ಕೆರೆ ಒಡಲು ಸೇರಿದ ಕಸ
3.22 ಎಕರೆ ವಿಸ್ತೀರ್ಣದ ಕೆರೆ ಸದ್ಯ ಕಸ ವಿಲೇವಾರಿ ತಾಣ
Team Udayavani, Aug 12, 2019, 12:56 PM IST
ನರೇಗಲ್ಲ: ಕೋಚಲಾಪುರ ಅಗಸರ ಕೆರೆಯಲ್ಲಿ ಕಸ ಹಾಕಲಾಗಿದೆ.
ನರೇಗಲ್ಲ: ಒಂದು ಕಾಲಕ್ಕೆ ಪಟ್ಟಣ ಸೇರಿದಂತೆ ಮಜರೆ ಗ್ರಾಮಗಳ ಮಡಿವಾಳ ಜನಾಂಗದವರಿಗೆ ಬಟ್ಟೆ ತೊಳೆಯಲು ಆಸರೆಯಾಗಿದ್ದ ಕೋಚಲಾಪುರದ ಅಗಸರ ಕೆರೆಗೆ ಈಗ ಕಸ ಸೇರುತ್ತಿದೆ.
ಸುಮಾರು 3.22 ಎಕರೆ ವಿಸ್ತೀರ್ಣದ ಕೆರೆ ಸದ್ಯ ಕಸ ವಿಲೇವಾರಿಯ ತಾಣವಾಗಿದೆ. ಪ್ರತಿನಿತ್ಯ ರಾಶಿ ರಾಶಿ ಕಸ ಕೆರೆಯೊಡಲು ಸೇರುತ್ತಿದ್ದು, ಕೆರೆಯಂಗಳ ವಿಷದ ಗರ್ಭವಾಗಿ ಪರಿವರ್ತನೆಯಾಗುತ್ತಿದೆ.
ಕೆರೆ ಅಂಗಳ ಮತ್ತು ನೀರಿನ ಮೂಲಗಳ ಬಳಿ ಕಸ ವಿಲೇವಾರಿ ಮಾಡಬಾರದು ಎಂಬ ನಿಯಮವಿದ್ದರೂ ಕೋಚಲಾಪುರ ಕೆರೆಯಲ್ಲಿ ಕಸ ವಿಲೇವಾರಿ ಎಗ್ಗಿಲ್ಲದೆ ಸಾಗಿದೆ. ಗ್ರಾಮದ ಪ್ರತಿಯೊಂದು ಮನೆ ಹಾಗೂ ಚರಂಡಿ ತ್ಯಾಜ್ಯವನ್ನು ಕೆರೆಯಲ್ಲಿ ಸುರಿಯಲಾಗುತ್ತಿದೆ. ಖಾಲಿ ಬಾಟಲಿ, ಪ್ಲಾಸ್ಟಿಕ್ ಚೀಲ ಸೇರಿದಂತೆ ತ್ಯಾಜ್ಯವನ್ನು ತುಂಬಿಸಿ ಕೆರೆಗೆ ಎಸೆಯಲಾಗುತ್ತದೆ. ಮತ್ತೂಂದೆಡೆ ಹಳೆ ಕಟ್ಟಡಗಳ ಗಾರೆ, ಇಟ್ಟಿಗೆಯಂತಹ ನಿರುಪಯುಕ್ತ ವಸ್ತುಗಳನ್ನು ಕೆರೆ ದಂಡೆಯಲ್ಲಿ ಸುರಿಯಲಾಗಿದೆ. ಕೆರೆ ರಕ್ಷಿಸಬೇಕಾದ ಸಣ್ಣ ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಣ್ಣುಚ್ಚಿ ಕುಳಿತಿದ್ದಾರೆ.
ಕೆರೆಯಂಗಳದಲ್ಲಿ ಸುರಿಯಲಾದ ಕಸದ ರಾಶಿ ಬಳಿ ನಾಯಿ, ಹಂದಿ ಹಾಗೂ ಸೊಳ್ಳೆ ಕಾಟ ಹೆಚ್ಚಿದೆ. ಇದರಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಸುತ್ತಮುತ್ತಲಿನ ಬಡಾವಣೆಗಳ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಪಟ್ಟಣದ ದ್ಯಾಂಪುರ ರಸ್ತೆಯಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ಯುವುದನ್ನು ಬಿಟ್ಟು ಗ್ರಾಮದ ಅಗಸರ ಕೆರೆಯಲ್ಲಿ ತ್ಯಾಜ್ಯ ಹಾಕುತ್ತಿದ್ದಾರೆ. ಪಪಂ ಅಧಿಕಾರಿಗಳು ತ್ಯಾಜ್ಯವನ್ನು ಕೂಡಲೇ ಸ್ವಚ್ಛಗೊಳಿಸಿ ಕೆರೆ ರಕ್ಷಣೆ ಮಾಡುವುದಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.