20 ತಿಂಗಳಿಗೊಮ್ಮೆ ಸಂಪುಟ ಪುನಾರಚಿಸಲಿ, ಹೊಸಬರಿಗೆ ಅವಕಾಶ ಸಿಗಲಿ: ಕೆ.ಶಿವನಗೌಡ ನಾಯಕ
Team Udayavani, Jan 13, 2021, 1:46 PM IST
ರಾಯಚೂರು: ಸಚಿವರಾಗಿ, ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಅನುಭವಿಸಿದವರನ್ನು ಬಿಟ್ಟು ಹೊಸಬರಿಗೂ ಅವಕಾಶ ನೀಡಲಿ. ಪ್ರತಿ 20 ತಿಂಗಳಿಗೊಮ್ಮೆ ಸಂಪುಟ ಪುನಾರಚಿಸಲಿ ಎಂದು ಸಚಿವ ಸ್ಥಾನಾಕಾಂಕ್ಷಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ತಿಂಗಳ ಬಳಿಕ ಉಪಮುಖ್ಯಮಂತ್ರಿ, ಸಚಿವರಾದವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಪ್ರದೇಶವಾರು, ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ಸಿಗಬೇಕು. ನನಗೆ ಮುಂದಿನ ದಿನಗಳಲ್ಲಿ ಸಚಿವರಾಗುವ ಭರವಸೆ ಇದೆ ಎಂದು ಮನದಿಂಗಿತ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಾರ್ಚ್- ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದ ಸಂಪುಟ ಪುನಾರಚನೆ: ಸಚಿವ ಜಾರಕಿಹೊಳಿ ಹೊಸಬಾಂಬ್
ಮಸ್ಕಿಯ ಪ್ರತಾಪಗೌಡರು ವಲಸೆ ಬಂದವರು ಅವರಿಗೆ ಸಚಿವ ಸ್ಥಾನ ನೀಡಬೇಕು. ಜತೆಗೆ ಹಿರಿತನವನ್ನು ಪರಿಗಣಿಸಬೇಕು. ನಾನು ಕೂಡ ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಮ್ಮನ್ನು ಪರಿಗಣಿಸಲಿ. ಈಗಿರುವ ಉಸ್ತುವಾರಿ ಸಚಿವರು ಅತಿಥಿಗಳಾಗಿದ್ದಾರೆ. ಸ್ಥಳೀಯರಿಗೆ ಉಸ್ತುವಾರಿ ನೀಡಲಿ ಎನ್ನುವುದು ಜನರ ಅಭಿಪ್ರಾಯ. ಮುಂದಿನ ದಿನಗಳಲ್ಲಿ ವರಿಷ್ಠರು ಎಲ್ಲಾ ಸರಿಪಡಿಸುವ ಭರವಸೆ ಇದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.