ಸ್ವಪಕ್ಷೀಯರ ಒತ್ತಡಕ್ಕೆ ಜಿಪಂ ಅಧ್ಯಕ್ಷೆ ರಾಜೀನಾಮೆ
Team Udayavani, Dec 22, 2018, 11:25 AM IST
ಮೈಸೂರು: ಸ್ವಪಕ್ಷೀಯ ಜೆಡಿಎಸ್ ಸದಸ್ಯರ ಒತ್ತಡಕ್ಕೆ ಮಣಿದ ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯಿಮಾ ಸುಲ್ತಾನ, ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರೆ, ಮೈತ್ರಿ ಪಕ್ಷ ಬಿಜೆಪಿಯಿಂದ ಉಪಾಧ್ಯಕ್ಷರಾಗಿದ್ದ ಜಿ.ನಟರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅಧ್ಯಕ್ಷೆ ನಯಿಮಾ ಸುಲ್ತಾನ ಅವರು ಶುಕ್ರವಾರ ಜಿಪಂ ಸಾಮಾನ್ಯ ಸಭೆ ಕರೆದಿದ್ದರು. ಆದರೆ, ಸಾಮಾನ್ಯ ಸಭೆ ನಡೆಯುವ ಬದಲಿಗೆ ಜಿಪಂ ಆವರಣ ಹಲವು ನಾಟಕೀಯ ಬೆಳೆವಣಿಗೆಗಳಿಗೆ ಸಾಕ್ಷಿಯಾಯಿತು.
ಆಂತರಿಕ ಒಪ್ಪಂದ: ಶುಕ್ರವಾರ ಬೆಳಗ್ಗೆ 11ಗಂಟೆಗೆ ಅಧ್ಯಕ್ಷೆ ನಯಿಮಾ ಸುಲ್ತಾನ ಸಾಮಾನ್ಯ ಸಭೆ ಕರೆದಿದ್ದರು. ಆದರೆ, ಸಭೆ ನಡೆಸಲು ಸಭಾಂಗಣಕ್ಕೆ ತೆರಳು ಅವಕಾಶ ಕೊಡದ ಸ್ವಪಕ್ಷೀಯ ಜೆಡಿಎಸ್ ಸದಸ್ಯರು, ಕಿರು ಸಭಾಂಗಣದಲ್ಲಿ ಸೇರಿ ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಬ್ಬರಿಗೆ ಅವಕಾಶ ಮಾಡಿಕೊಡಿ ಎಂದು ಒತ್ತಡ ಹೇರಿದ್ದರಿಂದ ನಯಿಮಾಸುಲ್ತಾನ ಅನಿವಾರ್ಯವಾಗಿ ರಾಜೀನಾಮೆ ಕೊಡಲು ಒಪ್ಪಿ, ರಾಜೀನಾಮೆ ಘೋಷಣೆ ಮಾಡಿದರು. ಈ ವೇಳೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಜಿ.ನಟರಾಜ್ ರಾಜೀನಾಮೆ ಸಲ್ಲಿಸಿದರು.
ಶುಕ್ರವಾರ ಬೆಳಗ್ಗೆ 11ಗಂಟೆಗೆ ಅಧ್ಯಕ್ಷೆ ನಯಿಮಾ ಸುಲ್ತಾನ ಸಾಮಾನ್ಯ ಸಭೆ ಕರೆದಿದ್ದರು. ಅದರಂತೆ ವಿರೋಧ ಪಕ್ಷ ಕಾಂಗ್ರೆಸ್‌ನ ಸದಸ್ಯರು ಸಭಾಂಗಣದಲ್ಲಿ ಹಾಜರಾಗಿ ಅರ್ಧಗಂಟೆ ಕಾದರಾದರು ಅಧ್ಯಕ್ಷೆ ನಯಿಮಾ ಸುಲ್ತಾನ ಸಭಾಂಗಣಕ್ಕೆ ಬರಲಿಲ್ಲ. ನಿಗದಿತ ಸಮಯ ಮೀರಿ ಅರ್ಧಗಂಟೆಯಾದರು ಸಭೆ ಆರಂಭವಾಗದಿರುವುದಕ್ಕೆ ಕಾಂಗ್ರೆಸ್‌ನ ಡಾ.ಪುಷ್ಪಾ ಅಮರನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಸಿಇಒ ಕೆ.ಜ್ಯೋತಿ ಅವರು ಅಧ್ಯಕ್ಷರು ಬಂದು ಸಭೆ ಆರಂಭಿಸಲಿದ್ದಾರೆ ಎಂದು ತಿಳಿಸಿದರು.
ರಾಜೀನಾಮೆ ಪ್ರಹಸನ: ಈ ನಡುವೆ ಜೆಡಿಎಸ್ ಸದಸ್ಯರು ಜಿಪಂ ಕಟ್ಟಡದ ಮೊದಲ ಮಹಡಿಯಲ್ಲಿರುವ ಕಿರು ಸಭಾಂಗಣದಲ್ಲಿ ಸೇರಿ, ಈ ಹಿಂದೆ ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ, ಉಪಾಧ್ಯಕ್ಷರು ರಾಜೀನಾಮೆ ಕೊಡುವಂತೆ ಒತ್ತಡ ಹೇರಿದರು. ಇದಕ್ಕೆ ಒಪ್ಪಿದ ಉಪಾಧ್ಯಕ್ಷ ಜಿ.ನಟರಾಜ್, ರಾಜೀನಾಮೆ ಪತ್ರ ಬರೆದು ಅಧ್ಯಕ್ಷರಿಗೆ ಸಲ್ಲಿಸಿದರು.
ಸಹಿ ಹಾಕದ ನಯಿಮಾ: ತಮ್ಮ ಲೆಟರ್ ಹೆಡ್‌ನಲ್ಲಿ ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬರೆಯಿಸಿ, ಜೆಡಿಎಸ್ ಸದಸ್ಯರ ಎದುರು ಘೋಷಣೆ ಮಾಡಿದ ನಯಿಮಾ ಸುಲ್ತಾನ, ರಾಜೀನಾಮೆ ಪತ್ರಕ್ಕೆ ಸಹಿ ಹಾಕದೆ ಎದ್ದು ಬಂದರು. ಅಧ್ಯಕ್ಷರು ಸಭಾಂಗಣಕ್ಕೆ ಬರುತ್ತಿದ್ದಂತೆ ವಿಪಕ್ಷ ನಾಯಕ ಡಿ.ರವಿಶಂಕರ್ ಮಾತನಾಡಿ, ಜಿಪಂ ಸಭೆಯನ್ನು ಇಡೀ ಜಿಲ್ಲೆಯ ಜನತೆ ಗಮನಿಸುತ್ತಿರುತ್ತಾರೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಮ್ಮ ಪಕ್ಷದ ಸದಸ್ಯರ ಮನವೊಲಿಸಿ ಸಭೆ ಮಾಡಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್‌ನ ಡಾ.ಪುಷ್ಪ ಅಮರನಾಥ್, ನಮ್ಮ ನಿರೀಕ್ಷೆಯನ್ನು ಹುಸಿ ಮಾಡದೆ ಸಭೆಗೆ ಬಂದಿದ್ದಕ್ಕೆ ಧನ್ಯವಾದಗಳು ಅಧ್ಯಕ್ಷರೇ ಎಂದು ನಯಿಮಾ ಸುಲ್ತಾನ ಅವರ ಕಾಲೆಳೆದರು. ಬಿಜೆಪಿಯ ವೆಂಕಟಸ್ವಾಮಿ ಮಾತನಾಡಿ, ನೀವು ಅವರನ್ನು (ಜೆಡಿಎಸ್ ಸದಸ್ಯರು) ಕಾಯ್ತಿದ್ದೀರಿ, ಅವರು ನೀವು ಹೊರಗೆ ಬರುವುದನ್ನು ಕಾಯುತ್ತಿದ್ದಾರೆ. ಕೋರಂ ಆಗಲ್ಲ, ಇದನ್ನು ಅರ್ಥ ಮಾಡಿಕೊಂಡು ಸಭೆಯನ್ನು ಮುಂದೂಡಿ ಎಂದು ಸಲಹೆ ನೀಡಿದರು.
ಆದರೆ, ಪುಷ್ಪ ಅಮರನಾಥ್, ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೊತ್ತು ತಂದಿದ್ದೇವೆ, ಸಭೆ ಮಾಡಿ ಎಂದರು. ಅದಕ್ಕೆ ಉತ್ತರಿಸಿದ ನಯಿಮಾ ಸುಲ್ತಾನ, ಹತ್ತು ನಿಮಿಷ ಟೈಂ ಕೊಡಿ ಸಭೆ ಮುಂದೂಡಲ್ಲ, ನಡೆಸುತ್ತೇನೆ ಎಂದು ಹೇಳಿದರು. ಅದಕ್ಕೆ ಒಪ್ಪಿದ ವಿಕಪ್ಷ ನಾಯಕ ಡಿ.ರವಿಶಂಕರ್, ಹತ್ತು ನಿಮಿಷ ಕಾಲಾವಕಾಶ ಕೇಳಿದ್ದೀರಿ, ನಾವು ಕಾಯೆ¤àವೆ ಸಭೆ ಮಾಡಿ ಎಂದರು.
ಮತ್ತೆ ಕಿರು ಸಭಾಂಗಣಕ್ಕೆ ತೆರಳಿದ ನಯಿಮಾಸುಲ್ತಾನ, ತಮ್ಮ ಪಕ್ಷದ ಸದಸ್ಯರ ಮನವೊಲಿಸಲು ಯತ್ನಿಸಿದರಾದರು ಮೊದಲು ನಿಮ್ಮ ರಾಜೀನಾಮೆ ಅಂಗೀಕಾರವಾಗಲಿ, ಆ ನಂತರ ಸಭೆ ನಡೆಸೋಣ ಎಂದಿದ್ದರಿಂದ ಮಧ್ಯಾಹ್ನ 12.35ಕ್ಕೆ ಮತ್ತೆ ಸಭಾಂಗಣಕ್ಕೆ ಮತ್ತೆ ಬಂದ ನಯಿಮಾ ಸುಲ್ತಾನ, ಕೋರಂ ಅಭಾವದಿಂದ ಇಂದಿನ ಸಭೆ ಮುಂದೂಡಿರುವುದಾಗಿ ಪ್ರಕಟಿಸಿ ಹೊರ ನಡೆದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಆಗಬಾರದು ಎಂದು ಡಾ.ಪುಷ್ಪ ಅಮರನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಯಡವಟ್ಟಿಗೆ ಕ್ಷಮೆ ಕೋರಿದ ಸಿಇಒ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಯಿಮಾ ಸುಲ್ತಾನ ಒಪ್ಪಿಗೆ ಸೂಚಿಸುತ್ತಿದ್ದಂತೆ ಸಭಾಂಗಣಕ್ಕೆ ಆತುರಾತುರವಾಗಿ ಬಂದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್, ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಬಿಟ್ಟರು. ಆದರೆ, ಸಭೆ ನಡೆಸಲು ಕೋರಂ ಇರಲಿಲ್ಲ. ಜಿಪಂ ಸಿಇಒ ಅಲ್ಲೇ ಇದ್ದರಾದರು ತಡೆಯುವ ಪ್ರಯತ್ನ ಮಾಡಲಿಲ್ಲ.
ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ರಾಜೀನಾಮೆ ಅಂಗೀಕಾರವಾಗದೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು, ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಲು ಬರುವುದಿಲ್ಲ. ಅಧ್ಯಕ್ಷರು ರಾಜೀನಾಮೆ ನೀಡುವ ಮುನ್ನವೇ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಂಪರ್ಕ ಕೊರತೆಯಿಂದ ಈ ಸಮಸ್ಯೆಯಾಯಿತು ಎಂದು ಸಿಇಒ ಕೆ.ಜ್ಯೋತಿ ಅವರು ಸದಸ್ಯರ ಕ್ಷಮೆ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.