ದಢೇಸುಗೂರು ಹೊಳೆಯಲ್ಲಿ ಮೊಸಳೆಗಳ ಹಿಂಡು

ನಿರಾಳಭಾವ ಮೂಡಿದ ಬೆನ್ನಲ್ಲೇ ಮೊಸಳೆ ಹಿಂಡು ಕಾಣಿಸಿಕೊಂಡು ಜನರನ್ನು ಭಯಭೀತಗೊಳಿಸಿದೆ.

Team Udayavani, Sep 6, 2021, 3:22 PM IST

ದಢೇಸುಗೂರು ಹೊಳೆಯಲ್ಲಿ ಮೊಸಳೆಗಳ ಹಿಂಡು

ಸಿಂಧನೂರು: ತಾಲೂಕಿನ ದಢೇಸುಗೂರು ತುಂಗಭದ್ರಾ ನದಿ(ಹೊಳೆ)ಯಲ್ಲಿ ಒಂದೋ, ಎರಡೋ ಮೊಸಳೆ ಕಾಣಿಸುವುದು ಸಾಮಾನ್ಯ. ಆದರೆ ರವಿವಾರ ಬರೋಬ್ಬರಿ 20ಕ್ಕೂ ಹೆಚ್ಚು ಮೊಸಳೆಗಳು ಕಂಡು ಬಂದಿವೆ. ಕಳೆದ ವರ್ಷ ತುಂಗಭದ್ರಾ ಪುಷ್ಕರ ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಿದ್ದ ಸ್ಥಳದ ಅನತಿ ದೂರದಲ್ಲೇ ಈ ಮೊಸಳೆಗಳ ಮೆರವಣಿಗೆ ಕಂಡು ಬಂದಿದೆ.

ದಢೇಸುಗೂರು ಸೇತುವೆ ಮೇಲೆ ಸಂಚರಿಸುತ್ತಿದ್ದ ಜನ ಕೆಲ ಹೊತ್ತು ನಿಂತು ವೀಕ್ಷಿಸಿ ಹೋಗಿದ್ದಾರೆ. ಹಲವರು ಈ ಮೊಸಳೆಗಳನ್ನು ಮೊಬೈಲ್‌ಗ‌ಳಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಜನರ ಗದ್ದಲ ಹೆಚ್ಚಾಗುತ್ತಿದ್ದಂತೆ ಮೊಸಳೆಗಳು ಬ್ರಿಡ್ಜ್ ಪ್ರದೇಶ ತೊರೆದು ನದಿಯ ಕೆಳಭಾಗಕ್ಕೆ ಪ್ರಯಾಣ ಬೆಳೆಸಿವೆ.

ಕಳೆದ ವರ್ಷ ಒಬ್ಬರು ಬಲಿ: ದಢೇಸುಗೂರು ಗ್ರಾಮಕ್ಕೆ ಹೊಂದಿಕೊಂಡಿರುವ ನದಿಗೆ ದೊಡ್ಡದಾದ ಸೇತುವೆ ಕಟ್ಟಲಾಗಿದೆ. ಈ ಪ್ರದೇಶಸ ಸುತ್ತಲೂ ಮೀನುಗಾರಿಕೆ ನಡೆಯುತ್ತದೆ. ಕಳೆದ ವರ್ಷವಷ್ಟೇ ನದಿ ಪಾತ್ರ ಸಮೀಪ ವ್ಯಕ್ತಿಯೊಬ್ಬರು ಮೊಸಳೆಗೆ ಬಲಿಯಾಗಿದ್ದರು. ಈ ಘಟನೆಯ ಬಳಿಕ ಭೀತಿ ಮೂಡಿತ್ತು. ಕೆಲ ದಿನಗಳ ನಂತರ ಸಹಜ ಸ್ಥಿತಿಗೆ ಮರಳಿದ ನಿರಾಳಭಾವ ಮೂಡಿದ ಬೆನ್ನಲ್ಲೇ ಮೊಸಳೆ ಹಿಂಡು ಕಾಣಿಸಿಕೊಂಡು ಜನರನ್ನು ಭಯಭೀತಗೊಳಿಸಿದೆ.

ಮುನ್ನೆಚ್ಚರಿಕೆಯೊಂದಿಗೆ ಪುಷ್ಕರ: ತಾಲೂಕು ಕಮ್ಮವಾರಿ ಸಂಘದ ವತಿಯಿಂದ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರವನ್ನು ದಢೇಸುಗೂರು ಬಳಿಯ ಶಿವ ದೇಗುಲ ಪಕ್ಕದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪುಣ್ಯಸ್ನಾನಕ್ಕೆ ಬರುವ ಜನರ ಭದ್ರತೆ ದೃಷ್ಟಿಯಿಂದ ನದಿಯಲ್ಲಿ ಕಬ್ಬಿಣ ಜಾಲರಿ ಅಳವಡಿಸಲಾಗಿತ್ತು. ಸೀಮಿತ ಪ್ರದೇಶದಲ್ಲಿ ಮಾತ್ರ ಸ್ನಾನಕ್ಕೆ ಅವಕಾಶ ನೀಡಲಾಗಿತ್ತು. ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಏನಾದರೂ ಅಚಾತುರ್ಯ ನಡೆದರೆ, ಅದನ್ನು ಪತ್ತೆ ಹಚ್ಚುವ ಉದ್ದೇಶದೊಂದಿಗೆ ಪೊಲೀಸ್‌ ಇಲಾಖೆ ಇಂತಹ ಮುನ್ನೆಚ್ಚರಿಕೆ ಕೈಗೊಂಡಿತ್ತು.

ನದಿ ತೊರೆದ ಮೀನುಗಾರರು: ಸಿರುಗುಪ್ಪ ಹಾಗೂ ಸಿಂಧನೂರು ಭಾಗದಲ್ಲಿ ಇಲ್ಲಿನ ಹೊಳೆ ಮೀನಿಗೆ ಹೆಚ್ಚಿನ ಬೇಡಿಕೆಯಿದೆ. ನೂರಾರು ಕುಟುಂಬಗಳು ಇಂದಿಗೂ ಮೀನುಗಾರಿಕೆಯನ್ನು ನೆಚ್ಚಿಕೊಂಡಿವೆ. ಈ ನಡುವೆ ಹೊಳೆಯಲ್ಲಿ 20ಕ್ಕೂ ಹೆಚ್ಚು ಮೊಸಳೆ ವಿಹರಿಸುತ್ತಿರುವುದನ್ನು ಕಂಡ ಬಳಿಕ ನದಿಗೆ ಇಳಿಯುವುದನ್ನು ಕೈ ಬಿಟ್ಟಿದ್ದಾರೆ. ಮೀನು ಹಿಡಿಯಲು ನದಿಗೆ ಇಳಿಯದಂತೆ ಗ್ರಾಪಂ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ನದಿ ಅಕ್ಕ-ಪಕ್ಕದಲ್ಲಿ ನೀರಾವರಿ ಕೃಷಿ ಜಮೀನು ಹೊಂದಿರುವ ರೈತರು ನದಿಪಾತ್ರದಲ್ಲಿಯೇ ಹೆಚ್ಚಾಗಿ ಸುತ್ತಾಡುತ್ತಾರೆ. ಭಾರಿ ಪ್ರಮಾಣದಲ್ಲಿ ಮೊಸಳೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಜನ ಕಂಗೆಡುವಂತಾಗಿದೆ.

ಟಾಪ್ ನ್ಯೂಸ್

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

accident2

Gangolli: ಸ್ಕೂಟರ್‌ – ಬೈಕ್‌ ಢಿಕ್ಕಿ; ಗಾಯ

ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Congress Session: ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.