![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Jun 5, 2019, 3:08 PM IST
ಸತೀಶ್ ದೇಪುರ
ಮೈಸೂರು: ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಂದು ಮಹಾರಾಜರು ಸ್ಥಾಪಿಸಿದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮೂಲಸೌಲಭ್ಯಗಳಿಂದ ವಂಚಿತರಾಗಿ ಪರಿತಪಿಸುವಂತಾಗಿದೆ.
ಮೈಸೂರು ಮಾಜಿ ಮುಖ್ಯಮಂತ್ರಿಗಳ ತವರು ಜಿಲ್ಲೆ, ಪ್ರಸ್ತುತ ಇಬ್ಬರು ಸಚಿವರನ್ನು ಹೊಂದಿದೆ. ಆದರೆ ಮೈಸೂರು ನಗರದ ಹೃದಯ ಭಾಗದಲ್ಲಿ ಮಹಾ ರಾಜರಿಂದ ಸ್ಥಾಪಿಸಲ್ಪಟ್ಟ ಮಹಾರಾಣಿ ಮಹಿಳಾ ಪದವಿ ಪೂರ್ವ ಕಾಲೇಜಿನ ಸ್ಥಿತಿ ಶೋಚನೀಯವಾಗಿದೆ.
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾ ರಾಣಿ ಮಹಿಳಾ ಪದವಿ ಪೂರ್ವ ಕಾಲೇಜು 40 ವರ್ಷ ಗಳ ಹಿಂದೆ ಕಡಿಮೆ ವಿದ್ಯಾರ್ಥಿನಿಯರ ಸಂಖ್ಯೆ ಯಿಂದ ಆರಂಭವಾಗಿ ಇಂದು ಬೃಹತ್ ಮಟ್ಟಕ್ಕೆ ಬೆಳೆದಿದೆ. ಮೈಸೂರು ಜಿಲ್ಲೆ, ನಗರ, ಪಕ್ಕದ ಚಾಮ ರಾಜನಗರ, ಮಂಡ್ಯ ಭಾಗದ ವಿದ್ಯಾರ್ಥಿನಿಯರು ಸೇರಿದಂತೆ ಪ್ರಸ್ತುತ 2150 ಮಂದಿ ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕಾರಿಡಾರ್‌ನಲ್ಲಿ ತರಗತಿ: ದ್ವಿತೀಯ ಪಿಯುಸಿಯಲ್ಲಿ 850 ವಿದ್ಯಾರ್ಥಿನಿಯರಿದ್ದರೆ, ಈ ಬಾರಿ ಪ್ರಥಮ ಪಿಯುಸಿಗೆ 1150 ಮಂದಿ ದಾಖಲಾಗಿದ್ದಾರೆ. ಒಟ್ಟು 2 ಸಾವಿರಕ್ಕೂ ಹೆಚ್ಚು ಮಕ್ಕಳಿರುವ ಕಾಲೇಜಿನಲ್ಲಿ ಕೇವಲ 19 ಕೊಠಡಿಗಳು ಮಾತ್ರ ಲಭ್ಯವಿದೆ. ಉಳಿದ ಹೆಚ್ಚುವರಿ ತರಗತಿಗಳನ್ನು ಕಾಲೇಜಿನ ಕಾರಿಡಾರ್‌ನಲ್ಲಿ ನಡೆಸಲಾ ಗುತ್ತಿದೆ. ತೆರೆದ ಸ್ಥಳದಲ್ಲಿ ತರಗತಿಗಳು ನಡೆಯುತ್ತಿ ರುವುದರಿಂದ ಉಪನ್ಯಾಸಕರು ಹೇಳುವ ಮಾತುಗಳು ಸ್ಪಷ್ಟವಾಗಿ ಹಿಂದೆ ಕುಳಿತಿರುವ ವಿದ್ಯಾರ್ಥಿಗಳಿಗೆ ಕೇಳಿ ಸದ ಸ್ಥಿತಿ ಇದೆ. ಜೊತೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ಕ 3 ಪ್ರಯೋ ಗಾಲಯಗಳಿದ್ದು, ಅವು ಸಾಲದಾಗಿದೆ.
ಶೌಚಾಲಯ ಸಮಸ್ಯೆ: ಇಡೀ ರಾಜ್ಯದ ಯಾವ ಪಿಯು ಕಾಲೇಜುಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ವಿದ್ಯಾರ್ಥಿನಿಯರ ಸಂಖ್ಯೆ ಇಲ್ಲ. 2 ಸಾವಿರಕ್ಕೂ ಹೆಚ್ಚು ಹೆಣ್ಣ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅವರಿಗೆ ಅಗತ್ಯವಾಗಿ ಬೇಕಾದ ಶೌಚಾಲಗಳೇ ಇಲ್ಲ. ಕೇವಲ ಹತ್ತು ಶೌಚಾ ಗೃಹಗಳಿದ್ದು, ಮಕ್ಕಳು ತರಗತಿ ಬಿಟ್ಟು ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಇದೆ. ಜೊತೆಗೆ ನಾಲ್ಕು ತಿಂಗಳ ಹಿಂದೆ ಹೆಚ್ಚುವರಿಯಾಗಿ 5 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಜನಪ್ರತಿನಿಧಿಗಳು ಉದ್ಘಾಟನೆಯಾಗುವವರೆಗೆ ಬಳಕೆ ಮಾಡದಂತೆ ಬೀಗ ಹಾಕಲಾಗಿದೆ. ಜನಪ್ರತಿ ನಿಧಿಗಳು ಉದ್ಘಾಟನೆ ಮಾಡುವವರೆಗೂ ಮಕ್ಕಳು ಇರುವುದರಲ್ಲೇ ಅನುಸರಿಸಿಕೊಂಡು ಹೋಗುವ ಹೀನಾಯ ಪರಿಸ್ಥಿತಿ ಇದೆ.
ಶುದ್ಧ ಕುಡಿಯುವ ನೀರಿಲ್ಲ…
ಕಾಲೇಜಿನಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ನೀರಿಲ್ಲ. ಕೊಳವೆ ಬಾವಿಯಲ್ಲಿ ಸಾಕಷ್ಟು ನೀರು ಬರುತ್ತಿದೆ. ಆದರೆ ಅದು ಕುಡಿಯಲು ಯೋಗ್ಯವಾಗಿಲ್ಲ. ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದರೆ, ಮಕ್ಕಳ ಕುಡಿಯುವ ನೀಡಿರನ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಕಾಲೇಜು ಉಪನ್ಯಾಸಕರ ಮನವಿ. ಮೇಲ್ದರ್ಜೆಗೇರದ ಗ್ರಂಥಾಲಯ: ಕಾಲೇಜಿನಲ್ಲಿ ಇಷ್ಟು ದೊಡ್ಡಪ್ರಮಾಣದ ವಿದ್ಯಾರ್ಥಿಗಳ ಸಂಖ್ಯೆ ಇದ್ದರೂ ಗ್ರಂಥಾಲಯ ಮಾತ್ರ ಆರಂಭದಲ್ಲಿ ಹೇಗಿತ್ತೋ, ಇಂದಿಗೂ ಹಾಗೆಯೇ ಇದೆ. ಹಳೆಯ ಪುಸ್ತಕಗಳನ್ನೆ ತುಂಬಿರುವ ಗ್ರಂಥಲಯದಲ್ಲಿ ಹೊಸ ಪುಸ್ತಕಗಳನ್ನು ಇಡಲು ಸ್ಥಳವೇ ಇಲ್ಲದಾ ಗಿದೆ. ಮಕ್ಕಳು ಕುಳಿತು ಪುಸ್ತಕಗಳನ್ನು ಓದಲು ಸಮರ್ಪಕ ವಾಚನಾಲಯದ ಕೊರತೆ ಇದೆ. ಸಂಬಂಧಪಟ್ಟ ಇಲಾಖೆ ಮತ್ತು ಸರಕಾರ ಇತ್ತ ಗಮನಹರಿಸಿ ಅಗತ್ಯ ಸೌಲಭ್ಯ ನೀಡುವಂತೆ ಮಕ್ಕಳ ಒತ್ತಾಯವಾಗಿದೆ.
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.