ಬಜೆಟ್‌ನಲ್ಲಿ ಮೈಸೂರಿಗೆ ಶೂನ್ಯ ಕೊಡುಗೆ
Team Udayavani, Feb 10, 2019, 7:21 AM IST
ಮೈಸೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್‌ನಲ್ಲಿ ಮೈಸೂರಿಗೆ ಏನು ಕೊಡುಗೆ ನೀಡಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ದೂರಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಕಸ ವಿಲೇವಾರಿಗೆ ಹಣ ನೀಡುವಂತೆ ಮನವಿ ಮಾಡಿದ್ದೆವು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಸಂಬಂಧ ಪತ್ರ ಬರೆದಿದ್ದರು.
ಈ ಬಗ್ಗೆಯೂ ಯಾವುದೇ ಚಕಾರ ಎತ್ತಿಲ್ಲ. ಈ ಮೂಲಕ ಮೈಸೂರಿಗೆ ತಮ್ಮ ಬಜೆಟ್‌ನಲ್ಲಿ ಕೊಡುಗೆ ಶೂನ್ಯ ಎಂದು ಟೀಕಿಸಿದರು. ಲೋಕಸಭೆ ಚುನಾವಣೆಯಲ್ಲಿ ಮೈಸೂರು- ಕೊಡಗು ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸು ತ್ತಾರೆ ಎನ್ನುವ ಮಾತಿತ್ತು. ಬಜೆಟ್‌ನಲ್ಲಿ ಮೈಸೂರಿಗೆ ಏನು ಕೊಡುಗೆ ನೀಡಲಿಲ್ಲವೆಂದರೆ ಅವರು ಬರುವುದಿಲ್ಲ ಎಂದು ಅರ್ಥ.
ಬಜೆಟ್ ಮಂಡನೆ ವೇಳೆ ಅಯವ್ಯಯದ ಪುಸ್ತಕ ನೀಡದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ತಮಗೆ ಬೇಕಾದ ಘೋಷಣೆ ಮಾಡಿಕೊಳ್ಳುವ ವ್ಯವಸ್ಥೆಗಾಗಿ ನಮಗೆ ಆಯವ್ಯಯ ಪುಸ್ತಕ ಕೊಟ್ಟಿಲ್ಲ. ಹತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇರುವ ಕಾಲೇಜುಗಳನ್ನು ಮುಚ್ಚಿ ಮತ್ತೂಂದು ವಿಶ್ವವಿದ್ಯಾಲಯ ತೆರೆಯುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ವಾಜಪೇಯಿ ಆರೋಗ್ಯ ಶ್ರೀ , ಯಶಸ್ವಿನಿ, ರಾಜೀವ್ ಅರೋಗ್ಯ ಭಾಗ್ಯ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಗಳನ್ನೂ ರದ್ದು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಯುಷ್ಮಾನ್ ಭಾರತ್ ಯೋಜನೆಯನ್ನು ಅರೋಗ್ಯ ಕರ್ನಾಟಕ ಜೊತೆ ವಿಲೀನಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಅಯುಷ್ಮಾನ್ ಭಾರತ್ ಯೋಜನೆಯಲ್ಲಿ ಯಾವುದೆ ಆಸ್ಪತ್ರೆಗೆ ಹೋಗಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ, ಆಯುಷ್ಮಾನ್ ಭಾರತ್-ಅರೋಗ್ಯ ಕರ್ನಾಟಕ ಹಲವಾರು ನಿಬಂಧನೆಗೆ ಒಳಪಡಿಸಲಾಗಿದೆ. ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡುವುದಾಗಿ ಹೇಳಲಾಗಿದೆ.
ಸರ್ಕಾರಿ ಆಸ್ಪತ್ರೆ ವೈದ್ಯರು ಕಳುಹಿಸಿಕೊಟ್ಟರೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ತಾಲೂಕು ಕೇಂದ್ರಗಳಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ನಿರ್ವಹಣೆಯನ್ನು ಖಾಸಗಿಯರಿಗೆ ನೀಡಿರುವುದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಆಯುಷ್ಮಾನ್ ಭಾರತ್‌ಗೆ ನಿಬಂಧನೆಗಳನ್ನು ಹಾಕಿರುವ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ದಾವೆ ಹೂಡುತ್ತೇವೆ ಎಂದು ರಾಮದಾಸ್ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.