ಬೇಧ-ಭಾವವಿಲ್ಲದೆ ಜೀವಿಸಬೇಕು
Team Udayavani, May 28, 2017, 12:24 PM IST
ಪಿರಿಯಾಪಟ್ಟಣ: ಕಾಲಕಾಲಕ್ಕೆ ವಿವಿಧ ಮಹನೀಯರು ಜಗತ್ತಿನಲ್ಲಿ ಜನಿಸಿ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದು, ಆ ಕೊಡುಗೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೇಧ-ಭಾವವಿಲ್ಲದೆ ಜೀವಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿಚನ್ನಣ್ಣನವರ್ ಹೇಳಿದರು.
ಪಟ್ಟಣದ ಮಹರಾಜ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಮಹರಾಜ ಐಟಿಐ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಮನುಕುಲ ವಿವಿಧ ಹಂತಗಳಲ್ಲಿ ಜೀವನ ತೋರಿಸುತ್ತದೆ.
ಪ್ರತಿಯೊಬ್ಬರು ಮಾದರಿ ಜೀವನ ನಡೆಸಲು ಯಾವುದೇ ತಪಸ್ಸಿನ ಅವಶ್ಯಕತೆ ಇಲ್ಲದೆ ವಿದ್ಯಾಭ್ಯಾಸದಂತಹ ಜಾnನ ಹೆಚ್ಚಿಸಿಕೊಂಡು ಮುನ್ನಡೆಯಬೇಕು ಎಂದರು. ಮನುಷ್ಯನಿಗೆ ಇತಿಹಾಸದ ಬಗ್ಗೆ ಕುತೂಹಲವಿರಬೇಕು ಮತ್ತು ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆಯ ಬದುಕು ರೂಪಿಸಿಕೊಳ್ಳಬೇಕು.
ಅನುಕರುಣೆಯ ಜೀವನಕ್ಕಿಂತ ಆದರ್ಶ ಜೀವನ ಮುಡುಪಾಗಬೇಕು, ಇದನ್ನೇ ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿಗೆ ಸಾರಿ ಹೇಳಿದ್ದಾರೆ. ಮಹನೀಯರ ಆಚರಣೆಗಳನ್ನಷ್ಟೆ ಮಾಡಿದರೆ ಸಾಲದು ಅವರ ತತ್ವಾದರ್ಶಗಳು ನಮಗೆ ಮಾದರಿಯಾಗಬೇಕು ಇಂದಿನ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಬೆಳೆಯಬೇಕು ಎಂದು ತಿಳಿಸಿದರು.
ಮೈಸೂರಿನ ಚೇತವನ ಬುದ್ಧ ವಿಹಾರದ ಮನೋರಕೀತ ಬಂತೇಜಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಎಲ್ಲಾ ಮಹನೀಯರ ತತ್ವಗಳು ಒಂದೇಯಾಗಿದ್ದು, ಅಂಬೇಡ್ಕರ್ ರೂಪಿಸಿದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರು ಅಂಹಕರಣ ಬೆಳೆೆಸಿಕೊಂಡು ಮುನ್ನಡೆಯಬೇಕು.
ಅಜಾnನ ಹಾಗೂ ದುರಾಸೆಗಳಿಂದ ಸಾಮಾನ್ಯ ಮನುಷ್ಯ ದೂರವಿರಬೇಕು ಆಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಮನುಷ್ಯ ಅಂತರಂಗದ ಬುದ್ಧಿಯಿಂದ ಪ್ರಚಲಿತವಾಗ ಬಲ್ಲನು. ಅಸಮಾನತೆ ಇನ್ನೂ ದೂರಾಗಿ ಸಮಾಜದಲ್ಲಿ ಸಮಾನತೆ ಹೆಚ್ಚಾಗಿ ಬೆಳೆಯ ಬೇಕಾಗಿದೆ ಎಂದು ಆಶಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮೈಸೂರಿನ ವಿದ್ಯಾವಿಕಾಸ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ, ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರ ಪ್ರಾಂಶುಪಾಕ ಕೆ.ಶ್ರೀಧರ್, ಹಿರಿಯ ಮುಖಂಡ ಜವರೇಗೌಡ, ಕರವೇ ಅಧ್ಯಕ್ಷ ಫಯಾಜ್, ಮಾಜಿ ಅಧ್ಯಕ್ಷ ಗಿರೀಶ್, ಪುರಸಭಾ ಸದಸ್ಯರಾದ ಪಿ.ಮಹವೇವ್, ಎ.ಕೆ.ಗೌಡ, ಸಂಸ್ಥೆಯ ಪ್ರಾಂಶುಪಾಲ ಮಹೇಶ್, ಉಪನ್ಯಾಸಕರಾದ ವಿಶ್ವನಾಥ್, ರಾಜಣ್ಣ, ಟಿಎಪಿಸಿಎಂಎಸ್ ಕಾರ್ಯದರ್ಶಿ ತಮ್ಮಣ್ಣಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.