ತೋಟಗಾರಿಕೆಯಲ್ಲಿ ಯಶಸ್ಸು ಕಂಡ ನಾಗನಾಥರಾವ

Team Udayavani, Apr 26, 2019, 12:33 PM IST

26-April-16

ಕಲಬುರಗಿ: ಬೀದರ ತಾಲೂಕಿನ ಕಮಠಾಣಾ ಹಾಗೂ ಯಾಕತಪುರ ಗ್ರಾಮಗಳ 12 ಎಕರೆ ಜಮೀನಿನಲ್ಲಿ ತೋಟಗಾರಿಕೆ ನಡೆಸಿ ಯಶಸ್ಸು ಕಂಡಿರುವ ನಾಗನಾಥರಾವ್‌ ನಿಡೋದೆ.

ಬೀದರಿನ ನಿವೃತ್ತ ಬ್ಯಾಂಕ್‌ ನೌಕರ ನಾಗನಾಥರಾವ ನಿಡೋದೆ ಬೀದರ ತಾಲೂಕಿನ ಕಮಠಾಣಾ ಮತ್ತು ಯಾಕತಪುರ ಗ್ರಾಮಗಳಲ್ಲಿರುವ ತಮ್ಮ 12 ಎಕರೆ ಜಮೀನಿನಲ್ಲಿ ತೋಟಗಾರಿಕೆ ಕೈಗೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ 2016ರಲ್ಲಿ ನಿವೃತ್ತಿಯಾಗಿರುವ 61 ವರ್ಷದ ನಾಗನಾಥರಾವ ಮೂಲತಃ ಔರಾದ (ಬಿ) ತಾಲೂಕಿನ ನಿಡೋದಾ ಗ್ರಾಮದವರು. ಹಿರಿಯರೊಂದಿಗೆ ಬೀದರಿಗೆ 1973ರಲ್ಲಿ ವಲಸೆ ಬಂದಿದ್ದು, 1988ರಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ನೌಕರಿ ಪಡೆದಿದ್ದರು. ಕೃಷಿಯನ್ನು ಹೆಚ್ಚು ಲಾಭದಾಯಕ ಮಾಡಿಕೊಳ್ಳಲು ಕಮಠಾಣಾ, ಯಾಕತಪುರ ಗ್ರಾಮಗಳಲ್ಲಿರುವ ಜಮೀನಿನಲ್ಲ್ಲಿ ನೀರಾವರಿಗಾಗಿ ತಲಾ ಒಂದೊಂದು ಕೊಳವೆ ಬಾವಿ ತೋಡಿಸಿದರು.

ಇವರು ತಮ್ಮ ಜಮೀನಿನಲ್ಲಿ ಮೊದಲು ಸೋಯಾ, ತೊಗರಿ, ಹೆಸರು ಬೆಳೆಯುತ್ತಿದ್ದರು. ಆಗ ಅಷ್ಟೇನೂ ಆದಾಯ ಸಿಗುತ್ತಿರಲಿಲ್ಲ. ತೋಟಗಾರಿಕೆ ಅಧಿಕಾರಿಗಳ ಸೂಕ್ತ ಮಾರ್ಗದರ್ಶನ ಮೇರೆಗೆ ತೋಟಗಾರಿಕೆ ಮಾಡುವ ಪಣ ತೊಟ್ಟರು.

ತೋಟಗಾರಿಕೆಯಲ್ಲಿ ಖರ್ಚು ಹೆಚ್ಚು, ಆದಾಯವೂ ಹೆಚ್ಚು ಎಂದು ಅರಿತು, ಕಮಠಾಣಾದ ಐದು ಎಕರೆಯಲ್ಲಿ ಕಳೆದ ಐದಾರು ವರ್ಷದ ಹಿಂದೆ ಗೋವಾದಿಂದ ತಂದ ವಿ-4, ವಿ-7 ತಳಿಯ ಗೋಡಂಬಿ( ಕಾಜು) ಗಿಡಗಳನ್ನು ಬೆಳೆಸಿದರು. ಇವು ಸಮೃದ್ಧವಾಗಿ ಮತ್ತು ಹಸಿರಾಗಿ ಬೆಳೆದು ಫಲ ಕೊಡುತ್ತಿವೆ. ಕಳೆದ ವರ್ಷ 10ರಿಂದ 15 ಕ್ವಿಂಟಲ್ ಗೋಡಂಬಿ ಇಳುವರಿ ಪಡೆದು ಸುಮಾರು 3ರಿಂದ 4ಲಕ್ಷ ರೂ. ಪಡೆದಿದ್ದಾರೆ. ಈ ವರ್ಷ ಆರು ಲಕ್ಷ ರೂ.ವರೆಗೆ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಯಾಕತಪುರದ 4.50 ಎಕರೆಯಲ್ಲಿ ಬೆನಿಶಾನ್‌, ದಶಹರಿ, ಕೇಸರ್‌ ತಳಿಯ ಮಾವಿನ ಗಿಡಗಳನ್ನು ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ 2.50 ಎಕರೆಯಲ್ಲಿ ಜಿ-9 ಬಾಳೆ ಬೆಳೆಸಿ ಎಕರೆಗೆ 45,000ರೂ. ಸಹಾಯಧನ ಪಡೆದುಕೊಂಡಿದ್ದಾರೆ.

ತಮ್ಮ ಎರಡೂ ತೋಟಗಳಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಲ್ಲದೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಶೇ.90ರಷ್ಟು ಸಹಾಯಧನ ಪಡೆದಿದ್ದಾರೆ. ಮಳೆ ನೀರಿನ ಸಂಗ್ರಹಣೆಗಾಗಿ 20x20x3 ಅಡಿ ಅಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, 1.35 ಲಕ್ಷ ರೂ. ಸಹಾಯಧನ ಪಡೆದುಕೊಂಡಿದ್ದಾರೆ.

ಈಗ ಟ್ರ್ಯಾಕ್ಟರ್‌ ಮತ್ತಿತರ ಯಂತ್ರೋಪಕರಣ ಮತ್ತು ಪ್ರತಿ ತೋಟದಲ್ಲಿ ಒಬ್ಬೊಬ್ಬ ಆಳಿನ ಸಹಾಯದಿಂದ ಕೆಲಸ ಮಾಡಿಸುತ್ತಿದ್ದಾರೆ. ಹುಬ್ಬಳ್ಳಿಯ ಮತ್ತು ಸ್ಥಳೀಯ ಹಣ್ಣು ಮಾರಾಟಗಾರರು ಇವರ ತೋಟಕ್ಕೆ ಬಂದು ಮಾವು, ಗೋಡಂಬಿ ಮತ್ತು ಬಾಳೆ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಮಾವು, ಬಾಳೆ ಮತ್ತು ತರಕಾರಿ ಬೆಳೆಗಳ ಕಟಾವು ಹಾಗೂ ಗ್ರೇಡಿಂಗ್‌ ಮತ್ತು ಪ್ಯಾಕಿಂಗ್‌ ಮಾಡಲು ತೋಟಗಾರಿಕೆ ಇಲಾಖೆಯಿಂದ ಪ್ಯಾಕ್‌ಹೌಸ್‌, ಎರೆಹುಳು ಗೊಬ್ಬರದ ಘಟಕಗಳನ್ನು ನಿರ್ಮಿಸಿಕೊಳ್ಳುವ ಯೋಜನೆಯನ್ನು ಇವರು ಹೊಂದಿದ್ದಾರೆ. ಇವರ ಮಗ ಸಿವಿಲ್ ಇಂಜಿನಿಯರ್‌ ಆಗಿದ್ದಾರೆ.

ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಕೃಗೊಳ್ಳಲು ಅನುವಾಗುವಂತೆ ಒಂದೆರಡು ದೇಸಿ ಹಸುಗಳ ಸಾಕಣೆ ಮತ್ತು ಬಾಳೆ ಫಸಲು ತೆಗೆದುಕೊಂಡು ನಾಲ್ಕು ಎಕರೆಯಲ್ಲಿ ಶುಂಠಿ (ಅಲ್ಲಾ) ಬೆಳೆಯುವ ಹಾಗೂ ಬದುಗಳ ಮೇಲೆ ಅರಣ್ಯ ಗಿಡಗಳನ್ನು ಬೆಳೆಸುವ ಯೋಜನೆ ರೂಪಿಸಿಕೊಂಡಿದ್ದಾರೆ.

ಎರಡೂ ತೋಟಗಳ ನಿರ್ವಹಣೆಗೆ ಪ್ರತಿ ವರ್ಷ 1.5 ರಿಂದ 2 ಲಕ್ಷ ರೂ. ವರೆಗೆ ಖರ್ಚು ಮತ್ತು 5ರಿಂದ 6 ಲಕ್ಷ ರೂ. ವರೆಗೆ ಆದಾಯ ಬರುತ್ತಿದೆ. ಸಮಗ್ರ ಕೃಷಿ, ಬಹು ಬೆಳೆ ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಯೋಚನೆಯಿದೆ. ಅಲ್ಲದೇ ಫಸಲನ್ನು ಸ್ವಂತ ಮಾರಾಟ ಮಾಡುವ ಉದ್ದೇಶವೂ ಇದೆ. ತಮ್ಮ ಸಾಧನೆಗೆ ತೋಟಗಾರಿಕೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವಗೆ, ಸಹಾಯಕ ನಿರ್ದೇಶಕ ಶಿವಪುತ್ರ ಶಂಭು, ಮನ್ನಳ್ಳಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಗೌತಮ ಶಿಂಧೆ ಅವರ ಮಾರ್ಗದರ್ಶನ ಕಾರಣ. ತೋಟಗಾರಿಕೆಗೆ ಸಂಬಂಧಿಸಿದಂತೆ ಮೊ.ಸಂಖ್ಯೆ: 9901040501ಗೆ ಸಂಪರ್ಕಿಸಬಹುದು.
•ನಾಗನಾಥರಾವ್‌ ನಿಡೋದೆ,
ಪ್ರಗತಿಪರ ರೈತ

ಜಿ. ಚಂದ್ರಕಾಂತ,
ನಿವೃತ್ತ ವಾರ್ತಾ ಇಲಾಖೆ ಉಪ ನಿರ್ದೇಶಕರು

ಟಾಪ್ ನ್ಯೂಸ್

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.