ಸಂಭ್ರಮದ ತಿಂಥಣಿ ಮೌನೇಶ್ವರ ಜಾತ್ರೆ
ಗಮನ ಸೆಳೆದ ಪುರವಂತರ ಸೇವೆ
Team Udayavani, May 20, 2019, 4:52 PM IST
ನಾರಾಯಣಪುರ: ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿಯ ಮೆರವಣಿಗೆಯಲ್ಲಿ ವೀರಾವೇಶದ ಪುರವಂತರ ಸೇವೆ ಪ್ರದರ್ಶನ ನಡೆಯಿತು.
ನಾರಾಯಣಪುರ: ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯೂ ಪುರವಂತರ ಸೇವೆಯೊಂದಿಗೆ, ಮಂಗಲ ವಾದ್ಯ ಮೇಳಗಳೊಟ್ಟಿಗೆ ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು.
ಪಲ್ಲಕ್ಕಿ ಉತ್ಸವ ಮುನ್ನಾ ದಿನವಾದ ಶುಕ್ರವಾರ ಗುಹಾದೇವಾಲಯದಲ್ಲಿರುವ ದೇವರ ಉತ್ಸವ ಮೂರ್ತಿಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಹೊರ ತೆಗೆದು ಸಕಲ ವಾದ್ಯ ಮೇಳಗಳೊಂದಿಗೆ ಕೃಷ್ಣಾ ನದಿ ತೀರಕ್ಕೆ ತೆರಳಿ ಗಂಗಾ ಪೂಜೆಯನ್ನು ನೆರವೇರಿಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಅಹೋರಾತ್ರಿ ಭಜನೆ ನಡೆಸಲಾಯಿತು.
ವಿಶೇಷ ಜೋಡು ಪಲ್ಲಕ್ಕಿ ಉತ್ಸವ: ಶನಿವಾರ ಬೆಳಗ್ಗೆ ಶ್ರೀ ಮೌನೇಶ್ವರರ ಹಾಗೂ ವೀರಭದ್ರದೇವರ ಉತ್ಸವ ಮೂರ್ತಿ ಹಾಗೂ ಪೂಜಾ ಸಾಮಗ್ರಿಗಳನ್ನು ಹೊತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ದೇವಸ್ಥಾನದಿಂದ ಚಾಲನೆ ದೊರೆಯಿತು.
ಮೆರವಣಿಗೆಯೂ ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತ ಮಾರ್ಗದಿಂದ ಬಂಡೆಗುಡ್ಡ ಕ್ಯಾಂಪ್, ಕೆಬಿಜೆಎನ್ನೆಲ್ ವಸತಿ ಗೃಹದ ಮಾರ್ಗವಾಗಿ ಆಗಮಿಸಿ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ತಲುಪಿತು. ರಾತ್ರಿಯೇ ದೇವರುಗಳ ಪೂಜಾ ಸಾಮಗ್ರಿಗಳನ್ನು ಗುಹಾದೇವಾಲಯದಲ್ಲಿ ಪುನಃ ಪ್ರವೇಶವಾಗುವ ಮೂಲಕ ಜಾತ್ರೆಯೂ ಮಂಗಲೋತ್ಸವಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ದೇವತೆ ದುರ್ಗಾ ದೇವಿಗೆ ಉಡಿ ತುಂಬುವ ಶಾಸ್ತ್ರ ನೆರವೇರಿಸಲಾಯಿತು.
ಗ್ರಾಮದ ಮಹಿಳೆಯರು ಇಷ್ಟ ದೇವರಾದ ತಿಂಥಣಿ ಮೌನೇಶ್ವರ ಹಾಗೂ ಶ್ರೀ ವೀರಭದ್ರ ದೇವರುಗಳ ದರ್ಶನ ಪಡೆದು ಕಾಯಿ ಕರ್ಪೂರ, ನೈವೇದ್ಯ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ದೈವ ಮಂಡಳಿಯಿಂದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಭಕ್ತಿ ಭಾವದಿ, ವೀರಾವೇಶದಿಂದ ಪುರವಂತರ ಸೇವೆಯ ಪ್ರದರ್ಶನ ನೋಡುಗರ ಮಂತ್ರ ಮುಗ್ದರನ್ನಾಗಿಸಿತು. ಮೆರವಣಿಗೆಯಲ್ಲಿ ಯುವಕರು ತಿಂಥಣಿ ಮೌನೇಶ್ವರ ಮಹಾರಾಜಕೀ, ಶ್ರೀ ವೀರಭದ್ರದೇವರ ಹೆಸರಲ್ಲಿ ಜಯಘೋಷಗಳನ್ನು ಕೂಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.