ರೈತರ ಸಂಕಷ್ಟಕ್ಕೆ ಸ್ಪಂದಿಸಲು ಆಗ್ರಹ
ಕೇಂದ್ರ-ರಾಜ್ಯ ಸರ್ಕಾರಗಳು ವಿರುದ್ಧ ರೈತಪರ ಸಂಘಟನೆಗಳ ಬೃಹತ್ ಪ್ರತಿಭಟನೆ
Team Udayavani, Nov 28, 2019, 3:42 PM IST
ನಿಡಗುಂದಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿ 50ರಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸ್‌ನಿಲ್ದಾಣ, ಕಾಲೇಜು ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಭೆಯಾಗಿ ಮಾರ್ಪಟ್ಟಿತು.
ನಿಡಗುಂದಿ ತಾಲೂಕು ರೈತ ಸಂಘದ ಅಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಸಮಸ್ಯೆಗಳನ್ನು ಪರಿಹಾರ ಮಾಡದೇ ಕೇವಲ ಮೊಸಳೆ ಕಣ್ಣೀರು ಹರಿಸುತ್ತಿವೆ. ಕಬ್ಬು ಸಾಗಿಸುತ್ತಿರುವ ರೈತರಿಗೆ ಕಾರ್ಖಾನೆಗಳು ದರ ನಿಗದಿ ಮಾಡದೇ ಜಮೀನುಗಳಲ್ಲಿ ಕಟಾವು ಮಾಡುತ್ತಿವೆ. ಪ್ರತಿ ಬಾರಿ ಕಮ್ಮಿ ದರ ನೀಡಿ ಕೈ ತೊಳೆದುಕೊಳ್ಳುತ್ತಿವೆ.
ಬೆಳೆ ಪರಿಹಾರವನ್ನು ಶೀಘ್ರ ನೀಡುವ ಕಾರ್ಯ ನಡೆಸಲಾಗುತ್ತಿಲ್ಲ ಎಂದರು. ಸಕಾಲಕ್ಕೆ ಹಣ ಬರದ ಪರಿಣಾಮ ರೈತರು ಸಮಸ್ಯೆಗೆ ಜಾರುತ್ತಿದ್ದಾರೆ. ರೈತರನ್ನು ಉದ್ದಾರ ಮಾಡುತ್ತೇವೆ ಎಂದು ರೈತರ ಹೆಸರಿನಲ್ಲಿ ರಾಜಕಾರಣ ಮಾಡುವ ಜನಪ್ರತಿನಿ ಧಿಗಳು ಅಧಿಕಾರ ಬಂದ ನಂತರ ಮರೆತು ಬಿಡುತ್ತಾರೆ. ಪ್ರವಾಹದಿಂದ ಉತ್ತರ ಕರ್ನಾಟಕದ ಜನತೆ ತತ್ತರಿಸಿದ್ದಾರೆ. ಅವರಿಗೆ ಪರಿಹಾರ ಹಣ ನೀಡಲಾಗಿಲ್ಲ. ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಪುಡಿಗಾಸು ಕೊಟ್ಟು ಕೈ ತೊಳೆದುಕೊಳ್ಳಲಾಗಿದೆ ಎಂದರು.
ರೈತ ಬೆಳೆದ ಮಾಲು ಮಾರುಕಟ್ಟೆಗೆ ಬಂದ ನಂತರ ದರ ನಿಗಧಿಯಾಗುತ್ತದೆ. ಮಾರುಕಟ್ಟೆಗೆ ಬಂದು ದರ ನಿಗಮಾಡಲು ತಿಂಗಳಾನುಗಟ್ಟಲೆ ಕಾಯಬೇಕು. ಇದರಿಂದ ಆರ್ಥಿಕ ಸಮಸ್ಯೆಯಿಂದ ಬಳಲುವ ರೈತ ಕೈಗೆ ಬಂದಂತೆ ಮಾರಾಟ ಮಾಡಿ ಮತ್ತಷ್ಟು ಸಮಸ್ಯೆಗೊಳಗಾಗುತ್ತಿದ್ದಾನೆ. ಕೂಡಲೇ ಸರಕಾರ ರೈತರ ಬೇಡಿಕೆಗಳನ್ನು ಪರಿಹಾರ ಮಾಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಮೀರ ನಂದವಾಡಗಿ, ಜಿಲ್ಲಾ ಸಂಚಾಲಕ ನಿಂಗರಾಜ ಆಲೂರ ಮಾತನಾಡಿ, ರೈತರ ಸಮಸ್ಯೆ ಇಂದು ನಿನ್ನೆಯದಲ್ಲ, ಕಳೆದ ಹಲವಾರು ವರ್ಷಗಳಿಂದಲೂ ಸಮಸ್ಯೆಗಳ ಮಧ್ಯ ರೈತ ಬದುಕು ನಡೆಸುತ್ತಿದ್ದಾನೆ. ಸಮಸ್ಯೆಗಳು ತೀವ್ರವಾದಾಗ ಸಾವಿಗೆ ಶರಣಾಗುತ್ತಿದ್ದಾನೆ. ಉತ್ತರ ಕರ್ನಾಟಕ ಪ್ರವಾಹಕ್ಕೆ ಲಕ್ಷಾಂತರ ರೈತರು ಬೆಳೆನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಪರಿಹಾರ ಮಾತ್ರ ಇನ್ನೂ ನೀಡಲಾಗಿಲ್ಲ. ಬೆಳೆದು ನಿಂತ ಫಸಲು ನೀರಲ್ಲಿ ಕೊಚ್ಚಿ ಹೋಗಿದ್ದು ರೈತ ಕಣ್ಣಿರು ಹರಿಸುವಂತಾಗಿದೆ. ಸಾಲಮನ್ನಾ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಕಬ್ಬು ಬೆಳೆದ ರೈತರಿಗೆ ಪ್ರತಿ ಭಾರಿ ದರ ನಿಗಮಾಡಲಾಗುತ್ತಿಲ್ಲ ಈ ಬಾರಿ ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗ ದಿ ಮಾಡಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಕಾರ್ಯ ಮಾಡಬೇಕು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಲು ಸರಕಾರ ಮುಂದಾಗದಿದ್ದಲ್ಲಿ ರೈತರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ರೈತ ಸಂಘದ ಮುಖಂಡರಾದ ಅಮಾತೆ ಗೌಡರ, ರಾಜು ಬಾಗೇವಾಡಿ, ಶಿವಪ್ಪ ಇಂಗಳೇಶ್ವರ ಸೇರಿದಂತೆ ಮುಂತಾದವರು ಮಾತನಾಡಿದರು.ರೈತರಾದ ಮಲ್ಲಯ್ಯ ನಾಗೂರ, ಶ್ರೀಶೈಲ ಮೇಟಿ, ಬಸವರಾಜ ಕಮತಗಿ, ಸುಭಾಷ್ ಚೋಪಡೆ, ಸಾಬನ್ನಾ ಮಾದರ, ಈರಣಗೌಡ ಪಾಟೀಲ, ಸೋಮಪ್ಪ ಲಮಾಣಿ, ಎನ್.ಬಿ. ಪಾಟೀಲ, ಎಸ್. ಆರ್. ಬಂಡಿಬಡ್ಡರ, ರಾಜು ಬಂಡಿವಡ್ಡರ, ನೀಲಪ್ಪ ಮುಳವಾಡ, ಪರಶುರಾಮ್ ದಂಡಿನ, ಸಂಗಪ್ಪ ಚಿಮ್ಮಲಗಿ, ಶಂಕ್ರಪ್ಪ ಪೂಜಾರಿ, ಜಮುಲು ಲಮಾಣಿ, ಶರಣಪ್ಪ ಹಟ್ಟಿ, ಸರಸ್ವತಿ ವಸ್ತ್ರದ, ಗೌರಮ್ಮ ಕಂಬಾರ, ಡವಲಬಿ ನದಾಫ್, ಶರಣಮ್ಮ ನಂದಿಹಾಳ, ಇದ್ದು ವಾಲೀಕಾರ, ಸಂಗಪ್ಪ ದಂಡಿನ, ಶ್ರೀಕಾಂತ ಲಮಾಣಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.