ಸಾಧಕರ ಹಿಂದಿನ ಶಕ್ತಿ ಗುರು
Team Udayavani, Nov 11, 2019, 6:33 PM IST
ರಾಯಚೂರು: ಕಷ್ಟ ಕಾಲದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಿದ ಶಿಕ್ಷಕರ ಸೇವೆ ಎಷ್ಟು ವರ್ಣಿಸಿದರೂ ಕಡಿಮೆಯೇ. ಇಂದು ಯಾರು ಏನೇ ಸಾಧಿಸಿದರೂ ಅದರ ಹಿಂದಿನ ಶಕ್ತಿ ಶಿಕ್ಷಕರಾಗಿರುತ್ತಾರೆ ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲ ಹೇಳಿದರು.
ನಗರದ ನೀಲಕಂಠೇಶ್ವರ ಕಾಲೋನಿಯ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1997ರಿಂದ 2014 ರವರೆಗಿನ ಹಳೇ ವಿದ್ಯಾರ್ಥಿಗಳ ವೇದಿಕೆಯಿಂದ ರವಿವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಉನ್ನತ ಮಟ್ಟದ ಸಾಧನೆಗೆ ಶಿಕ್ಷಕರ ಶ್ರಮ ಮಹತ್ವದ್ದಾಗಿರುತ್ತದೆ. ಆ ಕಾಲದಲ್ಲಿ ಸಿಗುತ್ತಿದ್ದ ಕಡಿಮೆ ಸಂಬಳದಲ್ಲಿಯೇ ಮಕ್ಕಳಿಗೆ ಬೋಧಿಸಿದ ಶಿಕ್ಷಕರು ಅವರ ಭವಿಷ್ಯ ರೂಪಿಸುವಲ್ಲಿ ಸಾಕಷ್ಟು ಒತ್ತು ನೀಡಿರುತ್ತಾರೆ. ಯಾವ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಂಡಿರುತ್ತಾರೋ ಆ ವಿದ್ಯಾರ್ಥಿಗಳು ಗುರುಗಳನ್ನು ಸ್ಮರಿಸುವ ಮೂಲಕ ಇಂಥ ಕಾರ್ಯಕ್ರಮ ಮಾಡುತ್ತಾರೆ ಎಂದರು.
ಭೇದಭಾವ ಎಣಿಸದೆ ಎಲ್ಲರನ್ನು ಸಮನಾಗಿ ನೋಡುತ್ತಾರೆಂದರೆ ಅದು ಶಿಕ್ಷಕರು ಮಾತ್ರ. ಅವರಿಗೆ ತಮ್ಮ ಎಲ್ಲ ಶಿಷ್ಯರು ದೊಡ್ಡ ಸ್ಥಾನಕ್ಕೆ ಹೋಗಬೇಕು ಎಂದೇ ಆಸೆ ಪಡುತ್ತಾರೆ. ಕಣ್ಣಿಗೆ ಕಾಣುವ ದೇವರಿದ್ದಲ್ಲಿ ಅದು ಗುರುಗಳಲ್ಲದೇ ಬೇರಾರು ಅಲ್ಲ. ಇಂಥ ಹಿಂದುಳಿದ ಭಾಗದಲ್ಲಿ ಶಾಲೆ ಆರಂಭಿಸಿ ಮಕ್ಕಳ ಬೆಳವಣಿಗೆಗೆ ಕಾರಣವಾದ ಎನ್‌ಜಿಒ ಸಂಸ್ಥೆ ಕಾರ್ಯವೂ ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದಿನ ಕಾಲದಲ್ಲಿ ಗುರುಗಳು ದಂಡಿಸಿ ಕಲಿಸುತ್ತಿದ್ದರೆ ಮಕ್ಕಳಲ್ಲಿ ಕಲಿಯುವ ಶ್ರದ್ಧೆ ಹೆಚ್ಚುತ್ತಿತ್ತು. ಆದರೆ, ಇಂದು ಮಕ್ಕಳಿಗೆ ಯಾವ ಕೊರತೆ ಇಲ್ಲ. ಮಕ್ಕಳಲ್ಲಿ ಮೈಗಳ್ಳತನ ಹೆಚ್ಚಾಗಿದೆ. ವೈದ್ಯರಿಗೂ ಸವಾಲಾದ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಅದಕ್ಕೆ ನಮ್ಮ ಆಲಸ್ಯದ ಜೀವನವೇ ಕಾರಣ. ನಾವು ನಡೆದು ಬಂದ ದಾರಿ ಮರೆಯಬಾರದು ಎಂದರು.
ನಗರಸಭೆ ಸದಸ್ಯ ಎನ್.ಕೆ.ನಾಗರಾಜ, ಮುಖಂಡ ಕಡಗೋಲ್ ಆಂಜನೇಯ, ಬಿಇಒ ಚಂದ್ರಶೇಖರ ದೊಡ್ಡಮನಿ, ಸಂಘದ ಅಧ್ಯಕ್ಷ ನಾಗರೆಡ್ಡಿ ಹಂಚಿನಾಳ, ಉಪಾಧ್ಯಕ್ಷೆ ಗೀತಾರಾಣಿ, ಮಲ್ಲಣ್ಣ, ಜಿ.ತಿಮ್ಮಣ್ಣ, ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರ, ಸಂಗಯ್ಯ ಹಿರೇಮಠ, ಗುರುರಾಜ ಆಚಾರ್ಯ ಸೇರಿ ಅನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರೈಲು ಬಡಿದು ವ್ಯಕ್ತಿ ಸಾವು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.