![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 4, 2022, 5:56 PM IST
ಕಮಲನಗರ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಲ್ಲಮ ಪ್ರಭುಗಳು ತಮ್ಮ ಜ್ಞಾನ ಮತ್ತು ಅನುಭಾವದಿಂದ ಶೂನ್ಯ ಪೀಠದ ಅಧ್ಯಕ್ಷರಾಗಲು ಸಾಧ್ಯವಾಯಿತು. ಜ್ಞಾನ ಎಂಬುದು ಯಾರೊಬ್ಬರ ಸೊತ್ತಲ್ಲ. ಸಾಧನೆ, ಪರಿಶ್ರಮದಿಂದ ಯಾರು ಬೇಕಾದರೂ ಜ್ಞಾನ ಸಂಪಾದನೆ ಮಾಡಬಹುದು ಎಂದು ಭಾಲ್ಕಿಯ ಗುರುಬಸವ ಪಟ್ಟದ್ದೇವರು ನುಡಿದರು.
ಖೇಡ-ಸಂಗಮದ ನೀಲಾಂಬಿಕಾ ಆಶ್ರಮದಲ್ಲಿ ಹಿರೇಮಠ ಸಂಸ್ಥಾನ ಹಮ್ಮಿಕೊಂಡಿದ್ದ ಅಲ್ಲಮ ಪ್ರಭುದೇವರ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, ಅಲ್ಲಮಪ್ರಭುಗಳು ಮಹಾನ್ ದಾರ್ಶನಿಕರು. ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಮತ್ತು ಅವರ ನಡುವಿನ ಸಂವಾದ ಅಧ್ಯಾತ್ಮ ಜಗತ್ತಿನಲ್ಲಿಯೇ ಅಪರೂಪದ್ದು ಎಂದು ಹೇಳಿದರು.
ಬುದ್ಧ- ಬಸವಣ್ಣ ಮತ್ತು ಅಲ್ಲಮಪ್ರಭುಗಳು ಸಾರಿದ ತತ್ವಗಳ ಆಧಾರದ ಮೇಲೆಯೇ ನಮ್ಮ ಸಂವಿಧಾನ ರಚನೆಯಾಗಿದೆ. ಶರಣರ ಮೌಲ್ಯಗಳು ಹಾಗೂ ಸಂವಿಧಾನದ ಮೌಲ್ಯಗಳು ಸ್ವಾತಂತ್ರ್ಯ ಸಮಾನತೆ ವಿಶ್ವ ಬಂಧುತ್ವ ಸಾರುವ ಮೌಲ್ಯಗಳಾಗಿವೆ ಎಂದರು.
ಮಾತೆ ಮಹಾದೇವಮ್ಮತಾಯಿ, ಮಾತೆ ದೇವಮ್ಮ ತಾಯಿ, ಮಾತೆ ನೀಲಾಂಬಿಕಾ ತಾಯಿ, ಮಾತೆ ಶರಣಾಂಬಿಕಾ ತಾಯಿ ಸಮ್ಮುಖ ವಹಿಸಿದ್ದರು. ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಮುಳೆ ಕಾರ್ಯಕ್ರಮ ಉದ್ಘಾಟಿಸಿದರು.
ಡಾ| ಮಹೇಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ರಘುಶಂಖ ಭಾತಂಬ್ರಾ ಅವರಿಂದ “ಗುರು ಚನ್ನಬಸವರ ಮಾನಸ ಪುತ್ರ’ ಗ್ರಂಥ ಲೋಕಾರ್ಪಣೆಗೊಂಡಿತ್ತು. ವರ್ಷಾ ಓಂಪ್ರಕಾಶ ಬಿರಾದಾರ ಅವರಿಂದ ಬಸವಗುರು ಪೂಜೆ, ವೈಜಿನಾಥ ರಾಜಗೀರೆ ಅವರಿಂದ ಷಟ್ ಸ್ಥಲ ಧ್ವಜಾರೋಹಣ ನೆರವೇರಿತು. ಅಕ್ಕನ ಬಳಗದಿಂದ ಅಲ್ಲಮರ ತೊಟ್ಟಿಲು ಕಾರ್ಯಕ್ರಮ ಜರುಗಿತು.
ಪ್ರಶಾಂತ ಮಠಪತಿ, ಕಿರಣ ಪಾಟೀಲ, ರಾಮಶೆಟ್ಟಿ ಪನ್ನಾಳೆ, ಮಲ್ಲಿಕಾರ್ಜುನ ದಾನಾ, ವಿಶ್ವನಾಥಪ್ಪ ಬಿರಾದಾರ, ಮಹಾದೇವ ಮಡಿವಾಳ, ಸಂಜುಕುಮಾರ ಜುಮ್ಮಾ, ಸಿದ್ಧಯ್ಯ ಕಾವಡಿಮಠ ಇನ್ನಿತರರಿದ್ದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.