ಮಕ್ಕಳಿಂದ ದೂರವಾದ ಉದ್ಯಾನ!
ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆಹಿಡಿದ ಕೈಗನ್ನಡಿ
Team Udayavani, Oct 23, 2019, 3:55 PM IST
ಪ್ರಶಾಂತ್ ಶೆಟ್ಟಿ
ಎನ್.ಆರ್.ಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ದಾನಿಗಳು ನೀಡಿರುವ ನಿವೇಶನದಲ್ಲಿ ನಿರ್ಮಾಣವಾಗಿರುವ ಉದ್ಯಾನ ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದೆ.
2011-12ನೇ ಸಾಲಿನಲ್ಲಿ ಸುಮಾರು 15ಲಕ್ಷ ರೂ.ವೆಚ್ಚದಲ್ಲಿ ಉದ್ಯಾನಕ್ಕೆ ಸುತ್ತಲೂ ಸುಸಜ್ಜಿತವಾದ ತಡೆಗೋಡೆ ನಿರ್ಮಿಸಿ ಉತ್ತಮ ಹುಲ್ಲು ಹಾಸು, ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿತ್ತು. ಅಲ್ಲದೇ, ತಡೆಗೋಡೆಯ ಮೇಲೆ ಹಾಗೂ ಉದ್ಯಾನದ ಒಳ ಭಾಗದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು.
ಮಕ್ಕಳ ಮನರಂಜನೆಗಾಗಿ ಜೋಕಾಲಿ, ಜಾರುಬಂಟೆ, ಸಾಹಸಮಯ ಆಟಿಕೆಗಳನ್ನು ಅಳವಡಿಸಲಾಗಿತ್ತು. ಪಟ್ಟಣದ ವ್ಯಾಪ್ತಿಯ ನೂರಾರು ಮಕ್ಕಳು ಇದರ ಸದು ಪಯೋಗಪಡಿಸಿಕೊಂಡು ಮನರಂಜನೆ ಅನುಭವಿಸಿದ್ದರು. ಆದರೆ, ಕೆಲವು ದಿನಗಳಲ್ಲಿ ಇಲ್ಲಿ ಅಳವಡಿಸಿದ್ದ ಕೆಲ ಆಟಿಕೆಗಳು ಮುರಿದು ಹೋಗಿದ್ದರಿಂದ ಮಕ್ಕಳು ಉದ್ಯಾನದತ್ತ ಮುಖ ಮಾಡುತ್ತಿರಲಿಲ್ಲ. ಇದನ್ನು ಮನಗಂಡ ಇಲ್ಲಿನ ಪಟ್ಟಣ ಪಂಚಾಯಿತಿ 2017ರಲ್ಲಿ 1.50ಲಕ್ಷ ರೂ.ವೆಚ್ಚದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಿತು. ಇದರಲ್ಲಿ ಶಿಥಿಗೊಂಡಿರುವ ಆಟಿಕೆಗಳನ್ನು ತೆಗೆದು ಹೊಸ ಆಟಿಕೆಗಳನ್ನು ಅಳವಡಿಸಿತು. ಅಲ್ಲದೇ, ಕೆಲವನ್ನು ದುರಸ್ತಿಪಡಿಸಿ ಅಳವಡಿಸಿ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಆದರೆ, ಪ್ರಸ್ತುತ ಉದ್ಯಾನದ ಸಾಕಷ್ಟು ಆಟಿಕೆಗಳು ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಆಟವಾಡದ ಸ್ಥಿತಿ ನಿರ್ಮಾಣವಾಗಿದೆ.
ಈ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆಯು ಸಹ ಇರುವುದರಿಂದ ಉದ್ಯಾನ ಅಭಿವೃದ್ಧಿಯಿಂದ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿತ್ತು. ರಜಾ ದಿನಗಳಲ್ಲಿ ಪಟ್ಟಣದ ವ್ಯಾಪ್ತಿಯ ಮಕ್ಕಳು ಇಲ್ಲಿ ಆಟವಾಗಿ ಮನರಂಜನೆ ಪಡೆಯುತ್ತಿದ್ದರು.
ಉದ್ಯಾನದಲ್ಲಿ ಸಾಕಷ್ಟು ಆಟಿಕೆಗಳು ಮುರಿದು ಹೋಗುವುದರಿಂದ ಮಕ್ಕಳಿಗೆ ಮನರಂಜನೆ ಸೌಲಭ್ಯ ಲಭ್ಯವಾಗುತ್ತಿಲ್ಲ ಎಂದು ಪೋಷಕರು ತಿಳಿಸುತ್ತಾರೆ.
ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿರುವ ಉದ್ಯಾನದಲ್ಲಿ ಮಕ್ಕಳು ಆಟುವ ಆಟಿಕೆಗಳಲ್ಲಿ ವಯಸ್ಕರು ಆಟವಾಡಿ ಮುರಿದು ಹೋಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಅನುದಾನ ಕೊರತೆಯಿದ್ದು, ಅನುದಾನ ಬಂದ ಕೂಡಲೇ ಉದ್ಯಾನದ ಮಧ್ಯಭಾಗದಲ್ಲಿ ನರಸಿಂಹರಾಜಪುರ ಹೆಸರು ಬರಲು ಕಾರಣವಾದ ಕಂಠೀರವ ನರಸಿಂಹರಾಜ ಒಡೆಯರ ಪ್ರತಿಮೆಯನ್ನು ನಿರ್ಮಿಸಿ
ಉದ್ಯಾನ ಅಭಿವೃದ್ಧಿಪಡಿಸಿ, ಪಟ್ಟಣ ಪಂಚಾಯಿತಿಯಿಂದಲೇ ಉದ್ಯಾನ ನಿರ್ವಹಣೆಗೆ ಒಬ್ಬರನ್ನು ನೇಮಿಸಲಾಗುವುದು. ಮಕ್ಕಳು ಮಾತ್ರ ಆಟವಾಡುವಂತೆ ನೋಡಿಕೊಳ್ಳ ಲಾಗುವುದು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ತಿಳಿಸಿದರು.
ಉದ್ಯಾನದಲ್ಲಿ ಕಸದ ರಾಶಿಯಿದ್ದು, ಇದರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಲ್ಲದೇ ಶೀಘ್ರದಲ್ಲೇ ಮಕ್ಕಳ ಮನರಂಜನೆಗೆ ಅವಕಾಶ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.