ಉಳ್ಳವರ ಜೇಬಲ್ಲಿ ಬಡವರ ಪಡಿತರ ಚೀಟಿ!
ನಕಲಿ ಪಡಿತರ ಚೀಟಿ ಪತ್ತೆಯದ್ದೇ ಸವಾಲು 6 ಸಾವಿರ ನಕಲಿ ಪಡಿತರ ಚೀಟಿ ರದ್ದು ಗಡುವು ನೀಡಿದರೂ ಸ್ವ-ಇಚ್ಛೆಯಿಂದ ಸಲ್ಲಿಸದ ಗ್ರಾಹಕರು
Team Udayavani, Oct 14, 2019, 11:54 AM IST
ರಾಯಚೂರು: ಪಡಿತರ ಚೀಟಿ ದುರ್ಬಳಕೆ ತಡೆಗೆ ಮುಂದಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಾಕಷ್ಟು ಸವಾಲುಗಳು ಎದುರಾಗಿದ್ದು, ಗ್ರಾಹಕರಿಂದ ಅಸಹಕಾರ ಹೆಚ್ಚಾಗಿದೆ.
ಈವರೆಗೆ ಜಿಲ್ಲೆಯಲ್ಲಿ 6 ಸಾವಿರ ಪಡಿತರ ಚೀಟಿಗಳನ್ನು ರದ್ದು ಮಾಡಿದ್ದು, ಸಾಕಷ್ಟು ಜನ ಸ್ವ ಇಚ್ಛೆಯಿಂದ ಸಲ್ಲಿಸುತ್ತಿಲ್ಲ. ಉಳ್ಳವರು, ಶ್ರೀಮಂತರು ಕೂಡ ಬಿಪಿಎಲ್ ಕಾರ್ಡ್‌ಗಳನ್ನು ಪಡೆಯುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಅಕ್ರಮ ತಡೆಯಲು ಮುಂದಾದ ಉಳ್ಳವರಿಗೆ ತಾವಾಗಿಯೇ ಬಂದು ಪಡಿತರ ಚೀಟಿ ಸಲ್ಲಿಸುವಂತೆ ತಿಳಿಸಿತ್ತು. ಆದರೆ, ಇಲಾಖೆ ಸೂಚನೆಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ.
ಕಾರ್ಡ್‌ಗಳನ್ನು ಸಲ್ಲಿಸುತ್ತಿಲ್ಲ. ಕೊನೆಗೆ ಇಲಾಖೆ ಅಧಿಕಾರಿಗಳೇ ಶೋಧ ಕಾರ್ಯಕ್ಕೆ ಮುಂದಾಗಿದ್ದು, ಕಂದಾಯ, ಆರ್‌ಟಿಒ ಇಲಾಖೆಗಳ ಸಹಾಯದೊಂದಿಗೆ ಈವರೆಗೆ 6 ಸಾವಿರ ಅಕ್ರಮ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ್ದಾರೆ.
ಆದಾಯ ತೆರಿಗೆ ಪಾವತಿಸುವವರು, ಐಷಾರಾಮಿ ವಾಹನ ಹೊಂದಿದವರು, ಹೆಚ್ಚು ಜಮೀನು ಹೊಂದಿದವರು, ಸರ್ಕಾರಿ ಹುದ್ದೆಯಲ್ಲಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು. ಹಾಗೆ ಪಡೆದಲ್ಲಿ ಕೂಡಲೇ ಸಲ್ಲಿಸುವಂತೆ ಗಡುವು ನೀಡಲಾಗಿತ್ತು. ಅಂಥ ಸಾಕಷ್ಟು ಪ್ರಕರಣಗಳಿದ್ದರೂ ಯಾರು ಕೂಡ ಸ್ವ ಇಚ್ಛೆಯಿಂದ ಬಂದು ಪಡಿತರ ಚೀಟಿ ಸಲ್ಲಿಸಿಲ್ಲ.
ಅಂಕಿ-ಸಂಖ್ಯೆ ಗೊಂದಲ: ಜಿಲ್ಲೆಯಲ್ಲಿ 4,01,217 ಬಿಪಿಎಲ್ ಕಾರ್ಡ್ದಾರರು, 44,982 ಅಂತ್ಯೋದಯ ಕಾರ್ಡ್‌ದಾರರಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದರೆ, ರಾಜ್ಯ ಸರ್ಕಾರ ಇನ್ನೆರಡು ಕೆಜಿ ಸೇರಿಸಿ ಒಟ್ಟು ಏಳು ಕೆಜಿ ಅಕ್ಕಿ ವಿತರಣೆ ಮಾಡುತ್ತಿದೆ.
ಆದರೆ, ಈ ಅಂಕಿ ಅಂಶಗಳು 2011ರ ಜನಗಣತಿ ಪ್ರಕಾರವಾಗಿದ್ದು, ಈಗ ಸಾಕಷ್ಟು ಹೊಸ ಕಾರ್ಡ್‌ದಾರರು ಹುಟ್ಟಿಕೊಂಡಿದ್ದಾರೆ. ಇನ್ನು
ಮನೆ ಮಾಲೀಕರಿಗೆ ಮಾತ್ರ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಕಷ್ಟು ಜನ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅದಕ್ಕೆ ಸೂಕ್ತ ದಾಖಲೆಗಳೇ ಇಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ದಾಖಲೆಗಳೇ ಸಿಗುತ್ತಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆ.
ಆಧಾರ್ ಲಿಂಕ್ ಕಡ್ಡಾಯ: ಈ ಸಮಸ್ಯೆ ಅರಿತ ಇಲಾಖೆ ಈಗ ಕಡ್ಡಾಯವಾಗಿ ಕುಟುಂಬ ಸದಸ್ಯರೆಲ್ಲರ ಆಧಾರ್ ಕಾರ್ಡ್ ಪಡೆಯುತ್ತಿದ್ದು, ಪಡಿತರ ಚೀಟಿಗೆ ಲಿಂಕ್ ಮಾಡುತ್ತಿದೆ. ಇದರಿಂದ ಯಾರ ಹೆಸರಿನಲ್ಲಿ ಏನೇನು ದಾಖಲೆಗಳಿವೆ ಎಂಬುದು ಗೊತ್ತಾಗಲಿದೆ. ಅಲ್ಲದೇ, ಬ್ಯಾಂಕ್ ಖಾತೆಗಳಿಗೂ ಆಧಾರ್ ಲಿಂಕ್ ಇರುವ ಕಾರಣ ಆದಾಯ ತೆರಿಗೆ ಪಾವತಿಸುವವರು ಸುಲಭಕ್ಕೆ ಸಿಕ್ಕಿ ಬೀಳಲಿದ್ದು, ಅಂಥವರ ಕಾರ್ಡ್‌ಗಳನ್ನು ರದ್ದು ಮಾಡಲು ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.