ವಿದ್ಯಾರ್ಥಿನಿಯರಿಗೆ ಓದಲು ಸ್ಥಳಾಭಾವ
ರ್ಯಾಕ್ ಪಕ್ಕ, ನೆಲದ ಮೇಲೆ ಕುಳಿತು ಓದಬೇಕಾದ ಸ್ಥಿತಿಆಮೆಗತಿಯಲ್ಲಿ ಹೊಸ ಕಟ್ಟಡ ಕಾಮಗಾರಿ
Team Udayavani, Oct 19, 2019, 4:36 PM IST
ಸಿದ್ಧಯ್ಯ ಸ್ವಾಮಿ ಕುಕನೂರು
ರಾಯಚೂರು: ಸಹಸ್ರಾರು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವ ರಾಯಚೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಸ್ಥಳಾಭಾವದ್ದೆ ಸಮಸ್ಯೆ. ಗ್ರಂಥಾಲಯಕ್ಕೆ ನಿತ್ಯ ಬರುವ ಸಾಕಷ್ಟು ವಿದ್ಯಾರ್ಥಿನಿಯರಿಗೆ ಸ್ಥಳ ಸಿಗದೆ ನೆಲದ ಮೇಲೆ, ಉದ್ಯಾನವನದಲ್ಲಿ ಕುಳಿತು ಓದುವಂತ ಪರಿಸ್ಥಿತಿ ಇದೆ. ನಗರ ಕೇಂದ್ರ ಗ್ರಂಥಾಲಯಕ್ಕೆ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಓದಲು ಆಗಮಿಸುತ್ತಾರೆ.
ಅದರಲ್ಲೂ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಇದೇ ಅಧ್ಯಯನ ಕೇಂದ್ರ. ಆದರೆ, ಈಗಿರುವ ಕಟ್ಟಡ ತೀರ ಇಕ್ಕಟ್ಟಾಗಿದೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನಗಳೇ ಸಿಗುವುದಿಲ್ಲ. ಇನ್ನೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿದೆ ಆದರೂ ಅಲ್ಲಿ ಅಬ್ಬಬ್ಟಾ ಎಂದರೆ 20-30 ವಿದ್ಯಾರ್ಥಿಗಳು ಕೂಡಬಹುದಷ್ಟೇ. ಹೀಗಾಗಿ ಬಹುತೇಕ ವಿದ್ಯಾರ್ಥಿನಿಯರು ಅಧ್ಯಯನ ಮಾಡಲು ನೆಲದ ಮೇಲೆ, ರ್ಯಾಕ್‌ಗಳ ಮಧ್ಯ, ಇಲ್ಲವೇ ಹೊರಗಿನ ಉದ್ಯಾನದಲ್ಲೇ ಕೂಡಬೇಕಿದೆ. ಸಾಮಾನ್ಯ ದಿನಗಳಲ್ಲಿಯೇ ಈ ಸಮಸ್ಯೆಯಾದರೆ ಇನ್ನೂ ರಜಾ ದಿನಗಳಲ್ಲಂತೂ ಸ್ಥಿತಿ ಗಂಭೀರವಾಗಿರುತ್ತದೆ. ಕೆಲವೊಮ್ಮೆ ಸ್ಥಳ ಸಿಗದೆ ವಿದ್ಯಾರ್ಥಿಗಳು ಹಿಂದಿರುಗಿದ ನಿದರ್ಶನ ಕೂಡ ಸಾಕಷ್ಟಿವೆ.
ನಗರ ಕೇಂದ್ರ ಗ್ರಂಥಾಲಯ ಸೇರಿದಂತೆ ಎಲ್ಲ ನಗರ, ಪಟ್ಟಣಗಳಲ್ಲಿ 10200
ಸದಸ್ಯರಿದ್ದಾರೆ. ನಗರದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿದ್ದು, ಸಾಮಾನ್ಯ ಜನರೂ ಬರುವುದರಿಂದ ವಿದ್ಯಾರ್ಥಿಗಳಿಗೆ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.
ಗೋಡಾನ್ ಇಲ್ಲ: ಇದಕ್ಕೆ ಮುಖ್ಯ ಕಾರಣ ಪುಸ್ತಕಗಳ ಸಂಗ್ರಹಕ್ಕೆ ಪತ್ಯೇಕ ಗೋಡಾನ್ ಇಲ್ಲದಿರುವುದು. ಇದು ಕೇಂದ್ರ ಗ್ರಂಥಾಲಯವಾದ್ದರಿಂದ ಜಿಲ್ಲೆಗೆ ಸರಬರಾಜಾಗುವ ಎಲ್ಲ ಪುಸ್ತಕಗಳು ಇಲ್ಲಿಗೆ ಬರುತ್ತವೆ. ಅವುಗಳಲ್ಲಿ ಕೆಲವನ್ನು ಕೋಟೆ ಪಕ್ಕದ ವಾಚಾನಾಯಲದಲ್ಲಿ ಸಂಗ್ರಹಿಸಿದರೆ, ಬಹುತೇಕ ಪುಸ್ತಕಗಳನ್ನು ಇದೇ ಗ್ರಂಥಾಲಯದಲ್ಲಿಡಲಾಗುತ್ತಿದೆ. ಹೀಗಾಗಿ ಓದುಗರು ಮೂಟೆಗಳ ಪಕ್ಕದಲ್ಲೇ, ಸಂದಿ ಗೊಂದಿಗಳಲ್ಲೇ ಕುಳಿತು ಓದುವಂತಾಗಿದೆ. ಪ್ರತ್ಯೇಕ ಗೋಡಾನ್ ವ್ಯವಸ್ಥೆ ಕಲ್ಪಿಸಿದರೆ, ಇಲ್ಲಿ ಮೂಟೆಗಟ್ಟಿದ ಪುಸ್ತಕಗಳನ್ನೆಲ್ಲ ತೆರವು
ಮಾಡಬಹುದು. ಸ್ವತ್ಛಂದ ಗಾಳಿ ಬೆಳಕಿನಲ್ಲಿ ಓದಬಹುದು ಎನ್ನುತ್ತಾರೆ ವಿದ್ಯಾರ್ಥಿಗಳು.
ಕಟ್ಟಡ ಕಾಮಗಾರಿ ವಿಳಂಬ: ಈಗಿರುವ ಗ್ರಂಥಾಲಯ ಕಟ್ಟಡ ಪಕ್ಕದಲ್ಲೇ ಮತ್ತೊಂದು ಕಟ್ಟಡ ತಲೆಯೆತ್ತುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಳೆದ ಎರಡು ವರ್ಷಗಳ ಹಿಂದೆ 50 ಲಕ್ಷ ರೂ. ಮಂಜೂರಾಗಿದೆ. ಎರಡಂತಸ್ತಿನ ಕಟ್ಟಡ ಕೆಲಸ ನಡೆಯುತ್ತಿದೆ. ಆದರೆ, ಅದು ತ್ವರಿತಗತಿಯಲ್ಲಿ ಪೂರ್ಣಗೊಂಡರೆ ಈಗಿರುವ ಸ್ಥಳಾಭಾವವನ್ನು ಕೊಂಚ ಮಟ್ಟಿಗೆ ನಿವಾರಿಸಬಹುದು.
ಕೊಳಚೆ ಪ್ರದೇಶಗಳಲ್ಲಿಲ್ಲ ಕಟ್ಟಡ: ಇನ್ನೂ ನಗರದ ಜಿಲ್ಲೆಯಲ್ಲಿ ನಾಲ್ಕು ಕೊಳಚೆ ಪ್ರದೇಶಗಳಲ್ಲಿ ಗ್ರಂಥಾಲಯ ನಡೆಸಲಾಗುತ್ತಿದೆ. ನಗರದಲ್ಲಿ ಮೂರು, ಮಾನ್ವಿಯಲ್ಲಿ ಒಂದು ಗ್ರಂಥಾಲಯವಿದೆ. ಆದರೆ, ಎಲ್ಲಿಯೂ ಗ್ರಂಥಾಲಯಕ್ಕೆ ಸ್ವಂತ ಕಟ್ಟಡಗಳಿಲ್ಲ. ಈ ಕುರಿತು ನಗರಸಭೆ ಗಮನಕ್ಕೆ ತಂದಿದ್ದು ನಿವೇಶನ ಗುರುತಿಸುವ ಕೆಲಸವಾಗುತ್ತಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.