ಯೋಗ ದಿನ: 45 ನಿಮಿಷಗಳ ಯೋಗ ಪ್ರದರ್ಶನ
Team Udayavani, Jun 20, 2017, 12:54 PM IST
ಮೈಸೂರು: ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬುಧವಾರ ನಗರದ ರೇಸ್‌ಕೋರ್ಸ್‌ನಲ್ಲಿ ನಡೆಯುವ ಸಾಮೂಹಿಕ ಯೋಗ ಪ್ರದರ್ಶನದ ಗಿನ್ನಿಸ್ ದಾಖಲೆಗೆ ಪ್ರಯತ್ನಿಸುತ್ತಿರುವುದರಿಂದ ಭಾಗವಹಿಸುವವರು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಮನವಿ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾರ್ಥನೆ 1 ನಿಮಿಷ, ಚಲನಕ್ರಿಯೆಗೆ 4 ನಿಮಿಷ ಸೇರಿದಂತೆ ತಾಡಾಸನ, ವೃûಾಸನ, ಪಾದ ಹಸ್ತಾಸನ-1, ಪಾದ ಹಸ್ತಾಸನ-2, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮ ದಂಡಾಸನ, ಭದ್ರಾಸನ, ವಜಾÅಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಪ್ರದರ್ಶನಕ್ಕೆ 25 ನಿಮಿಷ ನಿಗದಿಪಡಿಸಲಾಗಿದೆ.
ನಂತರ 14 ನಿಮಿಷಗಳ ಕಾಲ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ. ಕಡೆಗೆ ಒಂದು ನಿಮಿಷಗಳ ಕಾಲ ಶಾಂತಿಮಂತ್ರ ಪಠಿಸಲಿದ್ದಾರೆ. ಒಟ್ಟಾರೆ 45 ನಿಮಿಷಗಳ ಕಾಲ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ. ರೇಸ್‌ಕೋರ್ಸ್ ಮೈದಾನದ ಎಲ್ಲಾ ಪ್ರವೇಶ ದ್ವಾರಗಳನ್ನು ಬೆಳಗ್ಗೆ 5 ಗಂಟೆಯಿಂದಲೇ ತೆರೆಯಲಾಗುವುದು. 7 ಗಂಟೆಗೆ ಯೋಗ ಪ್ರದರ್ಶನ ಆರಂಭವಾಗಲಿದ್ದು, 6.45ಕ್ಕೆ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.
ಭಾಗವಹಿಸುವ ಯೋಗಪಟುಗಳು ಬೆಳಗ್ಗೆ 5.45ರಿಂದಲೇ ಪ್ರವೇಶ ದ್ವಾರಗಳ ಬಳಿ ಉಚಿತವಾಗಿ ನೀಡಲಾಗುವ ಬಾರ್ ಕೋಡೆಡ್ ಟಿಕೆಟ್‌ಗಳನ್ನು ಪಡೆದು ಮೈದಾನ ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಉಪಸ್ಥಿತರಿರಬೇಕು. ಗುರುತಿನ ಚೀಟಿ ಹೊಂದಿರುವ ಸ್ಟಿವರ್ಡ್‌ಗಳು ಯೋಗಪಟುಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಕೂರಿಸಲು ನೆರವಾಗಲಿದ್ದಾರೆ ಎಂದರು.
ಬೆಳಗ್ಗೆ 5 ಗಂಟೆಯಿಂದಲೇ ನಗರದ ವಿವಿಧ ಭಾಗಗಳಿಂದ ರೇಸ್‌ಕೋರ್ಸ್‌ಗೆ ನಿರಂತರವಾಗಿ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ನಿಗದಿತ ದರ ನೀಡಿ ಈ ಸೇವೆ ಬಳಸಿಕೊಳ್ಳಬಹುದು.
ಪ್ರದರ್ಶನದಲ್ಲಿ ಭಾಗವಹಿಸುವವರು ಬಿಳಿ ಟಿ ಶರ್ಟ್ ಧರಿಸಿಬರಬೇಕು. ಮಹಿಳೆಯರು ಯೋಗ ಮಾಡಲು ಅನುಕೂಲವಾಗುವ ಪ್ಯಾಂಟ್ ಅಥವಾ ಚೂಡಿದಾರ್ ಧರಿಸಿಬರಬೇಕು. ಯೋಗ ಮ್ಯಾಟ್ ಇಲ್ಲದೆ ಯೋಗ ಪ್ರದರ್ಶನ ನೀಡಿದರೆ ಗಿನ್ನಿಸ್ ದಾಖಲೆಗೆ ಪರಿಗಣಿಸುವುದಿಲ್ಲ. ಹೀಗಾಗಿ ಭಾಗವಹಿ ಸುವವರು ಯೋಗ ಮ್ಯಾಟ್ ಅಥವಾ ಜಮಖಾನ, ಬೆಡ್‌ಶೀಟ್, ಟರ್ಕಿ ಟವೆಲ್ ಸೇರಿದಂತೆ ತಮ್ಮ ಎತ್ತರಕ್ಕೆ ಅನುಗುಣವಾದ ಬಟ್ಟೆಯನ್ನು ತಂದು ಅದರ ಮೇಲೆ ಯೋಗ ಪ್ರದರ್ಶನ ನೀಡುವುದು ಕಡ್ಡಾಯವಾಗಿದೆ.
ಕಾರ್ಯಕ್ರಮ ಮುಗಿದ ನಂತರ ಪ್ರವೇಶಿಸಿದ ದ್ವಾರದಿಂದಲೇ ಹೊರನಡೆದು ಅಲ್ಲಿ ನೀಡುವ ಅಧಿಕೃತ ಗಿನ್ನಿಸ್ ದಾಖಲೆ ಪ್ರಯತ್ನದ ಭಾಗವಹಿಸುವಿಕೆ ಪ್ರಮಾಣ ಪತ್ರ, ಲಘು ಉಪಾಹಾರ ಮತ್ತು ನೀರಿನ ಬಾಟಲಿಗಳನ್ನು ಪಡೆದುಕೊಂಡು ಹೋಗುವಂತೆ ತಿಳಿಸಿದರು.
ಪ್ರವೇಶ ದ್ವಾರಗಳು: ರೇಸ್‌ಕೋರ್ಸ್ ಪ್ರವೇಶಿಸಲು ಒಟ್ಟು ಏಳು ಪ್ರವೇಶದ್ವಾರಗಳಿದ್ದು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ 16 ಸಾವಿರ ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಭಾಗವಹಿಸುವುದರಿಂದ ಮಹಾರಾಣ ಪ್ರತಾಪ್ ವೃತ್ತದ ಗೇಟ್-1ಅನ್ನು ಅವರಿಗೆ ಮೀಸಲಿಡಲಾಗಿದೆ.
ಗೇಟ್ -2ರಲ್ಲಿ ಯೋಗ ಸಂಸ್ಥೆಗಳು, ಸಿಬಿಎಸ್‌ಇ ಶಾಲೆಗಳು ಹಾಗೂ ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರವೇಶಿಸಬಹುದು. ಗೇಟ್ -3 (ಪಂಟರ್ ಗೇಟ್), ಗೇಟ್-4 ಹಾಗೂ ಗೇಟ್-6ರಲ್ಲಿ ಸಾರ್ವಜನಿಕರು ಪ್ರವೇಶಿಸಬಹುದು. ಗೇಟ್-5ರಲ್ಲಿ (ಲಾರಿ ಟರ್ಮಿನಲ್ ಗೇಟ್) ಡಿಡಿಪಿಐ, ಡಿಡಿಪಿಯು ಅಧೀನದಲ್ಲಿ ಬರುವ ವಿದ್ಯಾರ್ಥಿಗಳು, ಬಿಸಿಎಂ, ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಹಾಗೂ ಮೈಸೂರು ವಿವಿ ವಿದ್ಯಾರ್ಥಿಗಳು ಪ್ರವೇಶಿಸಬಹುದು. ಗೇಟ್-7ರಲ್ಲಿ ಗಣ್ಯರು, ಅಧಿಕಾರಿಗಳು, ಸಂಘಟಕರು ಪ್ರವೇಶಿಸಬಹುದು ಎಂದು ವಿವರಿಸಿದರು.
ಯೋಗ ಪ್ರದರ್ಶಕರು ನೀಡುವ ಸೂಚನೆಯಂತೆ ಎಲ್ಲರೂ ಕಡ್ಡಾಯವಾಗಿ ಯೋಗಾಸನ ಮಾಡಬೇಕು. ಪ್ರದರ್ಶನದಲ್ಲಿ ಭಾಗವಹಿಸುವವರಲ್ಲಿ ಶೇ.10ಕ್ಕಿಂತ ಹೆಚ್ಚು ಜನರು ಯೋಗ ಮಾಡದಿದ್ದರೆ, ಗಿನ್ನಿಸ್ ದಾಖಲೆಗೆ ನಮ್ಮ ಪ್ರಯತ್ನ ತಾಂತ್ರಿಕವಾಗಿ ಮಾನ್ಯವಾಗುವುದಿಲ್ಲ.
-ಡಿ.ರಂದೀಪ್, ಜಿಲ್ಲಾಧಿಕಾರಿ
ಯೋಗ ದಿನ: ಸಂಚಾರ ಮಾರ್ಪಾಡು
ಮೈಸೂರು: ನಗರದ ರೇಸ್‌ಕೋರ್ಸ್‌ನಲ್ಲಿ ಬುಧವಾರ ನಡೆಯಲಿರುವ 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಅಂದು ಬೆಳಗ್ಗೆ 5 ರಿಂದ 10 ಗಂಟೆವರೆಗೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಯೋಗಪಟುಗಳ ವಾಹನಗಳನ್ನು ಹೊರತುಪಡಿಸಿ, ನಂಜನಗೂಡು ರಸ್ತೆಯಲ್ಲಿ ಜೆಎಸ್‌ಎಸ್ ಕಾಲೇಜು ಜಂಕ್ಷನ್‌ನಿಂದ-ಎಂ.ಆರ್.ಸಿ ವೃತ್ತದವರೆಗೆ. ಲಲಿತಮಹಲ್ ರಸ್ತೆಯಲ್ಲಿ ಕುರುಬರಹಳ್ಳಿ ವೃತ್ತದಿಂದ-ಎಂಆರ್‌ಸಿ ವೃತ್ತದವರೆಗೆ, ಮಿಜಾìರಸ್ತೆಯಲ್ಲಿ ಮಿಜಾìವೃತ್ತದಿಂದ ದಕ್ಷಿಣಕ್ಕೆ ಮೃಗಾಲಯದ ರಸ್ತೆಯಲ್ಲಿ ರೇಸ್‌ಕೋರ್ಸ್ ವೃತ್ತದವರೆಗೆ ನಿರ್ಬಂಧಿಸಲಾಗಿದೆ.
ಬದಲಿ ಮಾರ್ಗಗಳು: ನಂಜನಗೂಡು ರಸ್ತೆಯಿಂದ ನಗರದ ಕಡೆಗೆ ಪ್ರವೇಶಿಸುವ ವಾಹನಗಳು ನಂಜನಗೂಡು ರಸ್ತೆ ಜೆಎಸ್‌ಎಸ್ ಜಂಕ್ಷನ್ ಬಳಿ ಕಡ್ಡಾಯವಾಗಿ ಎಡಕ್ಕೆ ತಿರುಗಿ ಜೆಎಲ್‌ಬಿ ರಸ್ತೆ ಮೂಲಕ ಮುಂದೆ ಸಾಗಬೇಕು. ಲಲಿತಮಹಲ್ ರಸ್ತೆಯಲ್ಲಿ ಕುರುಬರಹಳ್ಳಿ ವೃತ್ತದಿಂದ ರೇಸ್‌ಕೋರ್ಸ್ ವೃತ್ತದ ಕಡೆಗೆ ಸಾಗುತ್ತಿದ್ದ ವಾಹನಗಳು ಕುರುಬರಹಳ್ಳಿ ವೃತ್ತದಲ್ಲಿ ಬಲಕ್ಕೆ ತಿರುಗಿ ವಾಯುವಿಹಾರ ರಸ್ತೆ ಮೂಲಕ ಎಂಎಂ ರಸ್ತೆ ತಲುಪಿ ಮುಂದೆ ಸಾಗಬೇಕು.
ಮಿಜಾ ರಸ್ತೆಯಿಂದ ಮೃಗಾಲಯದ ಕಡೆಗೆ ಸಾಗುತ್ತಿದ್ದ ವಾಹನಗಳು ನೇರವಾಗಿ ಮಿಜಾ ರಸ್ತೆಯಲ್ಲಿ ಸಾಗಿ ನಜರ್‌ಬಾದ್ ವೃತ್ತ ತಲುಪಿ ಮುಂದೆ ಸಾಗಬೇಕು. ನಂಜನಗೂಡು ಕಡೆಗೆ ಸಂಚರಿಸಬೇಕಾದ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾರ್ಡಿಂಜ್ ವೃತ್ತ ತಲುಪಿ ಬಿ.ಎನ್. ರಸ್ತೆ-ಪಾಠಶಾಲಾ ವೃತ್ತ-ಚಾಮರಾಜ ಜೋಡಿ ರಸ್ತೆ ಮೂಲಕ ರಾಮಸ್ವಾಮಿ ವೃತ್ತ-ಎಡತಿರುವು-ಜೆಎಲ್‌ಬಿ ರಸ್ತೆ- ನಂಜನಗೂಡು ರಸ್ತೆ ತಲುಪಿ ಮುಂದೆ ಸಾಗಬೇಕು.
ಕೊಳ್ಳೇಗಾಲ- ತಿ.ನರಸೀಪುರ ಕಡೆಗೆ ಸಂಚರಿಸಬೇಕಾದ ಕೆಎಸ್‌ಆರ್‌ಟಿಸಿ ಬಸ್ಸುಗಳು ಬಸ್ ನಿಲ್ದಾಣದಿಂದ ಫೈವ್‌ಲೈಟ್ ವೃತ್ತ-ಸರ್ಕಾರಿ ಭವನದ ಉತ್ತರದ್ವಾರ-ಪೊಲೀಸ್ ವೃತ್ತ-ಸ್ಟೇಡಿಯಂ ರಸ್ತೆ-ನಜರ್‌ಬಾದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.