ಮಂಗನ ಹಾವಳಿಗೆ ಕಂಗೆಟ್ಟ ರೈತ

ಹೊಲ-ತೋಟಗಳಿಗೆ ಲಗ್ಗೆ •ಅಲ್ಪಸ್ವಲ್ಪ ಬೆಳೆಯೂ ಮಂಗಗಳ ಪಾಲು

Team Udayavani, Aug 1, 2019, 1:03 PM IST

1-Agust-28

ಸಿಕಂದರ ಎಂ.ಆರಿ
ನರೇಗಲ್ಲ:
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ರೈತರು ಕಂಗೆಟ್ಟಿದ್ದಾರೆ. ಬೆಳೆ ನಿಧಾನವಾಗಿ ಕಾಳು ಕಟ್ಟುತ್ತಿವೆ. ಇಂಥ ಸಂದರ್ಭದಲ್ಲಿ ಮಂಗಗಳು ಹೊಲ-ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಕೋಚಲಾಪೂರ, ಅಬ್ಬಿಗೇರಿ, ಜಕ್ಕಲಿ, ಮಾರನಬಸರಿ, ಹಾಲಕೆರೆ, ಬೂದಿಹಾಳ, ಯರೇಬೇಲೇರಿ, ಕುರುಡಗಿ, ಗುಜಮಾಗಡಿ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪೂರ, ತೋಟಗಂಟಿ, ದ್ಯಾಂಪೂರ ಗ್ರಾಮಗಳ ವ್ಯಾಪ್ತಿ ಪ್ರದೇಶಗಳ ಹೊಲ ಹಾಗೂ ತೋಟಗಳಲ್ಲಿ ಇವು ದಾಳಿ ಮಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ರೈತರದ್ದಾಗಿದೆ.

ಈ ಹಳ್ಳಿಗಳ ಸುತ್ತಮುತ್ತಲಿನ ಪ್ರದೇಶದಲ್ಲೇ ಬೀಡು ಬಿಟ್ಟಿರುವ ಮಂಗಗಳ ಹಿಂಡು ನಿತ್ಯವೂ ರೈತರು ಬೆಳೆದ ಬೆಳೆಗಳನ್ನು ಕಿತ್ತಿಕೊಳ್ಳುತ್ತಿವೆ. ಮಳೆಯಿಲ್ಲದೆ ಒಂದೆಡೆ ಬೆಳೆ ಬಾಡಿದ್ದರೆ, ಮತ್ತೂಂದೆಡೆ ಅಲ್ಪಸ್ವಲ್ಪ ಬೆಳೆಯೂ ಮಂಗಗಳ ಪಾಲಾಗುತ್ತಿವೆ ಎಂಬ ನೋವು ರೈತರಿಗೆ ಕಾಡುತ್ತಿದೆ.

ಮೊದಲೇ ಕೃಷಿ ನಿರ್ವಹಣೆ ವೆಚ್ಚ ಅಧಿಕವಾದ ಈ ದಿನಗಳಲ್ಲಿ ಈ ಹಾನಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಥ ಆರ್ಥಿಕ ಸಂಕಷ್ಟದ ನಡುವೆಯೇ ಈ ಮಂಗಗಳನ್ನು ನಿಯಂತ್ರಿಸಲು ರೈತ ಸಾವಿರಾರು ರೂಪಾಯಿ ವೆಚ್ಚ ಮಾಡಿ ಹೈರಾಣಾಗುತ್ತಿದ್ದಾನೆ. ಹಗಲಿರುಳೆನ್ನದೇ ಹೊಲ, ತೋಟ ಕಾಯುವ ಕೆಲಸ ಈತನದ್ದಾಗಿದೆ.

ಶೇಂಗಾ, ಹೆಸರು, ಬಿಟಿ, ಮೆಕ್ಕೆಜೋಳದ ಬೆಳೆಗಳು ಮಂಗಗಳ ಬಾಯಿಗೆ ಹೋಗುತ್ತಿವೆ. ಬೆಳೆ ಎರಡೆಲೆ ಇರುವಾಗಲೇ ದಾಳಿ ಮಾಡಿ ಕಡಿದು ತಿನ್ನುತ್ತಿವೆ. ಇನ್ನು ಮಾವು ಚಿಗುರೊಡೆಯುತ್ತಿರುವಾಗಲೇ ದಾಳಿ ಮಾಡುವ ಮಂಗಗಳು ಅವುಗಳನ್ನೂ ತಿನ್ನುತ್ತವೆ. ಅಷ್ಟೇ ಅಲ್ಲ ಇವು ಹಿಂಡು ಹಿಂಡಾಗಿ ಹೊಲಗಳಲ್ಲಿ ಓಡಾಡುತ್ತಿರುವುದರಿಂದ ಕಾಲ್ತುಳಿತಕ್ಕೆ ಬೆಳೆ ನಾಶವಾಗುತ್ತಿವೆ. ಮೊದಲೇ ಮಳೆ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ದಿಕ್ಕೇ ತೋಚದಂತಾಗಿದೆ.

ಮಳೆ ಕೊರತೆಯಿಂದ ಈ ಬಾರಿ ಉತ್ತಮ ಮುಂಗಾರು ಮಳೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ರೈತ ಸಮುದಾಯ ಬೀಜ, ಗೊಬ್ಬರಕ್ಕೆ ಸಾಲ ಸೂಲ ಮಾಡಿ ಕೃಷಿ ಮಾಡಿದೆ. ಆದರೆ ಕಳೆದ ಒಂದು ತಿಂಗಳಿಂದ ಮೋಡಕವಿದ ವಾತವರಣವಿದ್ದರೂ ಮಳೆ ಆಗಿಲ್ಲ. ಈಗ ಅಲ್ಪತೇವಾಂಶದಲ್ಲಿ ಬೆಳೆದ ಬೆಳೆಯೂ ಮಂಗಗಳ ಪಾಲಾಗುತ್ತಿದೆ.

ಮಂಗಗಳ ಹಾವಳಿ ತಡೆಗೆ ಈಗಾಗಲೇ ಹೊಲದಲ್ಲಿ ಬೆದರು ಗೊಂಬೆ ಕಟ್ಟಿದ್ದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಮಂಗಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಮುಂದಾಗಬೇಕು. ಇವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮ ಕೈಗೊಳ್ಳಬೇಕು.
ನಿಂಗನಗೌಡ ಲಕ್ಕನಗೌಡ್ರ,
 ಎಪಿಎಂಸಿ ಉಪಾಧ್ಯಕ್ಷ

ಹೆಸರು, ಶೇಂಗಾ ಬಿತ್ತನೆ ಮಾಡಲಾಗಿರುವ ಕೃಷಿ ಭೂಮಿಗಳ ಮೇಲೆ ಇನ್ನಿಲ್ಲದ ಪ್ರೀತಿ ಹೊಂದಿರುವ ಮಂಗಗಳು ನೋಡನೋಡುತ್ತಿದ್ದಂತೆಯೇ, ಬೆಳೆ ತಿಂದು ತೇಗುತ್ತಿವೆ. ಇವುಗಳನ್ನು ನಿಯಂತ್ರಿಸಲು ರೈತ ಸಮೂಹ ಪಟಾಕಿ ಸಿಡಿಸಿ, ಸಿಡಿಮದ್ದು ಹಾರಿಸಿ ಬೆದರಿಸುವ ಯತ್ನ ನಡೆಸುತ್ತಿದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ ಎನ್ನುತ್ತಾರೆ ರೈತರು.

ಟಾಪ್ ನ್ಯೂಸ್

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hrb

Hebri; ಬೈಕ್‌ಗೆ ಕಾರು ಢಿಕ್ಕಿ: ಯುವಕ ಸಾ*ವು

police

Mudbidri; ಎಂಟು ತಿಂಗಳ ಹಿಂದೆ ಬ್ಯಾಟರಿ ಕಳವು: ಇಬ್ಬರು ಆರೋಪಿಗಳ ಬಂಧನ

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

puttige

Udupi;ಗೀತಾರ್ಥ ಚಿಂತನೆ 147:ಪ್ರತ್ಯಕ್ಷ ಪ್ರಮಾಣ ಮಾತ್ರದಿಂದಲೇ ಜಗದ್ವ್ಯವಹಾರ ಅಸಾಧ್ಯ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hrb

Hebri; ಬೈಕ್‌ಗೆ ಕಾರು ಢಿಕ್ಕಿ: ಯುವಕ ಸಾ*ವು

police

Mudbidri; ಎಂಟು ತಿಂಗಳ ಹಿಂದೆ ಬ್ಯಾಟರಿ ಕಳವು: ಇಬ್ಬರು ಆರೋಪಿಗಳ ಬಂಧನ

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.