ಕೃಷ್ಣಾ ತೀರದ ಗ್ರಾಮಗಳಲ್ಲಿ ಅಪಾರ ಬೆಳೆ ಹಾನಿ

Team Udayavani, Aug 14, 2019, 1:22 PM IST

14-AGUST-25

ನಿಡಗುಂದಿ: ತಾಲೂಕಿನ ವಡವಡಗಿ, ಬಳಬಟ್ಟಿ ಗ್ರಾಮದಲ್ಲಿ ಜಲಾವೃತವಾದ ಸೂರ್ಯಕಾಂತಿ, ಕಬ್ಬಿನ ಬೆಳೆಗಳು.

ನಿಡಗುಂದಿ: ಆಲಮಟ್ಟಿ ಜಲಾಶಯ ಮುಂಭಾಗದ ಕೃಷ್ಣೆ ನದಿ ವ್ಯಾಪ್ತಿಯ ಹಲವಾರು ಗ್ರಾಮಗಳ, ಜಮೀನು, ಜನವಸತಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದ ನಷ್ಟ ಸಂಭವಿಸಿದೆ.

ನದಿ ತೀರದ ಗ್ರಾಮಗಳಾದ ನಿಡಗುಂದಿ ತಾಲೂಕಿನ ಅರಳಲದಿನ್ನಿ, ಯಲಗೂರ, ಕಾಶಿನಕುಂಟಿ, ಯಲ್ಲಮ್ಮನ ಬೂದಿಹಾಳ, ಹೊಳೆಮಸೂತಿ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ಶೆಂಗಾ, ಮಕ್ಕೆಜೋಳ, ಸಜ್ಜಿ, ಸೂರ್ಯಕಾಂತಿ ಬೆಳೆ ನಾಶವಾಗುತ್ತಿವೆ.

ಹೊಳೆಮಸೂತಿ ಗ್ರಾಮಕ್ಕೆ ಜಮೀನಿನ ಜೊತೆಗೆ ಗ್ರಾಮದ ದಲಿತ ಕಾಲೋನಿಯ ಅಂದಾಜು 64 ಮನೆಗಲ್ಲಿ ನೀರು ಆಶ್ರಯ ತಾಣವಾಗಿಸಿದೆ. ಗ್ರಾಮದಲ್ಲಿ ಜಿಲ್ಲಾಡಳಿತ ಪರಿಹಾರ ಕೇಂದ್ರವನ್ನು ಸ್ಥಾಪಿಸಿ ಜನರನ್ನು ಆರೈಕೆ ಮಾಡುತ್ತಿದ್ದಾರೆ. ಇವೆಲ್ಲ ನಾರಾಯಣಪುರ ಜಲಾಶಯದ ಹಿನ್ನೀರ ವ್ಯಾಪ್ತಿಗೆ ಬರುವ ಗ್ರಾಮಗಳಾಗಿದ್ದು ನಾರಾಯಣಪುರ ಜಲಾಶಯ ಹೊರ ಹರಿವು ಹೆಚ್ಚಳ ಮಾಡಿದಂತೆ ಇಳಿಮುಖವಾಗುತ್ತವೆ.

ಹೊರ ಹರಿವಿನ ಪ್ರಮಾಣ ಕಡಿಮೆ ಆಗದಿದ್ದಲ್ಲಿ ಜಮೀನಿನ ಜತೆಗೆ ಮತ್ತಷ್ಟು ಮನೆಗಳಿಗೆ ನೀರು ಆವರಿಸುವ ಸಾಧ್ಯತೆ ಇದೆ. ಕಳೆದೆರಡು ದಿನಗಳಿಂದ ಆಲಮಟ್ಟಿ ಜಲಾಶದಿಂದ ಯಥಾಪ್ರಕಾರ 5.70 ಲಕ್ಷ ಕ್ಯೂ. ನೀರು ಹೊರ ಹರಿವಿದ್ದರೂ ಇತ್ತ ಮಲಪ್ರಭಾ ನದಿ ಹೊರ ಹರಿವು ಹೆಚ್ಚಳವಾದ ಪರಿಣಾಮ ನಾರಾಯಣಪುರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ನಾರಾಯಣಪುರ ಜಲಾಶಯದಿಂದ ನಿತ್ಯ 5.70 ಕ್ಯೂ. ನೀರು ಹೊರ ಹರಿಸಿದರೂ ಹಿನ್ನೀರಿನ ಪ್ರಮಾಣ ಇಳಿಕೆಯಾಗಿಲ್ಲ. ಆದ್ದರಿಂದ ಸೋಮವಾರ ಸಂಜೆ ಹೊಳೆಮಸೂತಿ ಗ್ರಾಮದ 5 ಮನೆಗಳು ಜಲಾವೃತವಾಗಿವೆ. ಶಾಂತವ್ವ ಚಲವಾದಿ ಎಂಬುವರ ಮನೆ ಕುಸಿದಿದೆ. ವಡವಡಗಿ ಗ್ರಾಮದ 30 ಮನೆಗಳ ಸುತ್ತ ನೀರು ಬಂದಿದ್ದು ಮುಂಜಾಗೃತಾ ಕ್ರಮವಾಗಿ ಸೋಮವಾರ ರಾತ್ರಿ ಗ್ರಾಮದ 30 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

ನೀರು ಪಾಲಾದ ಜಮೀನು: ನಿಡಗುಂದಿ ತಾಲೂಕಿನ ಬಳಬಟ್ಟಿ, ವಡವಡಗಿ ಗ್ರಾಮದ ಬಹುತೇಕ ಜಮೀನು ಕಳೆದೆರಡು ದಿನಗಳ ಹಿಂದೆ ನೀರಿಗೆ ಆಹುತಿಯಾಗಿವೆ. ಒಟ್ಟಾರೆ ನಿಡಗುಂದಿ ತಾಲೂಕಿನ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿಸಿದೆ. ವಡವಡಗಿ ಗ್ರಾಮಗಳ 30 ಕುಟುಂಬಗಳಿಗೆ ಮನೆಗಳ ಸುತ್ತ ನೀರು ಆವರಿಸಿದ್ದು ಅಧಿಕಾರಿಗಳು ರಾತ್ರಿ ಶಾಲೆಗಳಲ್ಲಿ ವಸತಿ ನೀಡಿ ಬೆಳಗ್ಗೆ ವಾಪಸ್‌ ಮನೆಗೆ ಕಳುಹಿಸುವ ಕಾರ್ಯ ನಡೆಸಿದ್ದಾರೆ.

ಗ್ರಾಮಕ್ಕೆ ಬರುವ ಅಧಿಕಾರಿಗಳು ನಿಮಗೇನು ತೊಂದರೆಯಾಗುವುದಿಲ್ಲ ನಿಮ್ಮ ಮನೆಗಳಲ್ಲೆ ಇರಲು ಸೂಚಿಸಿದ್ದಾರೆ. ಮನೆ ಸುತ್ತಲು ನೀರು ಆವರಿಸಿದ ಪರಿಣಾಮ ಹಾವು, ಮೊಸಳೆಗಳ ಜತೆಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಮನೆ ಸುತ್ತ ನೀರು ಕಂಡ ಅಧಿಕಾರಿಗಳು ಮನೆಯಲ್ಲೆ ವಾಸಿಸಿ ಎನ್ನುತ್ತಾರೆ ಎಂದು ಕರಿಯಮ್ಮ ಮಾದರ, ಬಸಮ್ಮ ಮಾದರ, ಇತರೆ ಜಾಲಾವೃತ ಭಯದಲ್ಲಿರುವ ಗ್ರಾಮಸ್ಥರು ತಿಳಿಸುತ್ತಾರೆ.

ವಡವಡಗಿ ಗ್ರಾಮಕ್ಕೆ ನದಿ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಎರಡು ಹಳ್ಳದ ನೀರು ಊರನ್ನೆ ಕೊಳ್ಳೆ ಹೊಡೆಯಲಿದೆ. ಜತೆಗೆ ಹಿಂಗಾರು ಮಳೆ ಅಧಿಕವಾದರೂ ಹಳ್ಳದ ನೀರು ಗ್ರಾಮಕ್ಕೆ ಹರಿಯುತ್ತದೆ. ಇದರಿಂದ ಗ್ರಾಮವನ್ನು ಸ್ಥಳಾಂತರ ಮಾಡಬೇಕೆಂದು ಈ ಗ್ರಾಮವನ್ನು ಬಾಧಿತ ಗ್ರಾಮವೆಂದು ಘೋಷಿಸಬೇಕು ಎಂದು ಮೃತ್ಯುಂಜಯ ಹಿರೇಮಠ, ಗ್ರಾಪಂ ಸದಸ್ಯ ಮಲ್ಲಣಗೌಡ ತಂಗಡಗಿ ಸೇರಿ ಹಲವರು ಆಗ್ರಹಿಸುತ್ತಾರೆ. ಇದಕ್ಕಾಗಿ ಹಲವಾರು ಭಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಹೊಳೆ ಮಸೂತಿ ಗ್ರಾಮದಲ್ಲಿ ಈಗಾಗಲೇ ಕೆಲವರಿಗೆ ಸಾಂಕ್ರಾಮಿಕ ರೋಗ ಆವರಿಸಿದೆ. ರಾತ್ರಿಯಾಗುತ್ತಿದ್ದಂತೆ ವಿಪರೀತ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಗ್ರಾಮದಲ್ಲಿ ವೈದ್ಯಕೀಯ ಕ್ಯಾಂಪ್‌ ಇದ್ದು ಗ್ರಾಮಸ್ಥರ ಆರೋಗ್ಯದತ್ತ ನಿರಂತರ ಗಮನ ಹರಿಸುತ್ತಿದ್ದಾರೆ. ರೋಗಿಗಳನ್ನು ಚಿಕಿತ್ಸೆ ಒಳಪಡಿಸಿ ಹೆಚ್ಚಿನ ಚಿಕಿತ್ಸೆ ಅವಶ್ಯ ಕಂಡು ಬಂದರೆ ಸಮೀಪದ ನಿಡಗುಂದಿ ಅಥವಾ ಕಾಳಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳಿಸಲಾಗುತ್ತದೆ ಎಂದು ಆರೋಗ್ಯ ಸಿಬ್ಬಂದಿ ತಿಳಿಸುತ್ತಾರೆ.

ಕಾಶಿನಕುಂಟಿ ಗ್ರಾಮದಲ್ಲಿ ಊರ ಆಕ್ರಮಿಸಲು 50 ಅಡಿ ಅಂತವಿದ್ದು ಹಾವು, ಮೊಸಳೆಗಳ ಭಯ ಜನರನ್ನು ಕಾಡುತ್ತಿದೆ. ಸರಕಾರ ಗ್ರಾಮದಲ್ಲಿ ಮುನ್ನೆಚ್ಚರಿಗೆ ಕ್ರಮ ವಹಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.

ಮಂಗಳವಾರ ಬೆಂಗಳೂರು ಅಧಿಕಾರಿಗಳ ತಂಡ ಬಾಧಿತ ಗ್ರಾಮಗಳನ್ನು ಡ್ರೋಣ್‌ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಕಾರ್ಯ ಮಾಡಿದ್ದಾರೆ ಎಂದು ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ಜುಳಗುಡ್ಡ ತಿಳಿಸಿದರು.

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.