ಮೋದಿ ಗೆದ್ದರೆ ದೇಶದ ಗೌರವ ಹೆಚ್ಚಳ
ಕಾಂಗ್ರೆಸ್ ಇತರ ಪಕ್ಷಗಳು ಗೆದ್ದರೆ ಭಯೋತ್ಪಾದನೆ- ಭ್ರಷ್ಟಾಚಾರಕ್ಕೆ ಪುಷ್ಟಿ: ಅಶೋಕ ಹೋಕ್ರಣೆ
Team Udayavani, Apr 8, 2019, 12:41 PM IST
ಔರಾದ: ಸಂತಪೂರ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿದರು.
ಔರಾದ: ಮೋದಿ ಗೆಲುವು ಸಾಧಿಸಿದರೆ ಮಾತ್ರ ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ
ಗೆದ್ದರೆ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಪುಷ್ಟಿ ನೀಡಿದಂತಾಗುತ್ತದೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ತಾಲೂಕು ಉಸ್ತುವಾರಿ ಅಶೋಕ ಹೋಕ್ರಣೆ ಹೇಳಿದರು.
ಸಂತಪೂರ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಹೋಬಳಿ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಲೋಕಸಭೆ
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ದುಡಿಯಲು ಮುಂದಾಗಬೇಕು ಎಂದರು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಣ್ಣ, ಅತಿ ಸಣ್ಣ ರೈತರಿಗೆ ಪ್ರತಿವರ್ಷ
ಆರು ಸಾವಿರ ರೂ. ಸಹಾಯ ಧನ ನೀಡುವ ಮೂಲಕ ಆರ್ಥಿಕವಾಗಿ ಬೆನ್ನೆಲುಬಾಗಿ ನಿಂತಿದೆ. ಇದರಿಂದ ನಮ್ಮ ರೈತರು ಮುಂಗಾರು ಹಾಗೂ ಹಿಂಗಾರು ಬಿತ್ತನೆ ಸಮಯದಲ್ಲಿ ಬಡ್ಡಿ ಹಣ
ತಂದು ಸಾಲದ ಸುಳಿಯಲ್ಲಿ ಸಿಲುಕುವುದು ಶಾಶ್ವತವಾಗಿ ನಿಲ್ಲುತ್ತದೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಘೋಷಣೆಯಾದ ರೈತರ ಸಾಲಮನ್ನಾ ಯೋಜನೆ ಸಾಮಾಜಿಕ ಜಾಲತಾಣಕ್ಕೆ ಹಾಗೂ ಸರ್ಕಾರಿ ಕಚೇರಿಯ ಕಡತಗಳಿಗೆ
ಸೀಮಿತವಾಗಿ ಉಳಿದುಕೊಂಡಿದೆ ಎಂದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ, ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿನ ಬಿಜೆಪಿ ಕಾರ್ಯಕರ್ತರು ನಮ್ಮ ಜೀವಾಳವಾಗಿದ್ದಾರೆ. ಎಲ್ಲರೂ ಒಂದಾಗಿ ಸಂಸದರ ಗೆಲುವಿಗೆ
ನಿಸ್ವಾರ್ಥವಾಗಿ ದುಡಿದು ದೇಶದ ಅಖಂಡತೆ ಹಾಗೂ ಭದ್ರತೆಗೆ ಬುನಾದಿ ಹಾಕಲು ಮುಂದಾಗಬೇಕು ಎಂದರು.
ಕಾಂಗ್ರೆಸ್ ಪಕ್ಷ ಕುಟುಂಬದ ಸದಸ್ಯರಿಂದ ಕೂಡಿದ ಪಕ್ಷವಾಗಿದೆ. ಬಿಜೆಪಿ ದೇಶದ ಅಖಂಡತೆ, ಸೈನಿಕರ ರಕ್ಷಣೆಗೆ ನಿಂತ ಹೆಮ್ಮೆಯ ಪಕ್ಷವಾಗಿದೆ. ಹಿಗಾಗಿಯೇ ಲೋಕಸಭೆ ಚುನಾವಣೆಯಲ್ಲಿ ಬೀದರ
ಜಿಲ್ಲೆಯಲ್ಲಿ ಔರಾದ ತಾಲೂಕಿನಿಂದ ಅತಿ ಹೆಚ್ಚು ಮತಗಳನ್ನು ಭಗವಂತ ಖೂಬಾಅವರಿಗೆ ನೀಡಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಔರಾದ ತಾಲೂಕಿನ ನಾಲ್ಕು ಲಕ್ಷ ಜನರ ಸೇವಕನಾಗಿ ನಿರಂತರವಾಗಿ ನಾನೂ ದುಡಿಯುತ್ತಿದ್ದೇನೆ. ತಾಲೂಕಿನ ಪ್ರತಿಯೊಂದು ಗ್ರಾಮದ ಸಮಸ್ಯೆಗಳನ್ನು ಆಲಿಸಲು ತಾಲೂಕು ಮಟ್ಟದ ಅ ಧಿಕಾರಿಗಳೊಂದಿಗೆ ತೆರಳಿ ಸಮಸ್ಯೆಯನ್ನು ಬೇರು ಸಮೇತ ಅಳಿಸಿ ಹಾಕಲು ಶ್ರಮಿಸಿದ್ದೇನೆ. ನನ್ನ ಅವಧಿಯಲ್ಲಿ
ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ಹಾಗೂ ಮೋದಿ ಅವವರು ದೇಶದ ಭದ್ರತೆಯ ವಿಷಯದಲ್ಲಿ ತೆಗೆದುಕೊಂಡ ತೀರ್ಮಾನಗಳೇ ಖೂಬಾ ಅವರಿಗೆ ಶ್ರೀರಕ್ಷೆ ಆಗಲಿವೆ ಎಂದರು.
ಸಂಸದ ಭಗವಂತ ಖೂಬಾ ಮಾತನಾಡಿ, ಬೀದರ ಜಿಲ್ಲೆ ಸೇರಿದಂತೆ ದೇಶದ ರಕ್ಷಣೆ ಮಾಡುವುದೇ ನಮ್ಮ ಹಾಗೂ ಪಕ್ಷದ ಕರ್ತವ್ಯವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ನಮ್ಮ ತಾಲೂಕಿನ ಏಕತೆ ಹಾಗೂ ಒಗ್ಗಟ್ಟು ಪ್ರದರ್ಶನ
ಮಾಡಲು ನಾವೆಲ್ಲರೂ ಒಂದಾಗಬೇಕಾಗಿದೆ ಎಂದರು.
ಪಕ್ಷದ ತಾಲೂಕು ಅಧ್ಯಕ್ಷ ಸತೀಶ ಪಾಟೀಲ, ಬಾಬುರಾವ್ ಮದಕಟ್ಟಿ, ಅಮರನಾಥ ಪಾಟೀಲ, ಅಶೋಕ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಅರಿಹಂತ ಸಾವಳೆ, ಕಿರಣ ಪಾಟೀಲ, ಶರಣಪ್ಪ ಪಂಚಾಕ್ಷರೆ, ಸುನೀಲಕುಮಾರ ದೇಶಮುಖ, ಅನೀಲ ಗುಂಡಪ್ಪ,
ವಸಂತ ಬಿರಾದಾರ ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.