ಆರ್‌ಟಿಪಿಎಸ್‌ಗೆ ಅರ್ಧ ಟಿಎಂಸಿ ಅಡಿ ನೀರು
ಎಡದಂಡೆ ಮುಖ್ಯ ಕಾಲುವೆಗೆ 1 ಟಿಎಂಸಿ ನೀರು
Team Udayavani, Jul 13, 2019, 1:19 PM IST
ನಾರಾಯಣಪುರ: ಕುಡಿಯುವ ನೀರಿನ ಉದ್ದೇಶಕ್ಕಾಗಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ 1 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹರಿಬಿಡಲಾಯಿತು.
ನಾರಾಯಣಪುರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಅರ್ಧ ಟಿಎಂಸಿ ಅಡಿ ನೀರು ಹರಿಸುವ ಹಿನ್ನೆಲೆಯಲ್ಲಿ ಬಸವಸಾಗರ ಜಲಾಶಯದ 2 ಕ್ರಸ್ಟ್‌ಗೇಟ್ ತೆಗೆದು ನದಿ ಪಾತ್ರಕ್ಕೆ ನೀರು ಹರಿಬಿಡಲಾಗಿದೆ ಎಂದು ಕೆಬಿಜೆಎನ್ನೆಲ್ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.
ಆರ್‌ಟಿಪಿಎಸ್‌ನ ಬೇಡಿಕೆ ಮತ್ತು ಮೇಲಧಿಕಾರಿಗಳ ಸೂಚನೆಯಂತೆ ಶುಕ್ರವಾರ ಬೆಳಗ್ಗೆ ಜಲಾಶಯದ 2 ಮುಖ್ಯ ಕ್ರಸ್ಟ್‌ಗೇಟ್ ತೆಗೆದು 6 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ಅರ್ಧ ಟಿಎಂಸಿ ಅಡಿ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ನಿಗದಿಪಡಿಸಲಾದ ಪ್ರಮಾಣದಷ್ಟು ನೀರು ಶನಿವಾರ ಬೆಳಗ್ಗೆವರೆಗೆ ಸಂಪೂರ್ಣವಾಗಲಿದ್ದು, ನಂತರ ಗೇಟ್‌ಗಳನ್ನು ಬಂದ್ ಮಾಡಲಾಗುವುದು, ಈ ನೀರು ನದಿ ಮುಖಾಂತರ ಆರ್‌ಟಿಪಿಎಸ್ ಕೇಂದ್ರಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಶುಕ್ರವಾರ ಬೆಳಗ್ಗೆಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ 1 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ.
ಬೆಳಗಾವಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರು, ಯಾದಗಿರಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ 1 ಟಿಎಂಸಿ ಅಡಿ ನೀರನ್ನು ಎಡದಂಡೆ ಮುಖ್ಯ ಕಾಲುವೆ ಮೂಲಕ ಹರಿಬಿಡಲಾಗುತ್ತಿದ್ದು, ಕಾಲುವೆ ಮೂಲಕ ಬಿಡಲಾದ ನೀರನ್ನು ಇಂಡಿ, ಸಿಂದಗಿ ಮತ್ತು ಶಹಾಪುರ ನಗರಗಳ ಜನತೆ ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಿದ್ದಾರೆ. ನಿಗದಿಪಡಿಸಲಾದ ಪ್ರಮಾಣದಷ್ಟು ನೀರು ಸಂಪೂರ್ಣ ವಾದ ನಂತರದಲ್ಲಿ ಕಾಲುವೆ ಮೂಲಕ ನೀರು ಹರಿಸುವುದನ್ನು ಬಂದ್ ಮಾಡ ಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.