ನಾರ್ಮಲ್ ಹೆರಿಗೆ: 4ಕೆಜಿ ಮಗು ಜನನ
ಹೊಸನಗರ ಸರ್ಕಾರಿ ಆಸ್ಪತ್ರೆ ವೈದ್ಯರ ಸಾಧನೆ
Team Udayavani, May 19, 2019, 12:04 PM IST
ಹೊಸನಗರ: ಆರೋಗ್ಯವಂತ ತಾಯಿ-ಮಗು.
ಹೊಸನಗರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ| ಅಮೃತಾಂಶು ಅವರು ತಾಲೂಕಿನ ಬಿಲ್ಲೋಡಿ ಸಂಹಿತಾ ಎಂಬಾಕೆಗೆ ಸಾಮಾನ್ಯ ಸ್ಥಿತಿಯಲ್ಲಿ ಚೊಚ್ಚಲ ಹೆರಿಗೆ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ..
ಬ್ರಹ್ಮಾವರದ ಶ್ರೀಕಾಂತ್ ಬಿಲ್ಲೋಡಿಯ ಸಂಹಿತಾ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು. ಸಂಹಿತಾ ಗರ್ಭಿಣಿಯಾದ ಹಿನ್ನಲೆಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತೆಗೆ ದಾಖಲಿಸಲಾಗಿತ್ತು.
ಸಂಹಿತಾ ಅವರ ಸ್ಥಿತಿ ಗಂಭೀರವಿದ್ದರೂ ಧೃತಿಗೆಡದೆ ಡಾ| ಅಮೃತಾಂಶು ಸಿಬ್ಬಂದಿಗಳಾದ ಅನುಸೂಯ, ಪ್ರೇಮ, ನಾಜದ್ ನೆರವಿನಿಂದ ಸಾಮಾನ್ಯ ಸ್ಥಿತಿಯ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಹಿತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು 4 ಕೆಜಿ 100 ಗ್ರಾಂ. ತೂಕವಿದೆ. ತಾಯಿ-ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ಮುಂದುವರಿದಿದೆ. ಸಾಮಾನ್ಯವಾಗಿ ಚೊಚ್ಚಲ ಹೆರಿಗೆಯಲ್ಲಿ ಹುಟ್ಟುವ ಮಗು 2ರಿಂದ 3.5 ಕೆಜಿ ತೂಕ ಇರುತ್ತದೆ. ಆದರೆ, 4.1 ಕೆಜಿ ತೂಕದ ಮಗುವಿನ ಹೆರಿಗೆಗೆ ಮುಂದಾದ ಡಾ| ಅಮೃತಾಂಶು ಅವರ ಕಾರ್ಯಕ್ಷಮತೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ, ಹೊಸನಗರಕ್ಕೆ ಅಗತ್ಯ ಇದ್ದ ಮಹಿಳಾ ವೈದ್ಯರ(ಹೆರಿಗೆ) ಕೊರತೆಯನ್ನು ನೀಗಿಸುವಲ್ಲಿ ಸಹ ಅವರು ಯಶಸ್ವಿ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
Congress government ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ
Katapady: ಕಾರ್ಮಿಕ ಕುಸಿದು ಬಿದ್ದು ಸಾವು
Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.