುವಂತೆ ಮನವಿ ಮಾಡಿದರು.
ಬಳಿಕ ಕಾಲೋನಿಯ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ಬಳಿಕ ಹೆಳವರಹುಂಡಿ ಮಠಕ್ಕೆ ಭೇಟಿ ನೀಡಿದ ಅವರು ಸ್ವಾಮೀಜಿಯವರ ಆಶೀರ್ವಾದ ಪಡೆದರು. ಗ್ರಾಮದ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮುಖಂಡರಾದ ಕೆ.ಸಿ.ಬಲರಾಂ. ಗೋಪಾಲರಾಜು, ವಿಷಕಂಠಮೂರ್ತಿ, ಟಿ.ಎಂ.ನಂಜುಂಡಸ್ವಾಮಿ, ವಿಷಕಂಠಮೂರ್ತಿ, ಹೆಳವರಹುಂಡಿ ಸೋಮು, ಮನ್ನೆಹುಂಡಿ ಮಹೇಶ್, ಉಮೇಶ್, ಮಹೇಶ್, ವಾಠಾಳ್ ರಾಚೇಗೌಡ, ಬಿ.ಸ್ವಾಮಿ, ಶಿವಶಂಕರ್, ಸಂತೃಪ್ತಿಕುಮಾರ್, ಎಂ.ಕೆ.ಸಹದೇವ್, ಸೋಮಣ್ಣ, ಪ್ರಭಾಕರ್, ಹಕ್ಕೂರು ಲಿಂಗರಾಜು, ಕಿರಗಸೂರು ಕಾಂತರಾಜು, ಶಿವಸ್ವಾಮಿ, ಮದನ್ ಗೌಡ ನವೀನ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.