ಫಸಲ್ ಬಿಮಾ ಮಾಹಿತಿ ಕೊಡಿ
ಕೃಷಿ ಇಲಾಖೆ ಅಧಿಕಾರಿಗಳಿಗೆ ಕೊಪ್ಪಳ ಸಂಸದ ಕರಡಿ ನಿರ್ದೇಶನ
Team Udayavani, Nov 16, 2019, 1:14 PM IST
ರಾಯಚೂರು: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆವಿಮೆಗಾಗಿ ನೋಂದಾಯಿಸಿದ ರೈತರಿಗೆ ವಿಮೆ ಪಾವತಿ ಕುರಿತಂತೆ ರೈತ ಸಂಪರ್ಕ ಕೇಂದ್ರದಲ್ಲಿ ಸಮರ್ಪಕ ಮಾಹಿತಿ ಒದಗಿಸುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫಸಲ್ ಬಿಮಾ ಯೋಜನೆಯಡಿ 2018-19ರ ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ 5.40 ಕೋಟಿ ಪ್ರೀಮಿಯಮ್ ಪಾವತಿಸಿ 86,229 ರೈತರು ನೋಂದಾಯಿಸಿದ್ದರು.
ಅವರಲ್ಲಿ 52,205 ರೈತರಿಗೆ 132.44 ಕೋಟಿ ವಿಮೆ ಹಣ ಪಾವತಿಯಾಗಿದೆ. 2019-20ನೇ ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 1,31,506 ರೈತರು ಈವರೆಗೆ ನೋಂದಣಿ ಮಾಡಿದ್ದು, ಬೆಳೆ ವಿಮೆಗೆ ನೋಂದಾಯಿಸಲು ಮುಂಬರುವ ಡಿ.16ರವರೆಗೆ ಕಾಲಾವಕಾಶವಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ, 2018-19ನೇ ಸಾಲಿನಲ್ಲಿ ಒಟ್ಟಾರೆಯಾಗಿ 34,024 ರೈತರಿಗೆ ಬೆಳೆ ವಿಮೆ ಪಾವತಿಯಾಗಿಲ್ಲ, ಇದಕ್ಕೆ ಕಾರಣವೇನು? ಬೆಳೆ ವಿಮೆ ಪಾವತಿಸಿದರೂ ಪರಿಹಾರ ನೀಡದಿರುವ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.
ಇದಕ್ಕೆ ಉತ್ತರಿಸಿದ ಡಿಸಿ ಆರ್. ವೆಂಕಟೇಶ ಕುಮಾರ, ಬೆಳೆ ವಿಮೆ ಯೋಜನೆಯು ವಿವಿಧ ಮಾನದಂಡಗಳಿದ್ದು, ಅರ್ಹ ಫಲಾನುಭವಿಗಳಿಗೆ ಮಾತ್ರ ನೀಡಲಾಗುತ್ತಿದೆ ಎಂದರು.
ಈ ಕುರಿತು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡುವಂತೆ ಸಂಸದ ಸಂಗಣ್ಣ ತಿಳಿಸಿದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಲಾಭಗಳ ಕುರಿತು ರೈತರಿಗೆ ಮಾಹಿತಿ ನೀಡಬೇಕು. ನಗರದ ರೈಲು ನಿಲ್ದಾಣದಲ್ಲಿ ಗ್ರಾನೈಟ್ ಹಾಸು, ಪ್ಲಾಟ್‌ಫಾರಂಗಳಲ್ಲಿ ಶೌಚಗೃಹ ನಿರ್ಮಾಣ, ಟಿಕೆಟ್ ಬುಕಿಂಗ್ ಸೆಂಟರ್‌ಗಳ ನವೀಕರಣ, 26 ಕೋಚ್‌ಗಳ ರೈಲು ನಿಲ್ಲುವಷ್ಟು ಪ್ಲಾಟ್ ಫಾರಂ ಉದ್ದ, ಗಾರ್ಡನ್‌ನಲ್ಲಿ ವಾಟರ್ ಫೌಂಟೇನ್ ಸೇರಿ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಅದರ ಜತೆಗೆ ಮತ್ತೂಂದು ಟಿಕೆಟ್ ಕೌಂಟರ್ ಸ್ಥಾಪಿಸಬೇಕು, ಪ್ಲಾಟ್‌ಫಾರಂ ಬಳಿ ಲಿಫ್ಟ್ ನಿರ್ಮಿಸುವಂತೆ ಸೂಚಿಸಿದರು. ಡಿಜಿಟಲ್ ಇಂಡಿಯಾ ವಿಭಾಗದ ಅಧಿಕಾರಿ ಮಾತನಾಡಿ, ಜಿಲ್ಲೆಯ 185 ಗ್ರಾಪಂಗಳ ಪೈಕಿ 182ರಲ್ಲಿ ಆಪ್ಟಿಕಲ್ ಫೈಬರ್, ಬ್ರಾಡ್ ಬಾಂಡ್ ಸಂಪರ್ಕ ಕಲ್ಪಿಸಲಾಗಿದೆ. ದೇವದುರ್ಗ ತಾಲೂಕಿನ ಜಾಗಟಕಲ್, ಮಲ್ಲದೇವರಗುಡ್ಡ ಹಾಗೂ ಅಮರಾಪುರ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಅಳವಡಿಸಬೇಕಿದ್ದು, ಅಲ್ಲಿ ಕಟ್ಟಡ ಸಿಗುತ್ತಿಲ್ಲ ಎಂದರು. ಬೇರೆ ಕಟ್ಟಡ ಆಯ್ಕೆ ಮಾಡಿಕೊಳ್ಳುವಂತೆ ಸಂಸದರು ಸೂಚಿಸಿದರು.
ಸ್ವಚ್ಛ ಭಾರತ ಮಿಶನ್ ಯೋಜನೆಯಡಿ ಪ್ರತಿ ಪಂಚಾಯಿತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುತ್ತಿದ್ದು, 23 ಕಡೆ ನಿವೇಶನ ಸಿಕ್ಕಿದೆ ಎಂದು ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ ಸಭೆಗೆ ತಿಳಿಸಿದರು. ಉಳಿದ ಕಡೆ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸೂಕ್ತ ನಿವೇಶನ ಹುಡುಕುವಂತೆ ಪಿಡಿಒಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಎಡಿಸಿ ದುರಗೇಶ್, ಜಿಪಂ ಉಪ ಕಾರ್ಯದರ್ಶಿ ಯೂಸೂಫ್ ಖಾನ್ ಸೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.