ನಟ ಚೇತನ್ ಬಂಧನ ಖಂಡಿಸಿ ನಿರಶನ
Team Udayavani, Feb 26, 2022, 2:09 PM IST
ಸಿಂಧನೂರು: ಸಾಮಾಜಿಕ ಕಾರ್ಯಕರ್ತ ಚೇತನ್ ಬಂಧನ ಖಂಡಿಸಿ, ಕೂಡಲೇ ಬಿಡುಗಡೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.
ಒಕ್ಕೂಟದ ಸಂಚಾಲಕ ನಾಗರಾಜ್ ಪೂಜಾರ್ ಮಾತನಾಡಿ, ಮನೆಯವರಿಗೆ ಮಾಹಿತಿ ಇಲ್ಲದಂತೆ, ಪೊಲೀಸರು ಏಕಾಏಕಿ ಚೇತನ್ ಅವರನ್ನು ಪೊಲೀಸರು ಬಂಧಿಸಿರುವುದು, ಪ್ರಜಾತ್ತಾತ್ಮಕ ಹಾಗೂ ಸಂವಿಧಾನದ ಆಶಯಗಳಡಿ ಮಾತನಾಡುವವರನ್ನು ಬಲವಂತವಾಗಿ ಬಾಯಿಮುಚ್ಚಿಸುವ ಕ್ರಮವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಕಿಡಿಕಾರಿದರು.
ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಮನುಜಮತ ಬಳಗದ ಡಿ.ಎಚ್. ಕಂಬಳಿ, ಸಿಐಟಿಯುನ ಶೇಕ್ಷಾಖಾದ್ರಿ, ಸಮುದಾಯ ಸಂಘಟನೆ ರಾಜ್ಯ ಕಾರ್ಯದರ್ಶಿ ದೇವೇಂದ್ರಗೌಡ, ಮನು ಜಮತ ಬಳಗದ ಬಸವರಾಜ ಬಾದರ್ಲಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸಮ್ಮದ್ ಚೌದ್ರಿ, ಚಿಟ್ಟಿಬಾಬು, ಚಾಂದ್‌ಪಾಷಾ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಡಾ| ವಸೀಮ್, ಸಮಾಜವಾದಿ ಕಾರ್ಮಿಕರ ಅಧ್ಯಯನ ಕೇಂದ್ರದ ಬಸವರಾಜ ಎಕ್ಕಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಹನುಮಂತ ಹಂಪನಾಳ, ಗುರು ರಾಜ ಮುಕ್ಕುಂದಾ, ಮಂಜುನಾಥ ಸಾಸಲಮರಿ, ಸಬ್ಜಾಲಿಸಾಬ, ಜನತಾಂತ್ರಿಕ ಗೆಳೆಯರ ಬಳಗದ ಬಸವರಾಜ ಹಸಮಕಲ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.