ನಾಲ್ಕು ವರ್ಷವಾದ್ರೂ ಅಲೆಮಾರಿಗಳಿಗಿಲ್ಲ ಸೂರು!
Team Udayavani, Jan 20, 2021, 3:29 PM IST
ದೇವದುರ್ಗ: ಬರೋಬ್ಬರಿ ನಾಲ್ಕು ವರ್ಷವಾದರೂ ಅಲೆಮಾರಿಗಳ ಸೂರಿನ ಕನಸು ಕನಸಾಗಿಯೇ ಉಳಿದಿದೆ. ಹೌದು, ಪಟ್ಟಣದ ಹೃದಯ ಭಾಗದ ಶಾಂತಿನಗರ ಮಾಳಗಡ್ಡೆಯಲ್ಲಿ ಜೀವನ ಸಾಗಿಸುತ್ತಿರುವ ಅಲೆಮಾರಿಗಳ ಬದುಕು ಅತಂತ್ರ ಸ್ಥಿತಿಯಲ್ಲಿದೆ. 250ಕ್ಕೂ ಹೆಚ್ಚು ಕುಟುಂಬಕ್ಕೆ ಮಾಜಿ ಸಂಸದ ಬಿ.ವಿ. ನಾಯಕ, ಶಾಸಕ ಕೆ. ಶಿವನಗೌಡ ನಾಯಕ ಹಕ್ಕುಪತ್ರ ವಿತರಿಸಿದ್ದಾರೆ.
ಮಾಳಗಡ್ಡೆಯಲ್ಲಿ ಬದುಕು ಸಾಗಿಸುವ ಅಲೆಮಾರಿಗಳಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿದೆ. ರಾಜೀವ್ ಗಾಂಧಿ ನಿಗಮದಿಂದ 2 ಲಕ್ಷ ರೂ. ಪರಿಶಿಷ್ಟ ಜಾತಿ ಅಲೆಮಾರಿ ಕೋಶ 2 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಪ್ರಧಾನಿ ಮಂತ್ರಿ ಆವಾಸ್ ಯೋಜನೆಯಿಂದ 1.50 ಲಕ್ಷ ಸೇರಿ ಒಂದು ಕುಟುಂಬಕ್ಕೆ 5.50 ಲಕ್ಷ ರೂ. ಮನೆ ನಿರ್ಮಾಣಕ್ಕೆ ಹಣ ನಿಗದಿ ಮಾಡಲಾಗಿದೆ.
ಅಲೆಮಾರಿ ಕೋಶ ನಿಗಮದಿಂದ ಅನುದಾನ ಬಿಟ್ಟರೆ ಉಳಿದ ನಿಗಮಗಳಿಂದ ಇಲ್ಲಿಯವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಸ್ವಂತ ಸೂರಿನ ಕನಸು ಕಾಣುತ್ತಿರುವ ಅಲೆಮಾರಿಗಳಿಗೆ ನಾಲ್ಕು ವರ್ಷದಿಂದ ಅದೃಷ್ಟದ ಬಾಗಿಲು ತೆರೆದಿಲ್ಲ.
ಇದನ್ನೂ ಓದಿ:ಗೊಂದಲದ ಗೂಡಾದ ಆಶ್ರಯದ ಅಕ್ರಮವಾಸ!
ಸಮತಟ್ಟು ಮಾಡಲು 25 ಲಕ್ಷ ರೂ: ಮಾಳಗಡ್ಡಿ ಪ್ರದೇಶದಲ್ಲಿ ಎರಡು ಎಕರೆ ಜಾಗೆಯಲ್ಲಿ ಮನೆ ನಿರ್ಮಿಸಲು ಈಗಾಗಲೇ 25 ಲಕ್ಷ ರೂ. ವೆಚ್ಚದಲ್ಲಿ ಮಾಳಗಡ್ಡೆ ಸಮತಟ್ಟು ಮಾಡಲಾಗಿದೆ. ರಾಜ್ಯ ಸರ್ಕಾರ ಅನುದಾನ ನೀಡಿದ್ದು, ಸಮತಟ್ಟು ಮಾಡುವ ಹೊಣೆ ಲ್ಯಾಂಡ್ ಆರ್ಮಿಗೆ ವಹಿಸಲಾಗಿತ್ತು. ಇಲ್ಲಿನ ನಿವೇಶನದಲ್ಲಿ ಅಲೆಮಾರಿಗಳಿಗೆ ಸೂರಿನ ಭಾಗ್ಯ ಎಂದು ಕೂಡಿ ಬರಲಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ.
ಅಲ್ಲದೇ ಭೂಮಿ ಸಮತಟ್ಟು ಅನುದಾನದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಕೂಗು ಕೇಳಿಬಂದಿದೆ. ಬದುಕೇ ಅತಂತ್ರ: ಮಾಳಗಡ್ಡೆ ಪ್ರದೇಶದಲ್ಲಿ ಕಳೆದ 30 ವರ್ಷಗಳಿಂದ 250ಕ್ಕೂ ಹೆಚ್ಚು ಅಲೆಮಾರ ಕುಟುಂಬಗಳು ಹರಕು, ಮುರುಕು, ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. ನಿವೇಶನ ಸಮತಟ್ಟು ಕೆಲಸದ ಹಿನ್ನೆಲೆ ಇದೀಗ ಖಾಸಗಿ ವ್ಯಕ್ತಿಗಳ ಜಾಗೆಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಕ್ಕುಪತ್ರಗಳನ್ನು ಕಾಯ್ದಿಟ್ಟುಕೊಳ್ಳುವಷ್ಟು ಸೂಕ್ತ ವ್ಯವಸ್ಥೆ ಇಲ್ಲದೇ ಚಳಿ, ಮಳೆ, ಗಾಳಿಗೆ ಸಿಲುಕಿ ಅತಂತ್ರ ಬದುಕು ಎದುರಿಸುತ್ತಿದ್ದಾರೆ. ವಿಷ ಜಂತುಗಳ ಭಯದಲ್ಲೇ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ ಅಲೆಮಾರಿಗಳು.
ವಿದ್ಯುತ್ ಸೌಲಭ್ಯವಿಲ್ಲ: ಅಲೆಮಾರಿ ಕುಟುಂಬಗಳಿಗೆ ಮನೆ ನಿರ್ಮಾಣವಾಗುವವರೆಗೂ ತಾತ್ಕಾಲಿಕವಾಗಿ ಎಲ್ಲೆಂದರಲ್ಲಿ ಖಾಸಗಿ ವ್ಯಕ್ತಿಗಳ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಿದ್ಯುತ್ ಸೌಲಭ್ಯವಿಲ್ಲದೇ ಕತ್ತಲಲ್ಲೇ ಬದುಕು ಸಾಗಿಸಬೇಕು. ವಾಸಿಸುವ ಪ್ರದೇಶದ ಸುತ್ತಲೂ ಅವ್ಯವಸ್ಥೆ ಇದೆ. ಭೂಮಿ ಸಮತಟ್ಟು ಕೆಲಸ ಅಲ್ಪಸ್ವಲ್ಪ ಬಾಕಿ ಉಳಿದಿದೆ ಎಂಬುವುದು ಗಮನಕ್ಕೆ ಬಂದಿದೆ. ನಿವೇಶನ ಪರಿಶೀಲಿಸಿದ ನಂತರ ಮನೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ.
ಈಶ್ವರಪ್ಪ ಕಟ್ಟಿಮನಿ, ಡಾ| ಬಿ.ಆರ್. ಅಂಬೇಡ್ಕರ್ ನಿಗಮ, ಜಿಲ್ಲಾ ವ್ಯವಸ್ಥಾಪಕ
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.