ಜಾತಿ ರಹಿತ ಸಮಾಜಕ್ಕೆ ಬಸವಣ್ಣರಿಂದ ಬುನಾದಿ
ಅನುಭವ ಮಂಟಪದಲ್ಲಿ ಎಲ್ಲ ಜಾತಿ-ಸಮುದಾಯದವರಿಗೂ ಇತ್ತು ಸಮಾನ ಪ್ರಾಶಸ್ತ್ಯ: ವೀರೇಶ್‌ಕುಮಾರ್
Team Udayavani, May 20, 2019, 4:11 PM IST
ನಾಯಕನಹಟ್ಟಿ: ಬಸವ ಜಯಂತಿ ಅಂಗವಾಗಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಬಸವಣ್ಣನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ನಾಯಕನಹಟ್ಟಿ: ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಬಸವಣ್ಣನವರ ಅನುಭವ ಮಂಟಪ ಪ್ರೇರಣೆಯಾಗಿದೆ ಎಂದು ರಾಷ್ಟ್ರೀಯ ಬಸವ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ವೀರೇಶ್‌ಕುಮಾರ್ ಹೇಳಿದರು.
ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
700 ವರ್ಷಗಳ ಹಿಂದೆಯೇ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರಯತ್ನ ನಡೆಸಿದರು. ಮೂಢನಂಬಿಕೆ ಹಾಗೂ ಅಂಧ ಶ್ರದ್ಧೆಗಳ ವಿರುದ್ಧ ಪರಿವರ್ತನೆಯ ಹೋರಾಟ ನಡೆಸಿದ್ದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲ ಜಾತಿಗಳಿಗೆ ಸಮಾನ ಅವಕಾಶವಿತ್ತು ಎಂದರು.
ಎಲ್ಲ ವರ್ಗಗಳಿಗೆ ಮೀಸಲಾತಿ ನೀಡುವ ಸ್ವಾತಂತ್ರ್ಯಾ ನಂತರದ ಸಂವಿಧಾನವನ್ನು ಬಸವಣ್ಣನವರು ಪ್ರತಿಪಾದಿಸಿದ್ದರು. ಅವರು ಪ್ರತಿಪಾದಿಸಿದ ಅನುಭವ ಮಂಟಪದಲ್ಲಿ ಎಲ್ಲ ಜಾತಿಗಳಿಗೆ ಹಾಗೂ ಮಹಿಳಾ ಪ್ರತಿನಿಧಿಗಳಿಗೆ ಅವಕಾಶವಿತ್ತು. ಶ್ರಮ ವಿಭಜನೆ ಆಧಾರದ ಸಮಾಜ ಹಾಗೂ ಸೇವೆಯ ಮಹತ್ವವನ್ನು ಬಸವಣ್ಣನವರು ಸಾರಿದರು. ಮಾದಾರ ಚನ್ನಯ್ಯ, ಮೋಳಿಗೆ ಮಾರಯ್ಯ ಸೇರಿದಂತೆ ಸಮಾಜದಲ್ಲಿನ ಎಲ್ಲ ಜನರಿಗೆ ಸೇವೆ ಸಲ್ಲಿಸುವ ವೃತ್ತಿಪರ ಜನರಿಗೆ ವಿಶೇಷ ಆದ್ಯತೆ ನೀಡಿದರು. ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವ ಹಾಗೂ ಕಾಯಕದ ಮಹತ್ವವನ್ನು ವಿವರಿಸಿದ್ದರು. ದೇವರು, ಧರ್ಮದ ಹೆಸರಿನಲ್ಲಿ ಉಂಟಾಗುವ ಶೋಷಣೆಯನ್ನು ಖಂಡಿಸಿದರು. ಇಷ್ಟಲಿಂಗ ಪೂಜೆ ಮಾತ್ರ ಸರಿಯಾದ ಆಚರಣೆ ಎಂಬುದು ಬಸವಣ್ಣನವರ ನಿಲುವಾಗಿತ್ತು ಎಂದು ತಿಳಿಸಿದರು.
ಗಜ್ಜುಗಾನಹಳ್ಳಿ ಗ್ರಾಮದ ಕೆ. ನಾಗರಾಜ್ ಹಾಗೂ ಗೌರಮ್ಮ ಬಸವ ಧರ್ಮ ಧ್ವಜಾರೋಹಣ ನೆರವೇರಿಸಿದರು. ಗಂಜಿಗಟ್ಟಿ ಕೃಷ್ಣಮೂರ್ತಿಬಸವ ತತ್ವ ಹಾಗೂ ಲಾವಣಿ ಪದಗಳನ್ನು ಗಳನ್ನು ಹಾಡಿದರು. ಮುಖಂಡರುಗಳಾದ ಬಸವರಾಜಯ್ಯ, ಸತೀಶ್, ಬಸವರಾಜ್, ವಿಜಯ ಕುಮಾರ್, ಪ್ರಸನ್ನಕುಮಾರ್, ಎಲೆಯಾರ್, ಕೆ.ಎಸ್. ತಿಪ್ಪೇಸ್ವಾಮಿ, ರಾಜಣ್ಣ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.