ವೈಭವದ ಗ್ರಾಮೀಣ ದಸರೆಗೆ ಸಾಂಸ್ಕೃತಿಕ ಮೆರಗು
ಬೆಳ್ಳಿ ರಥದಲ್ಲಿ ಅಲಂಕೃತ ಚಾಮುಂಡೇಶ್ವರಿ ಮೆರವಣಿಗೆ ಗಮನ ಸೆಳೆದ ಕಲಾತಂಡಗಳ ನೃತ್ಯ ಪ್ರದರ್ಶನ
Team Udayavani, Sep 28, 2019, 4:14 PM IST
ಪಿರಿಯಾಪಟ್ಟಣ: ಜಿಲ್ಲೆಯಲ್ಲೇ ಪ್ರಥಮವಾಗಿ ಚಾಲನೆ ಪಡೆದ ಪಿರಿಯಾಪಟ್ಟಣ ತಾಲೂಕು ಗ್ರಾಮೀಣ ದಸರಾ ಅದ್ಧೂರಿಯಾಗಿ ಜರುಗಿತು. ಪಟ್ಟಣದ ಕನ್ನಂಬಾಡಿ ಅಮ್ಮ ದೇವಾಲಯದ ಬಳಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಮಹದೇವ್ ಅವರು ಬೆಳ್ಳಿ ರಥದಲ್ಲಿ ಅಲಂಕೃತ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಂಬಾಡಿಯಮ್ಮ ದೇವಾಲಯ ಬಳಿಯಿಂದ ಬಿ.ಎಂ ರಸ್ತೆಯ ಮೂಲಕ ಗೋಣಿಕೊಪ್ಪ ರಸ್ತೆಯ ಜೂನಿಯರ್ ಕಾಲೇಜು ಮೈದಾನದವರೆಗೆ ಮೆರವಣಿಗೆ ಸಾಗಿತು.
ಮೆರವಣಿಗೆಯಲ್ಲಿ ಮಂಗಳವಾದ್ಯ, ಕೇರಳದ ಚಂಡೆ ಮದ್ದಳೆ, ನಗಾರಿ, ಕಂಸಾಳೆ ನೃತ್ಯ, ವೀರಗಾಸೆ, ಟಿಬೆಟನ್ ಸಾಂಪ್ರದಾಯಿಕ ನೃತ್ಯ, ಕೀಲುಕುದುರೆ, ಗೊರವನ ಕುಣಿತ, ಪೂಜಾಕುಣಿತ, ಹುಲಿವೇಷ, ಕೀಲು ಗೊಂಬೆ ಕುಣಿತ, ನಂದಿ ಧ್ವಜಕುಣಿತ ಪ್ರದರ್ಶನದೊಂದಿಗೆ ಮಹಿಳೆಯರಿಂದ ಪೂರ್ಣಕುಂಭ ಸೇರಿದಂತೆ ವಿವಿಧ ಕಲಾ ತಂಡಗಳು ಸಾಗಿದವು.
ಕೆಲವು ಕಲಾ ತಂಡಗಳು ವೇದಿಕೆಯಲ್ಲಿ ಸಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು. ಸರ್ಕಾರಿ ನೌಕರರು ಶಾಸಕ ಕೆ.ಮಹದೇವ್ ಸೂಚನೆಯಂತೆ ಶ್ವೇತ ವಸ್ತ್ರಧಾರಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ತಾಲೂಕಿನ ವಿವಿಧ ಗಿರಿಜನ ಶಾಲೆಯ ಮಕ್ಕಳು ಪ್ರದರ್ಶಿಸಿದ ಅರಣ್ಯ ಜನರ ನೃತ್ಯ ಕಾರ್ಯಕ್ರಮ ಆಕರ್ಷಣಿಯವಾಗಿತ್ತು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪಾ, ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ, ಜಿಪಂ ಸದಸ್ಯರಾದ ಕೆ.ಎಸ್.ಮಂಜುನಾಥ್, ರುದ್ರಮ್ಮ ನಾಗಯ್ಯ, ಮೈಮುಲ್ ನಿರ್ದೇಶಕ ಪಿ.ಎಂ. ಪ್ರಸನ್ನ, ಎಪಿಎಂಸಿ ಅಧ್ಯಕ್ಷ ರಾಜಯ್ಯ, ತಾಪಂ ಇಒ ಡಿ.ಸಿ.ಶ್ರುತಿ, ಸದಸ್ಯರಾದ ರಂಗಸ್ವಾಮಿ, ಟಿ.ಎನ್. ಪಂಕಜಾ, ಆರ್.ಎಸ್.ಮಹದೇವ್, ಮೋಹನ್ರಾಜ್, ಮಲ್ಲಿಕಾರ್ಜುನ್, ಶೋಭಾ, ಜಯಂತಿ, ಸುಮಿತ್ರಾ, ಪುರಸಭೆ ಸದಸ್ಯರು ಮುಖ್ಯಾಧಿಕಾರಿ ಚಂದ್ರಕುಮಾರ್
ಹಲವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.