30 ಜಿಲ್ಲೆಯಲ್ಲಿ ಜೀರೋ ಆನ್‌ಎಂಪ್ಲಾಯ್‌ಮೆಂಟ್ ಮಾಡೆಲ್ ಸ್ಪರ್ಧೆ
Team Udayavani, Mar 22, 2018, 12:42 PM IST
ಮೈಸೂರು: ಮುಂದಿನ ವಿಧಾನಸಬಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಅನೇಕರು ಚುನಾವಣಾ ಕಣಕ್ಕಿಳಿಯುವ ಲೆಕ್ಕಾಚಾರ ಹಾಕಿದ್ದು, ಅದರಂತೆ ಜೀರೋ ಆನ್‌ಎಂಪ್ಲಾಯ್‌ಮೆಂಟ್ ಮಾಡೆಲ್ ಹೆಸರಿನ ಎನ್‌ಜಿಒ ಸಂಸ್ಥೆ ರಾಜ್ಯದ 30 ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕಿಳಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆ ವಿರುದ್ಧ ಎನ್‌ಜಿಒ ಸಂಸ್ಥಾಪಕ ಚಂದ್ರಮಿಶ್ರಾ ನೇತೃತ್ವದಲ್ಲಿ ಈಗಾಗಲೇ ಹೋರಾಟ ಆರಂಭಿಸಲಾಗಿದೆ. ಇದರ ಬೆನ್ನಲ್ಲೆ ಮುಂದಿನ ವಿಧಾನಸಬಾ ಚುನಾವಣೆಯಲ್ಲಿ ರಾಜಕೀಯ ರಂಗದ ಪ್ರವೇಶಕ್ಕೆ ಸಜಾಗಿದೆ.
ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿರುವ ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರ ಸೇರಿದಂತೆ ಬೆಂಗಳೂರಿನ ಮಹಾಲಕ್ಷ್ಮೀಲೇಔಟ್, ಮಂಡ್ಯ, ಕೋಲಾರ, ಚಿತ್ರದುರ್ಗ, ಭದ್ರಾವತಿ, ಶಿವಮೊಗ್ಗ, ಕೋಲಾರ ಹಾಗೂ ದಾವಣಗೆರೆ ಇನ್ನಿತರ ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಈಗಾಗಲೇ ತಾತ್ಕಾಲಿಕ ಪಟ್ಟಿಯೊಂದನ್ನು ಎನ್‌ಜಿಒ ಸಂಘಟಕರು ಸಿದ್ಧಪಡಿಸಿಕೊಂಡಿದ್ದಾರೆ.
ಮೈ ಎಂಎಲ್‌ಎ, ಮೈ ಜಾಬ್: ಮುಖ್ಯವಾಗಿ ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಯ ಬಗ್ಗೆ ಹೋರಾಟ ನಡೆಸುತ್ತಿರುವ ಎನ್‌ಜಿಒ ಸಂಸ್ಥಾಪಕ ಮಿಶ್ರಾ ಅವರು ಕೆಲವು ದಿನಗಳ ಹಿಂದೆ ನಗರದಲ್ಲಿ ಹೋರಾಟ ನಡೆಸುತ್ತಿರುವ ವೇಳೆ ಸ್ಥಳೀಯ ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಹಲ್ಲೆ ನಡೆಸಲಾಗಿತ್ತು. ಆದರೆ ತಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷಗಳ ವಿರುದ್ಧವಲ್ಲ,
ಬದಲಿಗೆ ಯುವಕರಿಗೆ ಸಮರ್ಪಕ ಉದ್ಯೋಗಗಳು ದೊರೆಯಲಿ ಎಂಬ ಉದ್ದೇಶದೊಂದಿಗೆ ಮೈ ಎಂಎಲ್‌ಎ, ಮೈ ಜಾಬ್ ಎಂಬ ಘೋಷಣೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು. ಹೀಗಾಗಿ ನಮ್ಮ ಸಂಘಟನೆಯಿಂದ ಯಾರೇ ಚುನಾವಣೆಯಲ್ಲಿ ಅಭ್ಯರ್ಥಿಯಾದರೂ, ಚುನಾವಣೆಯಲ್ಲಿ ಶಾಸಕರಾಗಿ ತಾವು ಆಯ್ಕೆಯಾದರೆ ಮುಂದಿನ ಐದು ವರ್ಷಗಳಲ್ಲಿ ಉದ್ಯೋಗಗಳನ್ನು ಸೃಷ್ಠಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡುವ ಅಫಿಡವಿಟ್ ಸಲ್ಲಿಸಬೇಕಿದೆ ಎಂದು ಚಂದ್ರಮಿಶ್ರಾ ತಿಳಿಸಿದರು.
ವರುಣಾ ಅಭ್ಯರ್ಥಿ ಅಂತಿಮ: ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅಥವಾ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೂ ತಮ್ಮ ಸಂಘಟನೆಯಿಂದ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಹೀಗಾಗಿ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದ್ದು,
ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬೇರೆ ಬೇರೆ ಹಂತಗಳಲ್ಲಿದೆ ಎಂದು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಹೆಸರನ್ನು ಬಹಿರಂಗಪಡಿಸಲು ಚಂದ್ರಮಿಶ್ರಾ ನಿರಾಕರಿಸಿದರು. ಈ ಹಿಂದೆ 2008ರಲ್ಲಿ ಒಡಿಶಾದಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 19 ಅಭ್ಯರ್ಥಿಗಳಲ್ಲಿ ತಮ್ಮ ಸಂಘಟನೆಯು ಬೆಂಬಲಿಸಿದ್ದ 13 ಮಂದಿ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಇದೇ ಉತ್ಸಾಹದಲ್ಲಿ ದೇಶದಲ್ಲಿ 2ನೇ ಬಾರಿಗೆ ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುವ ಮೂಲಕ ಚುನಾವಣೆಯಲ್ಲಿ ಪ್ರಬಲ ಎದುರಾಳಿಗಳನ್ನು ಎದುರಿಸಲು ಸಂಘಟನೆ ನಿರ್ಧರಿಸಿದೆ. ಅಲ್ಲದೆ ಇತ್ತೀಚೆಗೆ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಜೀರೋ ಆನ್‌ಎಂಪ್ಲಾಯ್‌ಮೆಂಟ್ ಮಾಡೆಲ್ ಸಂಘಟನೆ ಕಾರ್ಯಕರ್ತರು ಕ್ಷೇತ್ರದ 43 ಹಳ್ಳಿಗಳಲ್ಲಿ 11,000 ಯುವಕರೊಂದಿಗೆ ಸಂವಹನ ನಡೆಸಿದೆ.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವುದು ನಮ್ಮ ಪ್ರಮುಖವಾದ ಗುರಿಯಾಗಿದ್ದು, ಇದನ್ನು ಈಡೇರಿಸುವ ಭರವಸೆ ನೀಡುವವರಿಗೆ ನಾವು ಬೆಂಬಲಿಸಲಿದ್ದೇವೆ. ನಮ್ಮೊಂದಿಗೆ ಜೆಡಿಯು, ಯುವ ಮಿತ್ರರು ಸೇರಿದಂತೆ ಕೆಲವು ಸಂಘಟನೆಗಳು ಸಹ ಕೈಜೋಡಿಸಿವೆ. ಈಗಾಗಲೇ 10 ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ.
-ಚಂದ್ರಮಿಶ್ರಾ, ಸಂಸ್ಥಾಪಕ, ಜೀರೋ ಆನ್‌ಎಂಪ್ಲಾಯ್‌ಮೆಂಟ್ ಮಾಡೆಲ್.
* ಸಿ. ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.