ಕಾವೇರಿ ಸಮಸ್ಯೆ ನಿವಾರಣೆಗೆ ನದಿಜೋಡಣೆ:ಗಡ್ಕರಿ
Team Udayavani, Dec 11, 2019, 4:01 PM IST
ನೆಲಮಂಗಲ : ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿಯಂತ್ರಣದ ಜೊತೆ ಉತ್ತಮ ಸಂಚಾರಕ್ಕೆ ರಿಂಗ್‌ರಸ್ತೆ ಅನುಕೂಲವಾಗಿದೆ, ಶೇ.75%ರಷ್ಟು ಅನುದಾನವನ್ನು ಕೇಂದ್ರದಿಂದ ನೆರವು ಕೇಳಿದ್ದು, ವೆಚ್ಚ ಕಡಿಮೆ ಮಾಡಲು ತೆರಿಗೆ ವಿನಾಯಿತಿ ಸಹ ನೀಡಲಾಗುತ್ತದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಪಟ್ಟಣ ಸಮೀಪದ ಮಾದವಾರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿರುವ ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಭಾರತದ ಅತಿ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ರಸ್ತೆ ನಿರ್ಮಾಣ ಮಾಡುವುದರಿಂದ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ ಇದರ ನಿಟ್ಟಿನಲ್ಲಿ ಕೇಂದ್ರ ಸರಕಾರ 22 ಹಸಿರು ಹೈವೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, 2300 ಕಿ.ಮೀ ಹೊಸ ರಸ್ತೆ ಕೂಡ ನಿರ್ಮಾಣ ಮಾಡಲಾಗುತ್ತಿದೆ, ದೇಶದಲ್ಲಿ ಪ್ರತಿದಿನ 2 ಕಿ.ಮೀ ರಸ್ತೆ ನಿರ್ಮಾಣವಾಗುತಿತ್ತು, ಆದರೆ ಕಿ.ಮೀ ನಿರ್ಮಾಣ ಮಾಡಲಾಗುತ್ತಿದೆ, ಮಾರ್ಚ್ ವೇಳೆಗೆ ದಿನಕ್ಕೆ 40 ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.
ಹಣಕಾಸಿನ ತೊಂದರೆ ಇಲ್ಲ: ದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲ, ಆರ್.ಬಿ.ಐ ಗವರ್ನರ್ ಬ್ಯಾಂಕ್‌ಗಳಿಗೆ ಸೂಚಿಸಲಾಗಿದ್ದು ನಮಗೆ ಸಹಾಯ ದೊರೆಯಲಿದೆ, ರಸ್ತೆ ನಿರ್ಮಾಣ ಮಾಡಲು ಭೂಸ್ವಾದೀನದ ಹೊರೆ ಹೆಚ್ಚಾಗುತ್ತಿರುವುದು ಬಿಟ್ಟರೆ ಯಾವುದೇ ಸಮಸ್ಯೆಯಿಲ್ಲ ಎಂದರು.
ಬುದ್ದಿವಂತಿಕೆಯ ರಾಜಧಾನಿ: ದೇಶದಲ್ಲಿಯೇ ಬೆಂಗಳೂರಿನ ಜನರು ಬುದ್ಧಿವಂತರಾಗಿದ್ದು, ಐಟಿಬಿಟಿ ಸೆಂಟರ್‌ಗಳು ಬೆಂಗಳೂರಿಗೆ ಹೆಮ್ಮೆ, ದೇಶದ ಅನೇಕ ಕಡೆಗಳಲ್ಲಿ ಇಂಜಿನೀಯರ್‌ಗಳನ್ನು ಮಾತನಾಡಿಸಿ ನಿಮ್ಮ ಊರು ಯಾವುದು ಎಂದರೆ ಬೆಂಗಳೂರು ಎನ್ನುತ್ತಾರೆ ಎಂದರು.
ದೇಶದಲ್ಲಿ ಬೆಂಗಳೂರು ಒಂದು ಹೆಮ್ಮೆಯ ರಾಜ್ಯ ರಾಜಧಾನಿಯಾಗುವ ಜೊತೆ ಬುದ್ದಿವಂತಿಕೆಯ ರಾಜಧಾನಿಯಾಗಿದೆ ಎಂದರು. ಕಾವೇರಿ ಸಮಸ್ಯೆಗೆ ಮುಕ್ತಿ: ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಕಾವೇರಿ ನದಿಯ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದ್ದು, ದಕ್ಷಿಣ ಭಾರತದ ಕೃಷ್ಣ, ಗೋದಾವರಿ, ಪೆನ್ನಾ ಮೂಲಕ ಕಾವೇರಿ ನದಿಯವರೆಗೂ ನದಿಜೋಡಣೆಯ ಯೋಜನೆ ಸಿದ್ಧವಾಗಿದ್ದು ಕೆಲಸ ಆರಂಭವಾಗಲಿದೆ. ಅದೇ ರೀತಿ ಅನೇಕ ನದಿಗಳ ಜೋಡಣೆ ಮೂಲಕ ರಾಜ್ಯಗಳ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಎಲ್‌ಎನ್‌ಜಿ ಬಳಸಿ : ಕಟ್ಟಡ ನಿರ್ಮಾಣದ ಯಂತ್ರೋಪಕರಣಗಳು ಹಾಗೂ ವಾಹಕ ಉತ್ಪಾದಕ ಸಂಸ್ಥೆಗಳು ಕಡ್ಡಾಯವಾಗಿ ಎಲ್‌ಎನ್‌ಜಿ ಬಳಸಿದರೆ ವಾಯುಮಾಲಿನ್ಯ ನಿಯಂತ್ರಣ ಮಾಡಬಹುದು. ಇಂಧನದ ಬೆಲೆ ಕಡಿಮೆ ಇದೆ ಅದೇ ರೀತಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ , ಏಷ್ಯಾದ ಅತಿ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ಪ್ರದರ್ಶನ ರಾಜ್ಯದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ, ಅದೇ ರೀತಿ ರಸ್ತೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ಯಂತ್ರಗಳ ತಯಾರಿಕೆಗೆ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆ, ರಾಜ್ಯ ಸರ್ಕಾರ ಎಲ್ಲಾ ಸಹಕಾರ ಮಾಡಲಿದ್ದು, 5 ದಿನದ ಪ್ರದರ್ಶನ ಯಶಸ್ವಿಯಾಗಲಿ ಎಂದು ಆಶಿಸಿದರು.
ಪ್ರಶಸ್ತಿ ಪ್ರಧಾನ: ದೇಶದಲ್ಲಿ ಹೊಸ ತಂತ್ರಜ್ಞಾನದ ಮೂಲಕ ಅಭಿವೃದ್ಧಿಗೆ ಸಹಕಾರಿಯಾದ ಕಂಪನಿಗಳು ಹಾಗೂ ಕಟ್ಟಡ ನಿರ್ಮಾಣದ ಯಂತ್ರೋಪಕರಣಗಳ ತಯಾರಿಯಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಿಎಂ ಯಡಿಯೂರಪ್ಪ ಪ್ರಶಸ್ತಿ ಪ್ರಧಾನ ಮಾಡಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜಗದೀಶ್ ಶೆಟ್ಟರ್ ಹಾಗೂ ಅನೇಕ ಪ್ರತಿಷ್ಠಿತ ಕಂಪನಿಯ ಮಾಲೀಕರು, ಸಿಇಓಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.